ಕುಡಿದ ಮತ್ತಿನಲ್ಲಿ ಆಶಿಕಾ ರಂಪಾಟ : ಚಿತ್ರತಂಡದ ಮೇಲೆ ಬೇಸಗೊಂಡ ಪವನ್‌ ಒಡೆಯರ್‌..!

ಇತ್ತೀಚಿಗೆ ನಟಿ ಆಶಿಕಾ ರಂಗನಾಥ್ ಅವರು ಕೈಯಲ್ಲಿ ಬಾಟಲಿ ಹಿಡಿದು ಕುಡಿದು ತೂರಾಡುತ್ತಿದ್ದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವಿಡಿಯೋ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಈ ಘಟನೆ ಕುರಿತು ಸ್ಪಷ್ಟತೆ ನೀಡಿರುವ ನಿರ್ದೇಶಕ ಪವನ್‌ ಒಡೆಯರ್‌ ಇದೊಂದು ಚಿತ್ರೀಕರಣದ ಭಾಗ ಮಾತ್ರ ಎಂದು ತಿಳಿಸಿದ್ದಾರೆ.

Written by - Krishna N K | Last Updated : Nov 19, 2022, 04:26 PM IST
  • ಕುಡಿದ ಮತ್ತಿನಲ್ಲಿ ನಟಿ ಆಶಿಕಾ ರಂಗನಾಥ್‌ ರಂಪಾಟ
  • ಚಿತ್ರತಂಡದ ಮೇಲೆ ಬೇಸಗೊಂಡ ಪವನ್‌ ಒಡೆಯರ್‌
  • ಘಟನೆ ಕುರಿತು ಪವನ್‌ ಒಡೆಯರ್‌ ವಿಡಿಯೋ ಮೂಲಕ ಸ್ಪಷನೆ
ಕುಡಿದ ಮತ್ತಿನಲ್ಲಿ ಆಶಿಕಾ ರಂಪಾಟ : ಚಿತ್ರತಂಡದ ಮೇಲೆ ಬೇಸಗೊಂಡ ಪವನ್‌ ಒಡೆಯರ್‌..! title=

ಬೆಂಗಳೂರು : ಇತ್ತೀಚಿಗೆ ನಟಿ ಆಶಿಕಾ ರಂಗನಾಥ್ ಅವರು ಕೈಯಲ್ಲಿ ಬಾಟಲಿ ಹಿಡಿದು ಕುಡಿದು ತೂರಾಡುತ್ತಿದ್ದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವಿಡಿಯೋ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಈ ಘಟನೆ ಕುರಿತು ಸ್ಪಷ್ಟತೆ ನೀಡಿರುವ ನಿರ್ದೇಶಕ ಪವನ್‌ ಒಡೆಯರ್‌ ಇದೊಂದು ಚಿತ್ರೀಕರಣದ ಭಾಗ ಮಾತ್ರ ಎಂದು ತಿಳಿಸಿದ್ದಾರೆ.

ಇನ್ನು ವಿಡಿಯೋ ವೈರಲ್‌ ಆಗುತ್ತಲೇ ಆಶಿಕಾ ಅವರು ಪವನ್‌ ಒಡೆಯರ್‌ ಅವರಿಗೆ ಈ ರೀತಿ ಆದ್ರೆ ತಾವು ರೆಮೋ ಪ್ರಮೋಷನ್‌ಗೆ ಬರಲ್ಲ ಎಂದು ಹೇಳಿದ್ದಾರಂತೆ. ಅಲ್ಲದೆ, ಘಟನೆಯಿಂದ ಕಂಪ್ಲೀಟ್‌ ಅವರು ಬೇಸರಗೊಂಡಿದ್ದಾಗಿ ಪವನ್‌ ತಿಳಿಸಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಪವನ್‌, ಹೀಗೆ ಎಲ್ಲೆಡೆ ವೈರಲ್​ ಆದ ವಿಡಿಯೋದಿಂದಾಗಿ ಆಶಿಕಾ ರಂಗನಾಥ್​​ ಅವರಿಗೆ ನೋವಾಗಿದೆ. ಆಶಿಕಾ ಅವರು ಕುಡಿದು ರಂಪಾಟ ಮಾಡಿಲ್ಲ. ಆ ವಿಡಿಯೋ ʼರೇಮೊʼ ಚಿತ್ರದ ಒಂದು ಪ್ರಮುಖ ದೃಶ್ಯದ ಚಿತ್ರಿಕರಣದ ವೇಳೆ ತೆಗೆಯಲಾದ ಶಾಟ್‌. ಆಶಿಕಾ ಅವರು ನೈಜವಾಗಿ ಅಭಿನಿಯಿಸಿರುವ ಹಿನ್ನೆಲೆ ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಕಿಚನ್‌ನಲ್ಲಿ ಕಿಚ್ಚ : ಬಿಗ್‌ಬಾಸ್ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟ ಸುದೀಪ್

 

ಅಲ್ಲದೆ, ಒಂದು ಬಾರಿ ವಿಡಿಯೋವನ್ನು ಸರಿಯಾಗಿ ಗಮನಿಸಿದರೆ ನಿಮಗೆ ತಿಳಿಯುತ್ತದೆ. ಆಶಿಕಾ ಹಿಂದೆ ಚಿತ್ರೀಕರಣಕ್ಕೆ ಬಳಸಲಾದ ಸಾಮಾಗ್ರಿಗಳಿವೆ. ಇದು ಶೂಟಿಂಗ್‌ನ ಒಂದು ಭಾಗವಷ್ಟೇ. ಆಶಿಕಾ ರಂಗನಾಥ್ ತುಂಬಾ ಮುಗ್ದರು ಅವರು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಚಿತ್ರದ ಮಾರ್ಕೆಟಿಂಗ್​​ ತಂಡಕ್ಕೆ ಚಿತ್ರೀಕರಣದ ಎಲ್ಲಾ ವಿಡಿಯೋಗಳನ್ನು ಕೊಟ್ಟಿದ್ದೇವು ಅವರು ತಪ್ಪಾಗಿ ಈ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಚಿತ್ರತಂಡದ ತಪ್ಪೂ ಸಹ ಇದೆ ಎಂದು ಸ್ಪಷ್ಟನೆ ನೀಡಿದರು.

ಇನ್ನು ವೈರಲ್‌ ಆದ ವಿಡಿಯೋದಲ್ಲಿ ಆಶಿಕಾ ಕೈಯಲ್ಲಿ ಬಾಟಲ್‌ ಹಿಡಿದು ಕೂಡಿದ ಮತ್ತಿನಲ್ಲಿ ತೂರಾಡಿಕೊಂಡು ಬರುತ್ತಿರುವುದು ಇದೆ. ಅಲ್ಲದೆ, ತೂರಾಡುತ್ತ ಬರುವ ಅವರು ಕ್ಯಾಮೆರಾ ಬಂದ್‌ ಮಾಡುವಂತೆ ಹೇಳಿ ಮಧ್ಯದ ಬೆರಳನ್ನು ತೋರಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಆಶಿಕಾ ಅಭಿಮಾನಿಗಳಿಂದ ಹಿಡಿದು ನೆಟ್ಟಿಗರು ಟ್ರೋಲ್‌ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಕೆಲವರು ಅಸಭ್ಯವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News