ʼಸಲಾರ್‌ʼ ಸೆಟ್‌ನಲ್ಲಿ ಪ್ರಶಾಂತ್‌ ನೀಲ್‌ ಬರ್ತ್‌ಡೇ ಸೆಲೆಬ್ರೇಷನ್‌..! ಕೇಕ್‌ ತಿನ್ನಿಸಿದ ಡಾರ್ಲಿಂಗ್‌

Prashanth Neel : ನಿರ್ದೇಶಕ ಪ್ರಶಾಂತ್‌ ನೀಲ್‌ ಹುಟ್ಟು ಹಬ್ಬದ ಪ್ರಯುಕ್ತ ಸ್ಟಾರ್‌ ನಟರು ವಿಶ್‌ ಮಾಡುತ್ತಿದ್ದಾರೆ. ಕಾಲಿವುಡ್‌ ನಟ ಪೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದರು. ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ.

Written by - Krishna N K | Last Updated : Jun 4, 2023, 01:43 PM IST
  • ಇಂದು ನಿರ್ದೇಶಕ ಪ್ರಶಾಂತ್‌ ನೀಲ್‌ ಹುಟ್ಟು ಹಬ್ಬ.
  • ಸಲಾರ್‌ʼ ಸೆಟ್‌ನಲ್ಲಿ ಪ್ರಶಾಂತ್‌ ನೀಲ್‌ ಬರ್ತ್‌ಡೇ ಸೆಲೆಬ್ರೇಷನ್‌ ಮಾಡಲಾಯಿತು.
  • ನಟ ಪ್ರಭಾಸ್‌ ನೀಲ್‌ಗೆ ಕೇಕ್‌ ತಿನ್ನಿಸಿ ಹುಟ್ಟು ಹಬ್ಬದ ಶುಭ ಕೋರಿದರು.
ʼಸಲಾರ್‌ʼ ಸೆಟ್‌ನಲ್ಲಿ ಪ್ರಶಾಂತ್‌ ನೀಲ್‌ ಬರ್ತ್‌ಡೇ ಸೆಲೆಬ್ರೇಷನ್‌..! ಕೇಕ್‌ ತಿನ್ನಿಸಿದ ಡಾರ್ಲಿಂಗ್‌ title=

Happy birthday Prashanth Neel : ಇಂದು ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬ. ಸಲಾರ್ ಸೆಟ್‌ನಲ್ಲಿ ಚಿತ್ರತಂಡ ಅದ್ಧೂರಿಯಾಗಿ ಪ್ರಶಾಂತ್‌ ನೀಲ್‌ ಬರ್ತ್‌ಡೇ ಆಚರಣೆ ಮಾಡಿದೆ. ಈ ವೇಳೆ ನಟ ಪ್ರಭಾಸ್‌ ಕೂಡ ಇದ್ದು, ನೀಲ್‌ಗೆ ವಿಶ್‌ ಮಾಡಿದರು. ಈ ಕುರಿತ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ಅಲ್ಲದೆ, ನಿರ್ದೇಶಕ ಪ್ರಶಾಂತ್‌ ನೀಲ್‌ ಹುಟ್ಟು ಹಬ್ಬದ ಪ್ರಯುಕ್ತ ಸ್ಟಾರ್‌ ನಟರು ವಿಶ್‌ ಮಾಡುತ್ತಿದ್ದಾರೆ. ಕಾಲಿವುಡ್‌ ನಟ ಪೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದರು. ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ. ಪೃಥ್ವಿರಾಜ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶಾಂತ್ ನೀಲ್‌ಗಾಗಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಹುಟ್ಟುಹಬ್ಬದ ಶುಭಾಶಯಗಳು ಪ್ರಶಾಂತ್! ಜಗತ್ತು ನಿಮ್ಮಲ್ಲಿನ ಪ್ರತಿಭೆಯನ್ನು ಕೊಂಚವೇ ನೋಡಿದೆ! ನಿಮ್ಮೊಂದಿಗೆ ಕೆಲಸ ಮಾಡಲು ಖುಷಿ ತಂದಿದೆ, ಮುಂದೆನಾಗುತ್ತೆ ಅಂತ ತಿಳಿಯಲು ನಾನು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Keerthy Suresh: "ಶೀಘ್ರದಲ್ಲೇ ನನ್ನ ಮದುವೆಯನ್ನು ಅಧಿಕೃತವಾಗಿ ಪ್ರಕಟಿಸುತ್ತೇನೆ"

ʼಸಲಾರ್ʼ ಪ್ರಶಾಂತ್ ನೀಲ್ ಮತ್ತು ಡಾರ್ಲಿಂಗ್‌ ಪ್ರಭಾಸ್ ಕಾಂಬಿನೇಷನ್‌ನ ಮೊದಲ ಸಿನಿಮಾ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಸಲಾರ್ ಸೆಪ್ಟೆಂಬರ್ 28, 2023 ರಂದು ತೆರೆಗೆ ಬರಲಿದೆ. ಪ್ರಶಾಂತ್‌ ನೀಲ್‌ ಉಗ್ರಂ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು. ʼಕೆಜಿಎಫ್‌ʼದಿಂದ ಭಾರತೀಯ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡರು. ಸದ್ಯ ಪ್ರಭಾಸ್‌ ಜೊತೆ ಸಲಾರ್‌ ಹಾಗೂ ಜೂ. ಎನ್‌ಟಿಆರ್‌ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲಿದ್ದಾರೆ.

ಇದರ ಜೊತೆ ಕೆಜಿಎಫ್‌ ಚಾಪ್ಟರ್‌ 3 ಶೂಟಿಂಗ್‌ ಸ್ಟಾರ್ಟ್‌ ಆಗುತ್ತೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಅಲ್ಲದೆ ಇದುವರೆಗೂ ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಯಾವುದು ಅಂತ ಘೋಷಣೆಯಾಗಿಲ್ಲ. ಈ ನಿಟ್ಟಿನಲ್ಲಿ ರಾಕಿ ಫ್ಯಾನ್ಸ್‌ ಕೆಜಿಎಫ್‌ 3 ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆಯಾಗಿ ಕನ್ನಡದ ನಿರ್ದೇಶಕರೊಬ್ಬರು ಇಂದು ಭಾರತೀಯ ಸಿನಿರಂಗದ ದಿಗ್ಗಜ ನಟರ ಫೇವರಿಟ್‌ ಡೈರೆಕ್ಟರ್‌ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News