Rachitha Ram: 40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್: ಕಲ್ಟ್ ರೋಲ್‌ ಒಪ್ಪಿಕೊಂಡಿದ್ದೇಕೆ ನಟಿ!

Rachitha Ram Cult Role: ಚಂದನವನದ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ವಿಜಯ್ ಹಾಗೂ ಜಡೇಶ್ ಕಾಂಬಿನೇಷನ್‌ನ ಸಿನಿಮಾದಲ್ಲಿ 40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 13, 2024, 09:53 AM IST
  • ವಿಜಯ್‌ 50ರ ವಯಸ್ಸಿನ ಪಾತ್ರದಲ್ಲಿ ಅಭಿನಯಿಸುತ್ತಿದ್ದರೇ, ನಟಿ ರಚಿತಾ ರಾಮ್‌ 40 ವಯಸ್ಸು ದಾಟಿದ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
  • ನಟಿ ರಚಿತಾ ರಾಮ್‌ಗೆ ಡಿ ಗ್ಲಾಮರ್, ಕಲ್ಟ್ ರೋಲ್ ಇಷ್ಟ ಆಗಿದ್ದರಿಂದ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
  • ಸದ್ಯ ಡಿಂಪಲ್‌ ಕ್ವೀನ್‌ ಫ್ಯಾನ್ಸ್‌ ರಚಿತಾ ನಟಿಸುತ್ತಿರುವ ಎರಡು ಸಿನಿಮಾಗಳಿಗಾಗಿ ಕಾತುರದಿಂದ ಎದುರು ನೋಡುತ್ತಾ ಇದ್ದಾರೆ.
Rachitha Ram:  40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್: ಕಲ್ಟ್ ರೋಲ್‌ ಒಪ್ಪಿಕೊಂಡಿದ್ದೇಕೆ ನಟಿ! title=

Rachitha Ram In Duniya Vijay Film: ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ 40 ದಾಟಿದ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ನಟಿ ರಚಿತಾ ರಾಮ್‌ ವಿಜಯ್ ಹಾಗೂ ಜಡೇಶ್ ಕಾಂಬಿನೇಷನ್‌ನಲ್ಲಿ ಬಣ್ಣ ಹಚ್ಚುತ್ತಿದ್ದು, ಇದರಲ್ಲಿ ವಿಜಯ್‌ 50ರ  ವಯಸ್ಸಿನ ಪಾತ್ರದಲ್ಲಿ ಅಭಿನಯಿಸುತ್ತಿದ್ದರೇ, ನಟಿ ರಚಿತಾ ರಾಮ್‌ 40 ವಯಸ್ಸು ದಾಟಿದ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಜಡೇಶ್ "ರಚಿತಾ ಮೇಡಂಗೆ ನಾನು ಕಥೆ ಹೇಳಿದಾಗ ತುಂಬಾನೇ ಇಷ್ಟ ಪಟ್ಟರು. ನನಗೆ ಮೊದಲು ಭಯವಿತ್ತು. ಹೀರೋ ಸರ್ 50 ವರ್ಷ ಆಗಿದೆ ಅಂದರೆ, ರಚಿತಾ ಮೇಡಂಗೆ 40 ಪ್ಲಸ್ ಇದ್ದೇ ಇರುತ್ತೆ. ಇಂತಹದ್ದೇ ಹಳ್ಳಿ, ಕಲ್ಟ್ ಪಾತ್ರವನ್ನು ಅವರು ಮಾಡಿಲ್ಲ ಅಂತ ನಾನು ಅಪ್ರೋಚ್ ಮಾಡಿದೆ. ಅವರೂ ಬೆಸ್ಟ್ ಕ್ಯಾರೆಕ್ಟರ್ ಇರುವಂತಹ ಪಾತ್ರ ಮಾಡಬೇಕು ಅನ್ನೋ ಆಲೋಚನೆಯಲ್ಲಿ ಇದ್ದರು." ಎಂದು ಹೇಳಿದರು.

ಇದನ್ನೂ ಓದಿ: Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!

ನಟಿ ರಚಿತಾ ರಾಮ್‌ಗೆ  ಡಿ ಗ್ಲಾಮರ್, ಕಲ್ಟ್ ರೋಲ್ ಇಷ್ಟ ಆಗಿದ್ದರಿಂದ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಡೈರೆಕ್ಟರ್‌ ಜಡೇಶ್‌ "ಕ್ಯಾರೆಕ್ಟರ್ ಅಲ್ಟಿಮೇಟ್ ಆಗಿರಬೇಕು ಅನ್ನುವ ಆಲೋಚನೆಯಲ್ಲಿ ಇದ್ದರು. ನಾನು ಹೋಗಿ ಅಪ್ರೋಚ್ ಮಾಡಿದಾಗಿ ಅವರಿಗೆ ತುಂಬಾನೇ ಇಷ್ಟ ಆಯ್ತು. ನಾನು ಈ ಪಾತ್ರವನ್ನು ಮಾಡೇ ಮಾಡುತ್ತೇನೆ ಅಂತ ಮಾತು ಕೊಟ್ಟರು. ಆ ಮಾತಿನಂತೆ ಇದ್ದಾರೆ" ಎಂದು ಮಾತನಾಡಿದ್ದಾರೆ.

ಸದ್ಯ ಡಿಂಪಲ್‌ ಕ್ವೀನ್‌ ಫ್ಯಾನ್ಸ್‌ ರಚಿತಾ ನಟಿಸುತ್ತಿರುವ ಎರಡು ಸಿನಿಮಾಗಳಿಗಾಗಿ ಕಾತುರದಿಂದ ಎದುರು ನೋಡುತ್ತಾ ಇದ್ದಾರೆ. ಒಂದು 'ಸಂಜು ವೆಡ್ಸ್ ಗೀತಾ 2' ಚಿತ್ರವಾದರೇ, ಇನ್ನೊಂದು ದುನಿಯಾ ವಿಜಯ್‌ ಹಾಗೂ ಕಾಟೇರ ಜಡೇಶ್‌ ಕಾಂಬೋದ ಸಿನಿಮಾ. ಇನ್ನೇನು ರಚಿತಾ ಕಲ್ಟ್ ರೋಲ್‌ನಲ್ಲಿ ಯಾವ ರೀತಿ ಅಭಿನಯಿಸಲಿದ್ದಾರೆ, ಹೇಗೆ ಕಾಣಿಸಿಕೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News