ನೈಸ್ ರೋಡ್ ಸಿನಿಮಾಗೆ ಕಂಟಕ...‌ ನಿರ್ಮಾಪಕರಿಗೆ ಬಂತು ನೋಟಿಸ್!

Nice Road Movie Updates : ನೈಸ್ ರೋಡ್ ಕನ್ನಡ ಸಿನಿಮಾಗೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ.

Written by - YASHODHA POOJARI | Last Updated : Jul 30, 2024, 03:51 PM IST
  • ನೈಸ್ ರೋಡ್ ಸಿನಿಮಾ
  • ನೈಸ್ ರೋಡ್ ಗೆ ಕಂಟಕ
  • ನಿರ್ಮಾಪಕರಿಗೆ ಬಂತು ನೋಟಿಸ್!
ನೈಸ್ ರೋಡ್ ಸಿನಿಮಾಗೆ ಕಂಟಕ...‌ ನಿರ್ಮಾಪಕರಿಗೆ ಬಂತು ನೋಟಿಸ್! title=

Nice Road Movie Updates : ನೈಸ್ ರೋಡ್ ಕನ್ನಡ ಸಿನಿಮಾಗೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ. ನೈಸ್ ರೋಡ್ ಎಂಬ ಹೆಸರನ್ನು ಬದಲಾಯಿಸದೆ ಇದ್ದರೆ ಕಂಪ್ಲೇಂಟ್ ಕೊಡುವುದಾಗಿ ಈ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

ಸಿನಿಮಾ ಈಗ ರಿಲೀಸ್ ಹಂತಕ್ಕೆ ಬಂದಿದ್ದು ಏಲ್ಲಾ ಕಡೆ ನೈಸ್ ರೋಡ್ ಎಂಬ ಹೆಸರಿನಿಂದನೆ ಪ್ರಚಾರವಾಗಿದೆ ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚುವೆಚ್ಚಗಳಾಗುವುದು ಅಲ್ಲದೆ ತುಂಬಾ ಸಮಯವು ಬೇಕಾಗುತ್ತದೆ.

ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು ಸಿನಿಮಾ ಚಿತ್ರೀಕರಣ ಮುಗಿಸಿ ಈಗಾಗಲೇ ಸಿನಿಮಾ ಸೆನ್ಸಾರ್ ಆಗಿದ್ದು ಸೆನ್ಸಾರ್ ಮಂಡಳಿಯು ಕೂಡ ಸಿನಿಮಾ ನೋಡಿ ನೈಸ್ ರೋಡಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಧರಿಸಿ U/A ಪ್ರಮಾಣ ಪತ್ರ ಕೊಟ್ಟಿದಾರೆ.

ಇದನ್ನೂ ಓದಿ:Janhvi Kapoor: "ನಾನು ಅಭಿಷೇಕ್ ಬಚ್ಚನ್ ಮೊದಲ ಪತ್ನಿ" ಎಂದ ನಟಿ ಜಾನ್ವಿ ಕಪೂರ್...‌ ಬಚ್ಚನ್ ನಿವಾಸದ ಎದುರು ಬಿಗ್‌ ಹಂಗಾಮ!

ಆದರೆ ಈಗ ನೈಸ್ ರೋಡ್ ಕಂಪನಿಯವರು ಏಕಏಕಿ ಬಂದು ಹೆಸರು ಬದಲಾಯಿಸಲೇ ಬೇಕೆಂದು ನೋಟೀಸ್ ನೀಡಿದ್ದಾರೆ.ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಗೋಪಾಲ್ ಹಳೆಪಾಳ್ಯ ಅವರು.. ಈ ಸಿನಿಮಾಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ  ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ.

ಮುಂದೆ ಸಿನಿಮಾತಂಡದವರು ಹೆಸರು ಬದಲಾಯಿಸುತ್ತಾರೋ ಇಲ್ಲ ಇದೆ ಹೆಸರಿನಲ್ಲೆ ಸಿನಿಮಾ ಬಿಡುಗಡೆ ಮಾಡೊತರೋ ಕಾದು ನೋಡಬೇಕಿದೆ.

ಇದನ್ನೂ ಓದಿ: ನಟಿ ದೀಪಿಕಾ ಪಡುಕೋಣೆ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News