Naatu Naatu for Oscar : ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಆಸ್ಕರ್ ರೇಸ್‌ನಲ್ಲಿದೆ. ಇದೀಗ ಅಕಾಡೆಮಿಯಿಂದ ಅಪ್‌ಡೇಟ್ ಹೊರಬಿದ್ದಿದ್ದು, ತೆಲುಗು ಬ್ಲಾಕ್ಬಸ್ಟರ್ ಆರ್‌ಆರ್‌ಆರ್ ಸಿನಿಮಾದ ʼನಾಟು ನಾಡುʼ ಹಾಡು 95 ನೇ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ ಎಂದು ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.
ರಾಜಮೌಳಿ ದೃಶ್ಯಕಾವ್ಯದ ʼನಾಟು ನಾಟುʼ ಹಾಡು ಪ್ರಪಂಚದಾದ್ಯಂತ ಸಖತ್ ಸೌಂಡ್ ಮಾಡಿತ್ತು. ಈ ಹಾಡಿನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಎನರ್ಜೆಟಿಕ್ ಸ್ಟೇಪ್ಸ್ ನೋಡುಗರನ್ನು ಹೆಜ್ಜೆ ಹಾಕುವಂತೆ ಮಾಡಿತ್ತು. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಈ ಹಾಡನ್ನು ಹಾಡಿದ್ದಾರೆ. ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅವಾರ್ಡ್ ಪಡೆದಿತ್ತು. ಇದೀಗ ಆಸ್ಕರ್‌ಗೆ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ.
This year's Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023
ಇದನ್ನೂ ಓದಿ:Rakul preet singh: ʼಮನುಷ್ಯನಿಗೆ ಸೆಕ್ಸ್ ಬಹು ಮುಖ್ಯ..ʼ ರಾಕುಲ್ ಲೈಂಗಿಕ ಪಾಠ..!
ಜೂ. ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ RRR, ಸ್ವಾತಂತ್ರ್ಯ ಕ್ರಾಂತಿಕಾರಿಗಳ ಕಾಲ್ಪನಿಕ ಕಥೆಯಾಗಿದೆ. ಈ ಆಕ್ಷನ್-ಡ್ರಾಮಾ ಸಿನಿಮಾ ಪ್ರಪಂಚದಾದ್ಯಂತ 1100 ಕೋಟಿ ರೂಪಾಯಿಗಳನ್ನು ಗಳಿಸಿತು. ಅಲ್ಲದೆ, ವಿಮರ್ಶಾತ್ಮಕ ಯಶಸ್ಸನ್ನು ಕಂಡಿತು. ಇದು ನೆಟ್‌ಫ್ಲಿಕ್ಸ್‌ನಲ್ಲಿ ಡಿಜಿಟಲ್ ಬಿಡುಗಡೆಯಾದ ಮೇಲೆ ವಿದೇಶಿಗರಿಂದಲೂ ಪ್ರಶಂಸೆ ಪಡೆದಿತ್ತು. ಅಲ್ಲದೆ, ಜೇಮ್ಸ್ ಗನ್ ಮತ್ತು ಡ್ಯಾನಿ ಡಿವಿಟೊ ಅವರಂತಹ ಹಾಲಿವುಡ್ ದಿಗ್ಗಜರಿಂದ ಪ್ರಶಂಸೆ ಗಳಿಸಿತು.
ಇದೀಗ ಆರ್‌ಆರ್‌ಆರ್ ಅನ್ನು ಆಸ್ಕರ್‌ಗೆ ಪ್ರಧಾನ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ, ಆರ್‌ಆರ್‌ಆರ್ ಹಾಡು ʼನಾಟು ನಾಟುʼ "ಅಪ್ಲಸ್" (Tell it Like a Woman), "ಹೊಲ್ಡ್ ಮೈ ಆಂಡ್" (Top Gun: Maverick), "ಲಿಫ್ಟ್ ಮಿ ಅಪ್" (ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್) ಮತ್ತು "ದಿಸ್ ಇಸ್ ಅ ಲೈಫ್" (Everything Everywhere All At Once) ಹಾಡುಗಳ ಜೊತೆ ಸ್ಪರ್ಧೆಗಿಳಿದಿದ್ದು, ಗೆಲ್ಲುವ ಭರವಸೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.