Swayambhu movie : ಕುತೂಹಲ ಹುಟ್ಟಿಸುತ್ತಿದೆ ನಿಖಿಲ್‌ ʼಸ್ವಯಂಭುʼ ಮೋಷನ್‌ ಪೋಸ್ಟರ್‌..!

ಟಾಲಿವುಡ್‌ ನಟ ನಿಖಿಲ್ ಸಿದ್ಧಾರ್ಥ ಅವರ 20ನೇ ಚಿತ್ರ ʼಸ್ವಯಂಭೂʼ ಚಿತ್ರದ ಫಸ್ಟ್ ಲುಕ್ ರಿಲೀಸ್‌ ಆಗಿದೆ. ʼಸ್ವಯಂಭುʼ ಮೋಷನ್ ಪೋಸ್ಟರ್ ನೋಡಿ ನಿಖಿಲ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Jun 2, 2023, 01:25 PM IST
  • ನಟ ನಿಖಿಲ್ ಸಿದ್ಧಾರ್ಥ ಅವರ 20ನೇ ಚಿತ್ರ ಮೋಷನ್‌ ಪೋಸ್ಟರ್‌ ರಿಲೀಸ್‌.
  • ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ನಿಖಿಲ್‌ ʼಸ್ವಯಂಭುʼ ಮೋಷನ್‌ ಪೋಸ್ಟರ್‌ ವಿಡಿಯೋ.
  • ʼಸ್ವಯಂಭುʼಗೆ ರವಿ ಬಸ್ರೂರ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.
Swayambhu movie : ಕುತೂಹಲ ಹುಟ್ಟಿಸುತ್ತಿದೆ ನಿಖಿಲ್‌ ʼಸ್ವಯಂಭುʼ ಮೋಷನ್‌ ಪೋಸ್ಟರ್‌..! title=

Swayambhu motion poster : ತೆಲುಗು ಸ್ಟಾರ್‌ ನಟ ನಿಖಿಲ್ ಸಿದ್ಧಾರ್ಥ ನಟನೆಯ ಬಹುನಿರೀಕ್ಷಿತ ಸಿನಿಮಾ ʼಸ್ವಯಂಭುʼ ಚಿತ್ರದ ರೋರಿಂಗ್‌ ಮೋಷನ್ ಪೋಸ್ಟರ್ ರಿಲೀಸ್‌ ಆಗಿದೆ. ಸ್ವತಃ ನಿಖಿಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಇನ್ನು ವಿಡಿಯೋ ಶೇರ್‌ ಮಾಡಿರುವ ನಿಖಿಲ್‌ ಭಾರತದ ಉನ್ನತ ತಂತ್ರಜ್ಞರಾದ ಡಾಪ್ ಮನೋಜ್ ಪರಮಹಂಸ ಸರ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಪ್ರೊಡಕ್ಷನ್ ಡಿಸೈನರ್ ಎಂ ಪ್ರಭಾಕರನ್ ಸರ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ನಿರ್ಮಾಪಕ ಟಾಗೋರ್‌ಮಧು ಗಾರು, ಭುವನಸಾಗರ್ ಅವರೊಂದಿಗೆ ಮತ್ತೆ ತ ಬರುತ್ತಿದ್ದೇನೆ, ಮೋಷನ್ ಪೋಸ್ಟರ್ ಇಲ್ಲಿದೆ #ಸ್ವಯಂಭು ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Abhishek - Aviva: ಅಂಬರೀಷ್ ಮನೆಯಲ್ಲಿ ಅಭಿ ಮದುವೆ ಶಾಸ್ತ್ರಗಳು ಆರಂಭ ; ಮದುವೆ ಸಂಭ್ರಮ ಬಲು ಜೋರು..!

ಮೋಷನ್ ಪೋಸ್ಟರ್‌ನಲ್ಲಿ ನಿಖಿಲ್ ಸಿದ್ಧಾರ್ಥ್‌ ಯೋಧನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆ ಸಂಗೀತ ಗೂಸ್‌ಬಂಪ್ಸ್ ಬರಿಸುವಂತಿದೆ. ಮೋಷನ್‌ ಪೋಸ್ಟರ್‌ ನೋಡಿದ ಮೇಲೆ ನೆಟ್ಟಿಗರಿಗೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸತತವಾಗಿ ಕಾಮೆಂಟ್ ಮಾಡುತ್ತಿರುವ ನಿಖಿಲ್‌ ಅಭಿಮಾನಿಗಳು, " ನಿಮ್ಮ ದೊಡ್ಡ ಅಭಿಮಾನಿ ಸರ್, ಅದ್ಭುತ ಆಶ್ಚರ್ಯ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ, ʼ ಬ್ಲಾಕ್ಬಸ್ಟರ್ನಂತೆ ಕಾಣುತ್ತಿದೆ, ಹೇಳಿದ್ರೆ ಇನ್ನೊಬ್ಬ ಅಭಿಮಾನಿ, "ಗೂಸ್ಬಂಪ್ಸ್ " ಅಂತ ಕಾಮೆಂಟ್ ಮಾಡಿದ್ದಾರೆ. 

ಇದಕ್ಕೂ ಮೊದಲು, ನಟ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸುವ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ʼನಮ್ಮ 20 ನೇ ಚಿತ್ರ #ಸ್ವಯಂಭು ಆಗಿರುತ್ತದೆ. ನನ್ನ ಜನ್ಮದಿನದ ಶುಭಾಶಯಗಳಿಗೆ ಧನ್ಯವಾದಗಳು.... ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತೇನೆ ಮತ್ತು ಯಾವಾಗಲೂ ನಮ್ಮ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತೇನೆ.ʼ ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

ಇದನ್ನೂ ಓದಿ: ಬಾಲಿವುಡ್‌ ಬಾಂಬ್‌ಶೆಲ್‌ ಮೌನಿರಾಯ್‌ ದೇಹಸಿರಿ ಪ್ರದರ್ಶನ, ಪೋಟೋಸ್‌ ನೋಡಿ

ಭರತ್ ಕೃಷ್ಣಮಾಚಾರಿ ಅವರ ನೇತೃತ್ವದಲ್ಲಿ ಮೂಡಿ ಬರುತ್ತಿರುವ ʼಸ್ವಯಂಭುʼ ಚಿತ್ರ ನಿಖಿಲ್ ಸಿದ್ಧಾರ್ಥ ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಪ್ರಾಜೆಕ್ಟ್‌. ಚಿತ್ರವು ಆಗಸ್ಟ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಸಿನಿಮಾಗೆ ಮನೋಜ್ ಪರಮಹಂಸ ಛಾಯಾಗ್ರಾಹಕವಿದೆ. ಕೆಜಿಎಫ್‌ ಸಿನಿಮಾಗೆ ಮ್ಯೂಜಿಕ್‌ ನೀಡಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿರುವ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಸಂಭಾಷಣೆಯನ್ನು ವಾಸುದೇವ್ ಮುನೆಪ್ಪಗರಿಯವರು ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News