ಮಲೈಕಾ ಅರೋರಾ ಜೊತೆ ಅರ್ಜುನ್‌ ಕಪೂರ್‌ ʼಬೇಬಿ ಡೇ ಔಟ್..!

ಬಾಲಿವುಡ್‌ ನಟ ಅರ್ಜುನ್ ಕಪೂರ್ ಇತ್ತೀಚೆಗಷ್ಟೇ ತನ್ನ ಗೆಳತಿ ಬ್ಯೂಟಿಫುಲ್‌ ಡಾಲ್‌ ಮಲೈಕಾ ಅರೋರಾ ಅವರನ್ನು ಮುಂಬೈನಲ್ಲಿ ಡೇ ಔಟ್ ಗೆ ಕರೆದುಕೊಂಡು ಹೋಗಿದ್ದಾರೆ. ಅರ್ಜುನ್‌ ತನ್ನ ಗೆಳತಿ ಮಲೈಕಾ ಜೊತೆ ಇರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಹಂಚಿಕೊಂಡಿದ್ದು, ಕ್ಯೂಟ್‌ ಜೋಡಿ ನೋಡಿದ ಅವರ ಫ್ಯಾನ್ಸ್‌ ಗುಡ್‌ಲಕ್‌ ಎಂದಿದ್ದಾರೆ.

Written by - Krishna N K | Last Updated : Nov 19, 2022, 02:06 PM IST
  • ಮಲೈಕಾ ಅರೋರಾ ಜೊತೆ ಅರ್ಜುನ್‌ ಕಪೂರ್‌ ʼಬೇಬಿ ಡೇ ಔಟ್
  • ದೆಹಲಿ ಸುತ್ತಿದ್ದ ಬಾಲಿವುಡ್‌ ಸ್ಟಾರ ಜೋಡಿಗಳು
  • ಗೆಳತಿ ಜೊತೆಗಿರುವ ಸೆಲ್ಫಿ ಹಂಚಿಕೊಂಡ ಅರ್ಜುನ್‌ ಕಪೂರ್‌
ಮಲೈಕಾ ಅರೋರಾ ಜೊತೆ ಅರ್ಜುನ್‌ ಕಪೂರ್‌ ʼಬೇಬಿ ಡೇ ಔಟ್..! title=

ನವದೆಹಲಿ : ಬಾಲಿವುಡ್‌ ನಟ ಅರ್ಜುನ್ ಕಪೂರ್ ಇತ್ತೀಚೆಗಷ್ಟೇ ತನ್ನ ಗೆಳತಿ ಬ್ಯೂಟಿಫುಲ್‌ ಡಾಲ್‌ ಮಲೈಕಾ ಅರೋರಾ ಅವರನ್ನು ಮುಂಬೈನಲ್ಲಿ ಡೇ ಔಟ್ ಗೆ ಕರೆದುಕೊಂಡು ಹೋಗಿದ್ದಾರೆ. ಅರ್ಜುನ್‌ ತನ್ನ ಗೆಳತಿ ಮಲೈಕಾ ಜೊತೆ ಇರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಹಂಚಿಕೊಂಡಿದ್ದು, ಕ್ಯೂಟ್‌ ಜೋಡಿ ನೋಡಿದ ಅವರ ಫ್ಯಾನ್ಸ್‌ ಗುಡ್‌ಲಕ್‌ ಎಂದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸೆಲ್ಫಿ ಫೋಟೋ ಹಂಚಿಕೊಂಡಿರುವ ಅರ್ಜುನ್ ಕಪೂರ್, ʼಬೇಬಿಸ್ ಡೇ ಔಟ್ʼ ಅಂತ ಶೀರ್ಷಿಕೆ ಹಾಕಿದ್ದಾರೆ. ಅಲ್ಲದೆ, ಮಲೈಕಾ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ನನ್ನ ಮುಂದಿನ ಸಿನಿಮಾಗಾಗಿ ನಾನು ಹೊರಗೆ ಹೋಗಬೇಕಾಗುತ್ತದೆ. ಅವಳು ಅಲ್ಲಿಗೆ ಬರಲು ಸಾಧ್ಯವಿಲ್ಲ. ಆದರೆ ಈ ಡೇ ಔಟ್‌ ಅನ್ನು ಅವಳು ಇಷ್ಟ ಪಡಬಹುದು ಎಂದು ಬರಹ ಬರೆದಿದ್ದರು. ಅರ್ಜುನ್ ಗೆಸ್ಚರ್ ಮಲೈಕಾ ಗಮನ ಸೆಳೆಯಿತು, ಅರ್ಜುನ್‌ ಪೋಸ್ಟ್‌ಗೆ "Awww ಬೇಬಿ" ಎಂದು ಕಾಮೆಂಟ್‌ ಮಾಡಿದ್ದಾರೆ. ಡೇ ಔಟ್‌ ಖುಷಿ ತಂದಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Kantara : ಮತ್ತೊಂದು ದಾಖಲೆ ಮುರಿದ ಕಾಂತಾರ ಸಿನಿಮಾ!

 
 
 
 

 
 
 
 
 
 
 
 
 
 
 

A post shared by Arjun Kapoor (@arjunkapoor)

ಇನ್ನು ಈ ಸ್ಟಾರ್‌ ಜೋಡಿಗಳು ಹಲವಾರು ಸ್ವೀಟ್‌ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಹಲವರು ಸ್ಟಾರ್‌ ನಟರು ಅರ್ಜುನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಅರ್ಜುನ್ ಅವರ ಚಿಕ್ಕಮ್ಮ ಮತ್ತು ಮಹೀಪ್ ಕಪೂರ್ ಅರ್ಜುನ್‌ ಪೋಸ್ಟ್‌ಗೆ ಹೃದಯ ಇಮೋಜಿ ನೀಡಿದ್ದಾರೆ. ನಟಿ ಸೀಮಾ ಸಜ್ದೇಹ್ ಕೂಡ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಕಾಮೆಂಟ್‌ವಿಭಾಗದಲ್ಲಿ ಹೃದಯ ಇಮೋಜಿ ಹಾಕಿದ್ದಾರೆ. 

ಇನ್ನು ಮಲೈಕಾ ಮತ್ತು ಅರ್ಜುನ್ ಸ್ವಲ್ಪ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಆಗಾಗ್ಗೆ ಪರಸ್ಪರರ ಚಿತ್ರಗಳನ್ನು ತಮ್ಮ ಸಾಮಾಜಿಕ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಮಲೈಕಾ ರಿಯಾಲಿಟಿ ಶೋದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಕಪೂರ್ ʼದಿ ಲೇಡಿಕಿಲ್ಲರ್ʼ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಸಹ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ʼಲೇಡಿಕಿಲ್ಲರ್ʼ ಹೊರತುಪಡಿಸಿ, ಅರ್ಜುನ್ ಮತ್ತು ಭೂಮಿ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಕೊನೆಯದಾಗಿ ಅರ್ಜುನ್ ಕಪೂರ್ ಮೋಹಿತ್ ಸೂರಿ ಅವರ ʼಏಕ್ ವಿಲನ್ ರಿಟರ್ನ್ಸ್ʼ ಚಿತ್ರದಲ್ಲಿ ನಟಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News