Prabhas - Deepika Padukone New Movie Project K: ಪ್ರಭಾಸ್ ಅವರ ಬಹು ನಿರೀಕ್ಷಿತ ವೈಜ್ಞಾನಿಕ ಕಾಲ್ಪನಿಕ ಚಿತ್ರ ಪ್ರಾಜೆಕ್ಟ್ ಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವಿಚಾರ ಹರಿದಾಡುತ್ತಿವೆ. ಈ ಯೋಜನೆಯಲ್ಲಿ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2024 ರಲ್ಲಿ ಬಿಡುಗಡೆಯಾಗಲಿದೆ. ಆದರೆ ಇತ್ತೀಚೆಗೆ ಈ ಯೋಜನೆಯು ಅದರ ಶೀರ್ಷಿಕೆ ಮತ್ತು ಫಸ್ಟ್ ಲುಕ್ ವಿಚಾರವಾಗಿ ಟ್ರೆಂಡಿಂಗ್ ನಲ್ಲಿದೆ. ನಾಗ್ ಅಶ್ವಿನ್ ನಿರ್ದೇಶನದ Project K ಚಿತ್ರಕ್ಕೆ ʻಕಾಲಚಕ್ರʼ ಎಂದು ಹೆಸರಿಡಲಾಗಿದೆ ಮತ್ತು ಅಮಿತಾಬ್ ಬಚ್ಚನ್ ಪಾತ್ರವನ್ನು ಸಹ ಬಹಿರಂಗಪಡಿಸಲಾಗಿದೆ ಎಂಬ ಅನೇಕ ವರದಿಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಅಮಿತಾಬ್ ಬಚ್ಚನ್ ಪಾತ್ರ ಹೇಗಿರಲಿದೆ?
ಈ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವರದಿಗಳು ವೈರಲ್ ಆಗುತ್ತಿವೆ. ವರದಿಯ ಪ್ರಕಾರ, ಪ್ರಾಜೆಕ್ಟ್ ಕೆ ಯಲ್ಲಿ ಅಮಿತಾಬ್ ಬಚ್ಚನ್ ಅವರ ಪಾತ್ರವು ಮಹಾಭಾರತದ ಪಾತ್ರವಾದ ಅಶ್ವತ್ಥಾಮದಿಂದ ಪ್ರೇರಿತವಾಗಿರುತ್ತದೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ನಲ್ಲಿ ಈ ಪಾತ್ರ ಬಹಳ ಮುಖ್ಯವಾಗಲಿದೆ.
ಇದನ್ನೂ ಓದಿ: ನಟ ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ವರಸೆ ಬದಲಿಸಿದ ನಿರ್ಮಾಪಕರು!!
Project K ಹೆಸರು ಏನು?
ವರದಿಗಳ ಪ್ರಕಾರ, ಪ್ರಭಾಸ್ - ದೀಪಿಕಾ ಪಡುಕೋಣೆ ವೈಜ್ಞಾನಿಕ ಕಾಲ್ಪನಿಕ ಚಿತ್ರಕ್ಕೆ ʻಕಾಲಚಕ್ರʼ ಎಂದು ಹೆಸರಿಡಬಹುದು ಎನ್ನಲಾಗಿದೆ. ಚಿತ್ರದ ಹೆಸರೂ ಕಥೆಯಂತೆಯೇ ಇರಲಿದೆ ಎನ್ನಲಾಗುತ್ತಿದೆ. ಚಿತ್ರದ ವಿಷಯವು ಪೌರಾಣಿಕವಾಗಿದ್ದು, ಇದರಲ್ಲಿ ಆಕ್ಷನ್ ಮತ್ತು ಫಿಕ್ಷನ್ ಎರಡನ್ನೂ ಸೇರಿಸಲಾಗುತ್ತದೆ. ಸುದ್ದಿಯ ಪ್ರಕಾರ, ಕಾಲಚಕ್ರ ಅಂದರೆ ಸಮಯದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯೋಜನೆಯಲ್ಲಿ ಕೆಲವು ಕಥೆಯನ್ನು ಹೆಣೆಯಲಾಗಿದೆ ಮತ್ತು ಚಿತ್ರದಲ್ಲಿ ಪ್ರಭಾಸ್ ಪಾತ್ರವು ಭಗವಾನ್ ಕೃಷ್ಣ ಅಥವಾ ಮಹಾಭಾರತದ ಕರ್ಣನಿಂದ ಪ್ರೇರಿತವಾಗಿರಬಹುದು ಎಂದು ಹೇಳಲಾಗ್ತಿದೆ.
ಜುಲೈ 20ಕ್ಕೆ ಟೈಟಲ್ ರಿವೀಲ್?
ಪ್ರಾಜೆಕ್ಟ್ ಕೆ ಹೆಸರಿಗೆ ಸಂಬಂಧಿಸಿದಂತೆ ಜುಲೈ 20 ರಂದು ದೊಡ್ಡ ಅಪ್ಡೇಟ್ ಹೊರಬೀಳಲಿದೆ. ಚಿತ್ರದ ಟೈಟಲ್ ಜೊತೆಗೆ ಫಸ್ಟ್ ವಿಡಿಯೋ ಲುಕ್ ಕೂಡ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ವೈರಲ್ ಸುದ್ದಿಯ ಪ್ರಕಾರ, ಕಾಲಚಕ್ರ ಮತ್ತು ಕುರುಕ್ಷೇತ್ರವನ್ನು ಒಳಗೊಂಡಿರುವ Project K ಗೆ ಸಂಬಂಧಿಸಿದಂತೆ ಅನೇಕ ರೀತಿಯ ಹೆಸರುಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಜಾಹೀರಾತಿಗೆ ಪಡೆದಿದ್ದ ಹಣವನ್ನೆಲ್ಲ ದಾನ ಮಾಡಿದ ಮಹೇಶ್ ಬಾಬು ಪುತ್ರಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.