Netflix New Feature: ತನ್ನ ಬಳಕೆದಾರರಿಗೆ ಜಬರ್ದಸ್ತ್ ಉಡುಗೊರೆ ನೀಡಿದ Netflix

Netflix Updates - ಇಂದು ಹಲವಾರು ಜನರು OTT ವೇದಿಕೆಗಳ ಮೇಲಿನ ಕಂಟೆಂಟ್ ಅನ್ನು ಅನುಸರಿಸುತ್ತಿದ್ದಾರೆ ಮತ್ತು ಇದೆ ಸರಣಿಯಲ್ಲಿ ಅವರು Netflix ಅನ್ನೂ ಕೂಡ ಬಳಸುತ್ತಿರಬಹುದು. ಹೀಗಿರುವಾಗ Netflix ಇತ್ತೀಚಿಗೆ ಹಲವು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ್ದು, ಅವುಗಳ ಕುರಿತು ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. 

Written by - Nitin Tabib | Last Updated : Oct 5, 2021, 05:56 PM IST
  • Netflix ವೈಶಿಷ್ಟ್ಯಗಳ ಕುರಿತು ನಿಮಗೆಷ್ಟು ತಿಳಿದಿದೆ.
  • ಇದರಲ್ಲಿ ಸ್ವಯಂಚಾಲಿತವಾಗಿ ಶೋ ಹಾಗೂ ಮೂವಿ ಡೌನ್ಲೋಡ್ ಆಗಲಿವೆ.
  • Netflix ನಲ್ಲಿ ನೀವು ನಿಮ್ಮ ಮೊಬೈಲ್ ಡೇಟಾ ಕೂಡ ಉಳಿತಾಯ ಮಾಡಬಹುದು.
Netflix New Feature: ತನ್ನ ಬಳಕೆದಾರರಿಗೆ ಜಬರ್ದಸ್ತ್ ಉಡುಗೊರೆ ನೀಡಿದ Netflix title=
Netflix New Features (File Photo)

ನವದೆಹಲಿ: Netflix Tips - ಇತ್ತೀಚಿಗೆ ಜನರು OTT ವೇದಿಕೆಗಳ ಮೇಲೆ ಬಿತ್ತರಗೊಳ್ಳುವ  ವಿಷಯಗಳನ್ನು ತುಂಬಾ ಇಷ್ಟಪಡುತಿದ್ದಾರೆ.  ನಾವು ಪ್ರಪಂಚದಲ್ಲಿ ಎಲ್ಲಿಯಾದರೂ OTT ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಮಾತನಾಡಿದರೆ, ಬಹುಶಃ ಎಲ್ಲರ ಬಾಯಿಂದ ಬರುವ ಮೊದಲ ಹೆಸರು Netflix. ಹೀಗಿರುವಾಗ ನಾವು Netflix ಬಳಕೆದಾರರಿಗೆ ಒಂದು ಒಳ್ಳೆಯ ಸುದ್ದಿಯನ್ನು ತಂದಿದ್ದೇವೆ. Netflix ಇತ್ತೀಚೆಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ.  ಇತ್ತೀಚಿಗೆ ನೆಟ್ ಫ್ಲಿಕ್ಸ್ ತನ್ನ ವೇದಿಕೆಯಲ್ಲಿ ಹಲವು ಟೂಲ್ ಗಳನ್ನು ಸೇರಿಸಿದೆ. ಆ ಟೂಲ್ ಗಳು (Netflix Tips) ಯಾವವು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ.

'Download For You' ಟೂಲ್ 
ನೆಟ್ ಫ್ಲಿಕ್ಸ್ ನ ಈ ವೈಶಿಷ್ಟ್ಯ ನಿಮಗೂ ಇಷ್ಟವಾಗಬಹುದು. ಈ ವೈಶಿಷ್ಟ್ಯ ನಿಮ್ಮ ಆಸಕ್ತಿಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ಚಲನಚಿತ್ರಗಳನ್ನೂ ಹಾಗೂ ಟಿವಿ ಷೋಗಳನ್ನೂ ಡೌನ್ ಲೋಡ್ ಮಾಡುತ್ತದೆ. ಈ ರೀತಿ ನೀವು ಇಷ್ಟಪಡುವ ಕಂಟೆಂಟ್ ಸ್ವಯಂಚಾಲಿತವಾಗಿ ಡೌನ್ ಲೋಡ್ ಆಗಿ ನಿಮ್ಮ ಲೈಬ್ರರಿ ಸೇರಲಿದೆ. ಆದರೆ, ಈ ವಿಶಿಷ್ಟ ಕೇವಲ ವೈ-ಫೈ ಮೇಲೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.

'Play Something' ವೈಶಿಷ್ಟ್ಯ
ನಿಮಗೆ ತೀರಾ ಬೇಸರವಾದಾಗ ಮತ್ತು ಯಾವ ಚಲನಚಿತ್ರ ಅಥವಾ ಷೋ ನೀವು ನೋಡಬೇಕು ಎಂಬುದು ನಿಮಗೆ ತೋಚದೆ ಇದ್ದ ಪರಿಸ್ಥಿತಿಯಲ್ಲಿ ನೀವು ಈ ವೈಶಿಷ್ಟ್ಯವನ್ನು ಬಳಸಬಹುದು. ಪ್ಲೇ ಸಮ್ಥಿಂಗ್ ಸಹಾಯದಿಂದ, ನೆಟ್‌ಫ್ಲಿಕ್ಸ್ ನೀವು ಸಾಮಾನ್ಯವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ನೋಡುವ ಕಂಟೆಂಟ್‌ಗೆ ಹೋಲುವ ಯಾವುದೇ ಷೋ ಅಥವಾ ಚಲನಚಿತ್ರವನ್ನು ಪ್ಲೇ ಮಾಡುತ್ತದೆ. ಈ ವೈಶಿಷ್ಟ್ಯವು ನೆಟ್ಫ್ಲಿಕ್ಸ್ ನ ಮೊಬೈಲ್ ಆಪ್ (Netflix App) ಮತ್ತು ಟಿವಿ ಎರಡರಲ್ಲೂ ಲಭ್ಯವಿದೆ.

'Netflix Smart Downloads'
ನೀವು ನೆಟ್‌ಫ್ಲಿಕ್ಸ್‌ನಲ್ಲಿ ಯಾವುದಾದರೊಂದು ವೆಬ್ ಸಿರೀಸ್ ಸರಣಿಯನ್ನು ನೋಡುತ್ತಿದ್ದರೆ ಮತ್ತು ನೀವು ಎಲ್ಲಾ ಎಪಿಸೋಡ್‌ಗಳನ್ನು ಡೌನ್‌ಲೋಡ್ ಮಾಡಿರದಿದ್ದರೆ, ಈ ವೈಶಿಷ್ಟ್ಯವು ನಿಮಗೆ ಹೆಚ್ಚು ಉಪಯೋಗನೀಡಲಿದೆ ಸ್ಮಾರ್ಟ್ ಡೌನ್‌ಲೋಡ್‌ಗಳ ಸಹಾಯದಿಂದ, ನೆಟ್‌ಫ್ಲಿಕ್ಸ್ ನೀವು ನೋಡಿದ ಎಲ್ಲಾ ಎಪಿಸೋಡ್‌ಗಳನ್ನು ಅಳಿಸುತ್ತದೆ ಮತ್ತು ನಂತರದ ಎಪಿಸೋಡ್‌ಗಳನ್ನು ಅವುಗಳ ಜಾಗದಲ್ಲಿ ಡೌನ್‌ಲೋಡ್ ಮಾಡುತ್ತದೆ ಇದರಿಂದ ನೀವು ನಿಮ್ಮ ಸರಣಿಯನ್ನು ಆರಾಮವಾಗಿ ವೀಕ್ಷಿಸಬಹುದು. ಈ ವೈಶಿಷ್ಟ್ಯವು ವೈಫೈನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ, ಮೊಬೈಲ್ ಡೇಟಾದಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಕಷ್ಟಮೈಸ್ದ್ ಸಬ್ ಟೈಟಲ್
ನೀವು ನಿಮಗೆ ಗೊತ್ತಿಲ್ಲದ ಭಾಷೆಯೊಂದರಲ್ಲಿ ಶೋ ಅಥವಾ ಚಲನಚಿತ್ರವನ್ನು ನೋಡುತ್ತಿದ್ದರೆಮಾತು ಅದಕ್ಕಾಗಿ ನೀವು ಉಪಶೀರ್ಷಿಕೆಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರೆ, ಆ ಉಪಶೀರ್ಷಿಕೆಗಳ ಪಠ್ಯದ ಫಾಂಟ್, ಬಣ್ಣ ಮತ್ತು ಗಾತ್ರವನ್ನು ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಬದಲಾಯಿಸಬಹುದು. ಇದನ್ನು ಮಾಡಲು, ನಿಮ್ಮ ನೆಟ್‌ಫ್ಲಿಕ್ಸ್ ಆಪ್‌ನ ಖಾತೆ ಸೆಟ್ಟಿಂಗ್‌ಗಳಿಗೆ ಹೋಗಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಪ್ರೊಫೈಲ್‌ಗಳು' ವಿಭಾಗವನ್ನು ಆಯ್ಕೆ ಮಾಡಿ ಮತ್ತು ನಂತರ 'ಉಪಶೀರ್ಷಿಕೆ ಗೋಚರತೆ' ಗೆ ಹೋಗಿ ಮತ್ತು ಅದಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿ.

ಇದನ್ನೂ ಓದಿ-ಒಂದು ವೇಳೆ ಹೀಗೆ ಮಾಡದೆ ಹೋದರೆ Netflix,DTH ಮತ್ತು ಇತರ ಸೇವೆಗಳು ಸ್ಥಗಿತ...!

Netflix ಮೇಲೆ ನೀವು ಈ ರೀತಿ ಡೇಟಾ ಉಳಿತಾಯ ಮಾಡಬಹುದು
ಯಾವುದೇ ವೇದಿಕೆಯಲ್ಲಿ ಷೋ ಅಥವಾ ಚಲನಚಿತ್ರವನ್ನು ನೋಡುವುದು ಎಂದರೆ ಹೆಚ್ಚಿನ ಡೇಟಾ ಖರ್ಚಾಗುತ್ತದೆ. . ನೀವು ವೈಫೈ ಬಳಸುತ್ತಿದ್ದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆದರೆ ನೀವು ಮೊಬೈಲ್ ಡೇಟಾ ಬಳಸುತ್ತಿದ್ದರೆ ಈ ಟ್ರಿಕ್ ನಿಮಗೆ ಸೂಕ್ತವಾಗಿರುತ್ತದೆ. ನೆಟ್ಫ್ಲಿಕ್ಸ್ ನೋಡುವಾಗ ನಿಮ್ಮ ಮೊಬೈಲ್ ಡೇಟಾವನ್ನು ಉಳಿಸಲು, ನೀವು ಆಪ್ ನ ಸೆಟ್ಟಿಂಗ್ಸ್ ಗೆ ಹೋಗಿ ಮತ್ತು 'ಡೇಟಾ ಸೇವರ್' ಫೀಚರ್ ಅನ್ನು ಆನ್ ಮಾಡಬಹುದು, ನಂತರ ನೆಟ್ಫ್ಲಿಕ್ಸ್ ನಿಮ್ಮ ಚಿತ್ರದ ಗುಣಮಟ್ಟ ಮತ್ತು ಡೇಟಾ ಬಳಕೆಯನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುತ್ತದೆ.

ಇದನ್ನೂ ಓದಿ-Jio ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ Netflix, Amazon Prime, Disney+ Hotstar ಚಂದಾದಾರಿಕೆ

ನಿಮ್ಮ ನೆಟ್‌ಫ್ಲಿಕ್ಸ್ ವೀಕ್ಷಣೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ನೆಟ್‌ಫ್ಲಿಕ್ಸ್ ಬಳಸುವಾಗ ನೀವು ನೆನಪಿನಲ್ಲಿಡಬಹುದಾದ ಈ  ಕೆಲವು ವೈಶಿಷ್ಟ್ಯಗಳು ಮತ್ತು ತಂತ್ರಗಳಾಗಿವೆ.

ಇದನ್ನೂ ಓದಿ-Netflix ಅನ್ನು ಒಂದು ವರ್ಷ ಉಚಿತವಾಗಿ ವೀಕ್ಷಿಸಬಹುದು : ಹೇಗೆ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News