Nikhil Kumaraswamy New Movie : ರೈಡರ್ ಚಿತ್ರದ ನಂತ್ರ ಯುವರಾಜ ನಿಖಿಲ್ ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದಾರೆ.. ಮಧ್ಯದಲ್ಲಿ ಯಧುವೀರ ಎಂಬ ಪವರ್ ಫುಲ್ ಟೈಟಲ್ನಲ್ಲಿ ಸಿನಿಮಾ ಅನೌನ್ಸ್ ಆದ್ರು..ಅನೌನ್ಸ್ ಮಾಡಿದ ಸ್ಪೀಡ್ನಲ್ಲೇ ಸಿನಿಮಾ ಸೆಟ್ಟೇರೋಕು ಮುನ್ನ ಕ್ಯಾನ್ಸಲ್ ಆಗಿದೆ. ಯಧುವೀರ ಕ್ಯಾನ್ಸಲ್ ಆದ್ಮೇಲೆ ನಿಖಿಲ್ ಸೈಲೆಂಟ್ ಆಗಿ ತೆರೆ ಮರೆಯಲ್ಲಿ ಸ್ಟಾರ್ ಪ್ರೊಡಕ್ಷನ್ ಹೌಸ್ನಲ್ಲಿ ಬಿಗ್ ಪ್ರಾಜೆಕ್ಟ್ನಲ್ಲಿ ಬಿಗ್ ಸ್ಟಾರ್ ಜೊತೆ ಮಾಸ್ ಚಿತ್ರಕ್ಕೆ ಸಜ್ಜಾಗ್ತಿದ್ದಾರೆ.. ಹಾಗಾದ್ರೆ ನಿಖಿಲ್ ಅದ್ಯಾವ ಹೀರೋ ಜೊತೆ.. ಅದ್ಯಾವ ಪ್ರೊಡಕ್ಷನ್ ಹೌಸ್ನಲ್ಲಿ ಹೊಸ ಚಿತ್ರಕ್ಕೆ ರೆಡಿಯಾಗ್ತಿದ್ದಾರೆ ಅಂತೀರಾ? ಈ ಕೆಳಗಿದೆ ಓದಿ...
ನಿಖಿಲ್ ಕುಮಾರ್ಸ್ವಾಮಿ ತಂದೆಯಂತೆ ರಾಜಕೀಯ ಮತ್ತು ಸಿನಿಮಾ ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.. ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿ ಸಯ ಅನಿಸದಿಕೊಂಡಿರುವ ನಿಖಿಲ್, ಸದ್ದಿಲ್ಲದೆ ತಮ್ಮ ಐದನೇ ಚಿತ್ರಕ್ಕೆ ತಯಾರಿ ಮಾಡ್ಕೊಂಡಿದ್ದಾರೆ.. ಸದ್ಯ ರಾಜಕೀಯದಲ್ಲಿ ಕಳೆದೋಗಿರುವ ನಿಖಿಲ್ ಮತ್ತೆ ಸಿನಿಮಾಗೆ ಬರ್ತಾರ ಇಲ್ವಾ ಅನ್ನೋ ಡೌಟ್ ಅವರ ಅಭಿಮಾನಿಗಳಲ್ಲಿತ್ತು.. ಅದ್ರೆ ರಾಜಕೀಯದ ಜೊತೆ ಸಿನಿಮಾನೂ ಮಾಡೊಕೆ ನಿಖಿಲ್ ಪ್ಲಾನ್ ಮಾಡಿದ್ದು. ಕಾಲಿವುಡ್ನ ಸ್ಟಾರ್ ಪ್ರೊಡಕ್ಷನ್ ಹೌಸ್ನಲ್ಲಿ ಮುಂದಿನ ಸಿನಿಮಾ ಮಾಡಲು ಜಾಗ್ವಾರ್ ನಿಖಿಲ್ ಸಿದ್ದರಾಗಿದ್ದಾರೆ.
ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಗಡ್ಡ ಬಿಟ್ಟಿರೋದು ಯಾಕೆ ಗೊತ್ತಾ..?
ಯೆಸ್.. ನಿಖಿಲ್ ತಮ್ಮ 5ನೇ ಚಿತ್ರವನ್ನು ಲೈಕಾ ಪ್ರೋಡಕದ್ಷನ್ ಹೌಸ್ನಲ್ಲಿ ಮಾಡೋದು ಕನ್ಫರ್ಮ್ ಆಗಿದೆ.. ಎಲ್ಲಾ ಅಂದು ಕೊಂಡಂತೆ ಆಗಿದ್ರೆ ನಿಖಿಲ್ ತಮ್ಮ 5ನೇ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ನಲ್ಲಿ ಯಧುವೀರ ಅವತಾರದಲ್ಲಿ ಕಾಣಿಸಬೇಕಿತ್ತು.. ಅದ್ರೆ ಯಧುವೀರ ಕಾರಣಾಂತದಿಂದ ಕ್ಯಾನ್ಸಲ್ ಆಗಿದ್ದು, ಈಗ ಯಧುವೀರ ಜಾಗಕ್ಕೆ ಲೈಕಾ ಪ್ರೊಡಕ್ಷನ್ನಲ್ಲಿ ತಮ್ಮ ಐದನೇ ಚಿತ್ರವನ್ನು ಮಾಡಲಿದ್ದಾರೆ ನಿಖಿಲ್ ಕುಮಾರ್.
ಇನ್ನು ಲೈಕಾದಲ್ಲಿ ನಿಖಿಲ್ ಸಿನಿಮಾ ಮಾಡೋದು ಹೊಸ ವಿಚಾರವೇನಲ್ಲ.. ಸೀತಾರಾಮ ಕಲ್ಯಾಣ ಚಿತ್ರದ ನಂತ್ರ ನಿಖಿಲ್ ಲೈಕಾ ಪ್ರೊಡಕ್ಷನ್ನಲ್ಲಿ ಸಿನಿಮಾ ಮಾಡೋದಾಗಿ ಹೇಳಿದ್ರು.. ಈ ಗ್ಯಾಫ್ನಲ್ಲಿ ನಿಖಿಲ್ ಲಹರಿ ಜೊತೆ ಟೈಯಪ್ ಆಗಿ ರೈಡರ್ ಚಿತ್ರ ಮಾಡಿದ್ರು.. ಅದ್ರೆ ಈಗ ಯಧುವೀರ ಬೈಬಿಟ್ಟ ನಂತ್ರ ಲೈಕಾದಲ್ಲಿ ಸಿನಿಮಾ ಮಾಡೋಕೆ ನಿಖಿಲ್ ಮುಂದಾಗಿದ್ದಾರೆ.. ಅಲ್ಲದೆ ನಿಖಿಲ್ ಮ್ಯಾನರಿಸಂಗೆ ಹೊಂದುವಂತ ಕತೆ ಕೂಡ ರೆಡಿ ಮಾಡಿಸ್ತಿದೆ ಲೈಕಾ ಪ್ರೊಡಕ್ಷನ್.
ಯೆಸ್.. ನಿಖಿಲ್ ಐದನೇ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ ಭರ್ಜರಿ ಪ್ಲಾನ್ ಮಾಡ್ತಿದೆ.. ಕಾಲಿವುಡ್ನ ಯುವ ಪ್ರತಿಭೆ ಲಕ್ಷ್ಮಣ್ ಎಂಬುವವರು ನಿಖಿಲ್ ಸಿನಿಮಾಗೆ ಪವರ್ ಫುಲ್ ಕಂಟೆಂಟ್ ರೆಡಿ ಮಾಡ್ತಿದ್ದು, ಕತೆ ಫೈನಲ್ ಆಗ್ತಿದಂತೆ ಡೈರೆಕ್ಟರ್ನ ಫಿಕ್ಸ್ ಮಾಡ್ಕೊಂಡ್ ನಿಖಿಲ್ ಚಿತ್ರವನ್ನು ಅನೌನ್ಸ್ ಮಾಡಲು ಲೈಕಾ ಪ್ರೊಡಕ್ಷನ್ ಸಲಕಲ ಸಿದ್ದತೆ ಮಾಡಿಕೊಳ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ..ಅಲ್ಲದೆ ನಿಖಿಲ್ ಅಭಿನಯದ ಈ ಚಿತ್ರದಲ್ಲಿ ಸ್ಯಾಂಡಲ್ವುಡ್ನ ಬಿಗ್ ಸ್ಟಾರ್ನ ಕರೆತಂದು ನಿಖಿಲ್ ಜೊತೆ ನಿಲ್ಲಿಸೋಕೆ ಲೈಕಾ ಪಕ್ಕಾ ಪ್ಲಾನ್ ಮಾಡಿಕೊಂಡಿದೆ.
ಹೌದು.. ಲೈಕಾ ಪ್ರೊಡಕ್ಷನ್ನಲ್ಲಿ ಮೂಡಿಬರಲಿರುವ ನಿಖಿಲ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ ನಟಿಸುವುದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ಉಪ್ಪಿ ಜೊತೆ ಮಾತನಾಡಿರುವ ಲೈಕಾ ಪ್ರೊಡಕ್ಷನ್, ನಿಖಿಲ್ ಹಾಗೂ ಉಪ್ಪಿ ಕಾಂಬೋದಲ್ಲಿ ಬಿಗ್ ಪ್ರಾಜೆಕ್ಟ್ ಮಾಡುವುದು ಬಹುತೇಕ ಫೈನಲ್ ಆಗಿದೆ. ಇನ್ನು ಈ ಹಿಂದೆ ನಿಖಿಲ್ ಜೊತೆ ಶಿವಣ್ಣ ಕಾಣಿಸ್ತಾರೆ ಆನ್ನೋ ವಿಚಾರ ಸೌಂಡ್ ಮಾಡಿತ್ತು. ಆದ್ರೆ, ನಿಖಿಲ್ ಜೊತೆ ಶಿವಣ್ಣ ಅಲ್ಲ ಉಪ್ಪಿ ಕಾಣಿಸೋದು ಫಿಕ್ಸ್ ಅಂತಿವೆ ಮೂಲಗಳು ತಿಳಿಸಿವೆ. ಯಾಕಂದ್ರೆ ಉಪ್ಪಿ ಕೂಡ ಈ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ಸಮಾಚಾರ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ : Vedha : ಶಿವಣ್ಣನ 'ವೇದ' ಸಕ್ಸಸ್ ಖುಷಿಯಲ್ಲಿ ಚಿತ್ರತಂಡ! ವೇದ ಪಾರ್ಟ್ 2 ಬರೋದು ಪಕ್ಕಾನಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.