ಶಾರುಖ್ ಖಾನ್ ಜೊತೆ ಕಣಕ್ಕಿಳಿಯಲು ರೆಡಿ ಆದ ಪ್ರಭಾಸ್...! ಸಲಾರ್ ಟ್ರೈಲರ್ ರಿಲೀಸ್ ಡೇಟ್ ರಿವೀಲ್

Salar: ಪ್ರಭಾಸ್ ಮತ್ತು ಶ್ರುತಿ ಹಾಸನ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.  

Written by - Savita M B | Last Updated : Nov 28, 2023, 06:30 PM IST
  • ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್
  • ಪ್ರಶಾಂತ್ ನೀಲ್ ಕೆಜಿಎಫ್ ಎಂಬ ದೊಡ್ಡ ಸಿನಿಮಾವನ್ನು ನೀಡಿದ್ದರು..
  • ಸದ್ಯ ಈ ನಿರ್ದೇಶಕರ ಮುಂದಿನ ಮುಂಬರುವ ಚಿತ್ರ ಸಲಾರ್
ಶಾರುಖ್ ಖಾನ್ ಜೊತೆ ಕಣಕ್ಕಿಳಿಯಲು ರೆಡಿ ಆದ ಪ್ರಭಾಸ್...! ಸಲಾರ್ ಟ್ರೈಲರ್ ರಿಲೀಸ್ ಡೇಟ್ ರಿವೀಲ್ title=

Salar Tariler: ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಎಂಬ ದೊಡ್ಡ ಸಿನಿಮಾವನ್ನು ನೀಡಿದ್ದರು..  ಜೊತೆಗೆ ಅದರ ಎರಡೂ ಭಾಗಗಳನ್ನು ಬ್ಲಾಕ್ಬಸ್ಟರ್ ಹಿಟ್ ಮಾಡಿದರು. ಸದ್ಯ ಈ ನಿರ್ದೇಶಕರ ಮುಂದಿನ ಮುಂಬರುವ ಚಿತ್ರ ಸಲಾರ್. ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಈ ಚಿತ್ರವನ್ನೂ ನಿರ್ಮಿಸಿದೆ. 

ಸಲಾರ್ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ಬಾರಿ ಅನೌನ್ಸ್ ಮಾಡಿ, ಮುಂದೂಡಿದ್ದ ಸಿನಿಮಾ ಈಗ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಸಲಾರ್ ಚಿತ್ರ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ತೆಲುಗು, ಹಿಂದಿ, ಕನ್ನಡ, ಮಲಯಾಳಂ ಮತ್ತು ತಮಿಳು ಎಂಬ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ-"ಈ ವಿಷಯಗಳು ಸಾಮಾನ್ಯವಲ್ಲ. ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ": ಸುದ್ದಿಗೋಷ್ಠಯಲ್ಲಿ ಡೀಪ್‌ಫೇಕ್‌ ವಿಡಿಯೋ ಬಗ್ಗೆ ರಶ್ಮಿಕಾ ಮಾತು!

ಈ ಚಿತ್ರಕ್ಕೆ ಪೈಪೋಟಿ ನೀಡಲು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಡುಂಗಿ ಚಿತ್ರವೂ ತೆರೆಗೆ ಬರಲಿದೆ. ಇವೆರಡೂ ಪ್ಯಾನ್ ಇಂಡಿಯಾ ಚಿತ್ರಗಳಾದ್ದರಿಂದ ದೇಶಾದ್ಯಂತ ಈ ಚಿತ್ರಗಳ ನಿರೀಕ್ಷೆ ಹೆಚ್ಚಿದೆ. ಸಲಾರ್ ರಿಲೀಸ್ ಗೆ ಇನ್ನು 4 ವಾರ ಬಾಕಿ ಇದ್ದು, ಇದೀಗ ಚಿತ್ರದ ಟ್ರೈಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.

ಅದರಂತೆ ಡಿಸೆಂಬರ್ 1 ರಂದು ಸಂಜೆ 7.19ಕ್ಕೆ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಚಿತ್ರದ ಟೀಸರ್ ವೈರಲ್ ಆಗುತ್ತಿದ್ದಂತೆ ಇದೀಗ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಇದನ್ನೂ ಓದಿ-BBK 10: ವೈಲ್ಡ್ ಕಾರ್ಡ್‌ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ..! ನಾಮಿನೇಷನ್ ಲಿಸ್ಟ್‌ನಲ್ಲಿ ತನಿಷಾ, ಡ್ರೋನ್ ಪ್ರತಾಪ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News