Poonam Pandey alive: ಪೂನಂ ಪಾಂಡೆ ಬದುಕಿದ್ದಾರಾ? ಸಾವಿನ ಸುದ್ದಿ ಸುಳ್ಳೇ.!

Uncertainty Surrounding Poonam Pandey: ಪೂನಂ ಪಾಂಡೆ ಸಾವಿನ  ಸುದ್ದಿ ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಈ ವಿಚಾರದ ಸುತ್ತ ಅನುಮಾನದ ಹುತ್ತ ಹಬ್ಬಿದೆ. ಪೂನಂ ಎಲ್ಲಿ, ಯಾವಾಗ ತೀರಿ ಹೋದರು ಎಂಬ ಪ್ರಶ್ನೆಗಳೂ ಎದ್ದಿವೆ. ಎಲ್ಲಕ್ಕೂ ಮಿಗಿಲಾಗಿ ಅವರ ಮೃತದೇಹ ಎಲ್ಲಿ ಎಂಬ ಪ್ರಶ್ನೆ ಹುಟ್ಟಿದೆ. 

Written by - Chetana Devarmani | Last Updated : Feb 3, 2024, 12:56 PM IST
  • ಪೂನಂ ಪಾಂಡೆ ಸಾವಿನ ಸುದ್ದಿ ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
  • ಪೂನಂ ಎಲ್ಲಿ, ಯಾವಾಗ ತೀರಿ ಹೋದರು ಎಂಬ ಪ್ರಶ್ನೆಗಳೂ ಎದ್ದಿವೆ.
  • ಪೂನಂ ಸಾವಿನ ನಂತರ ಅವರ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ.
Poonam Pandey alive: ಪೂನಂ ಪಾಂಡೆ ಬದುಕಿದ್ದಾರಾ? ಸಾವಿನ ಸುದ್ದಿ ಸುಳ್ಳೇ.!  title=
Poonam Pandey

Poonam Pandey alive: ಬಾಲಿವುಡ್ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಕೇಳಿ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಪೂನಂ ಇನ್ನಿಲ್ಲ ಎಂಬ ಸುದ್ದಿ ಆಘಾತ ತಂದಿದೆ. ನಟಿ ಪೂನಂ 32 ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರೆಂಬ ಸಂಗತಿ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಟಿಯ ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಕಾರಣ ಎನ್ನಲಾಗಿದೆ. ಆದರೆ ಪೂನಂ ಸಾವಿನ ನಂತರ ಅವರ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. 

ಪೂನಂ ಪಾಂಡೆ ನಿಧನದ ಸುದ್ದಿಯನ್ನು ಅವರ PR ತಂಡವು ನಟಿಯ ಅಧಿಕೃತ Instagram ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ, ಇದು ನಮಗೆ ಕೆಟ್ಟ ದಿನ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನಾವು ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ. ಈ ದುಃಖದ ಸಮಯದಲ್ಲಿ, ನಾವು ಗೌಪ್ಯತೆಯನ್ನು ಕಾಪಾಡಲು ವಿನಂತಿಸುತ್ತೇವೆ ಎಂದು ಬರೆಯಲಾಗಿದೆ. ಈ ಪೋಸ್ಟ್ ನಂತರ ಪ್ರತಿಯೊಬ್ಬರೂ ಪೂನಂ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾರೆ.

ಪೂನಂ ಪಾಂಡೆ ಮೃತದೇಹ ಎಲ್ಲಿ? 

ಪೂನಂ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಪೂನಂ ಅವರ ಮೃತದೇಹ ಎಲ್ಲಿದೆ ಎಂದು ತಿಳಿಯಲು ಬಯಸುತ್ತಿದ್ದಾರೆ. ಪೂನಂ ಪಾಂಡೆ ಎಲ್ಲಿ ಮತ್ತು ಯಾವಾಗ ಮೃತಪಟ್ಟರು ಎಂದು ಪ್ರಶ್ನಿಸುತ್ತಿದ್ದಾರೆ. ಪೂನಂ ಅವರ ಅಂತ್ಯಕ್ರಿಯೆ ಯಾವಾಗ ಮತ್ತು ಎಲ್ಲಿ ನಡೆಯಲಿದೆ? ಎಂದು ಕೇಳುತ್ತಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ.

ಪೂನಂ ಸಹೋದರಿಯ ಫೋನ್ ಸ್ವಿಚ್ ಆಫ್: 

ಪೂನಂ ಪಾಂಡೆಯ ಕುಟುಂಬದವರೇ ಅವರ ನಿಧನದ ಬಗ್ಗೆ PR ತಂಡಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಸುದ್ದಿ ನೀಡಿದ ನಂತರವೂ ನಟಿಯ ಕುಟುಂಬದ ಯಾವುದೇ ಕುರುಹು ಲಭ್ಯವಾಗಿಲ್ಲ. ಅಷ್ಟೇ ಅಲ್ಲ ಪೂನಂ ಸಹೋದರಿ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಅಭಿಮಾನಿಗಳಲ್ಲಿ ಪ್ರಶ್ನೆ ಮತ್ತಷ್ಟು ಹೆಚ್ಚಿದೆ. ಎಲ್ಲರೂ ಪೂನಂ ಕುಟುಂಬದಿಂದ ಉತ್ತರಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಪೂನಂ ಪಾಂಡೆ ಸೇರಿದಂತೆ ಅತೀ ಚಿಕ್ಕ ವಯಸ್ಸಿನಲ್ಲೇ ಅಗಲಿದ ನಟಿಯರು ಇವರೇ.! 

ಒಂದೆಡೆ, ಪೂನಂ ಅವರ ಅಗಲಿಕೆಯಿಂದ ಅಭಿಮಾನಿಗಳು ಸಾಕಷ್ಟು ಶಾಕ್‌ ಆಗಿದ್ದಾರೆ. ಮತ್ತೊಂದೆಡೆ ಅವರ ಕುಟುಂಬ ನಾಪತ್ತೆಯಾಗಿದೆ. ಈ ಹಿನ್ನೆಲೆ ಪೂನಂ ಫ್ಯಾನ್ಸ್‌ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪೂನಂ ಸಾವಿನ ಬಗ್ಗೆ ಕುಟುಂಬಸ್ಥರು ತಂಡಕ್ಕೆ ಮಾತ್ರ ಮಾಹಿತಿ ನೀಡಿದ್ದಾರೆ. ಇದನ್ನು ಹೊರತುಪಡಿಸಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. 

ನಟಿಯ ಸಹೋದರಿಯ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈಗ ಪೂನಂ ಕುಟುಂಬ ಎಲ್ಲಿದೆ ಎಂಬುದು ಬಹುದೊಡ್ಡ ಪ್ರಶ್ನೆ. ಪೂನಂ ಮೃತದೇಹ ಎಲ್ಲಿದೆ? ಪೂನಂ ಎಲ್ಲಿ ಮೃತಪಟ್ಟರು? ಪೂನಂ ಅವರ ಅಂತ್ಯಕ್ರಿಯೆ ಯಾವಾಗ ಮತ್ತು ಎಲ್ಲಿ ನಡೆಯಲಿದೆ? ಪೂನಂಗೆ ಸಂಬಂಧಿಸಿದ ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಎಲ್ಲರೂ ಬಯಸುತ್ತಿದ್ದಾರೆ.

ಸಾವಿನ ಸುದ್ದಿಗೂ 2 ದಿನ ಮೊದಲು ಶೂಟಿಂಗ್ ನಲ್ಲಿ ಭಾಗಿ: 

ಎರಡು ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿ ಪೂನಂ ಪಾಂಡೆ ಜೊತೆ ಶೂಟಿಂಗ್ ಮಾಡಿದ್ದೆ ಎಂದು ಡಿಸೈನರ್ ರೋಹಿತ್ ವರ್ಮಾ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಪೂನಂ ಪಾಂಡೆ ಇನ್ನಿಲ್ಲ ಎಂದು ಅವರು ಸಹ ನಂಬುತ್ತಿಲ್ಲ. ಈ ಬಗ್ಗೆ ಖಾಸಗಿ ವಾಹಿನಿಯೊಂದರ ಬಳಿ ಮಾತನಾಡಿರುವ ಡಿಸೈನರ್ ರೋಹಿತ್ ವರ್ಮಾ, ಪೂನಂ ಪಾಂಡೆ ಸಂಪೂರ್ಣವಾಗಿ ಫಿಟ್ ಆಗಿದ್ದರು ಮತ್ತು ಅವರಿಗೆ ಕ್ಯಾನ್ಸರ್ ಇದ್ದಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ. ಆಕೆ ತನ್ನ ತವರು ಕಾನ್ಪುರಕ್ಕೆ ಹೋಗಿದ್ದರು. ಅಲ್ಲಿ ಅವಳು ಸಾವನ್ನಪ್ಪಿದ್ದಾರೆ ಎಂದು ತಂಡದಿಂದ ತಮಗೆ ತಿಳಿಸಲಾಗಿದೆ ಎಂದು ರೋಹಿತ್ ಹೇಳಿದರು.

ಬಾಡಿಗಾರ್ಡ್ ಹೇಳೋದೇನು? 

ಪೂನಂ ಪಾಂಡೆ ಹಠಾತ್ ಸಾವಿನ ಸುದ್ದಿ ಕೇಳಿ ಅವರ ಅಂಗರಕ್ಷಕ ಕೂಡ ಶಾಕ್ ಆಗಿದ್ದಾರೆ. ನ್ಯೂಸ್‌ ಚಾನೆಲ್‌ ಒಂದರ ಜೊತೆ ಮಾತನಾಡಿದ ಪೂನಂ ಬಾಡಿ ಗಾರ್ಡ್ ಅಮೀನ್ ಖಾನ್, ಅವರ ಸಾವಿನ ಸುದ್ದಿಯನ್ನು ನಾನು ನಂಬಲು ಸಾಧ್ಯವಿಲ್ಲ. ನಾನು ಅವರ ಸಹೋದರಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಪ್ರತಿಕ್ರಿಯಿಸುತ್ತಿಲ್ಲ. ಅವರ ಸಾವಿನ ಸುದ್ದಿಯನ್ನು ಮಾಧ್ಯಮಗಳ ಮೂಲಕ ನಾನು ತಿಳಿದೆ. ಜನವರಿ 31 ರಂದು ಶೂಟಿಂಗ್ ವೇಳೆ ಪೂನಂ ಪಾಂಡೆ ಜೊತೆಯಲ್ಲಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆ ಮನೆಯಲ್ಲಿ ಧ್ವಜ ಹಾರಿಸಿ ಖುಷಿಪಟ್ಟ ನಟಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News