ರಜನಿಕಾಂತ್ ಅಭಿಯನದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್​ ಬಿಡುಗಡೆ

ರೋಬೋ 2.0 ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಟೀಸರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಇದುವರೆಗೂ 1,123,204 ಜನ ವೀಕ್ಷಿಸಿದ್ದಾರೆ.

Last Updated : Sep 13, 2018, 11:41 AM IST
ರಜನಿಕಾಂತ್ ಅಭಿಯನದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್​ ಬಿಡುಗಡೆ title=

ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಚಿತ್ರ 2.0 ಟೀಸರ್ ಕಡೆಗೂ ಬಿಡುಗಡೆಯಾಗಿದೆ.

ಈ ಹಿಂದೆ ಎಂದಿರನ್(ರೋಬೊಟ್) ಚಿತ್ರ ನಿರ್ದೇಶಿಸಿ ಹಾಲಿವುಡ್ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಶಂಕರ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಹೀಗಾಗಿ ಸಿನಿಪ್ರಿಯರಲ್ಲಿ ಈ ಚಿತ್ರ ಮತ್ತಷ್ಟು ಕುತೂಹಲ ಮೂಡಿಸಿದೆ. ಕೆಲವು ತಿಂಗಳ ಹಿಂದೆ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಸಿನಿಮಾಗಾಗಿ ರೆಡಿಯಾಗುವ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಮೇಕಿಂಗ್ ವೀಡಿಯೋದಲ್ಲಿ ಎಲ್ಲ ತಂತ್ರಜ್ಞರು, ನಟರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಟೀಸರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಇದುವರೆಗೂ 1,123,204 ಜನ ವೀಕ್ಷಿಸಿದ್ದಾರೆ.

ಬಾಲಿವುಡ್ ನಟ ಅಕ್ಷಯ್​ ಕುಮಾರ್​ ಈ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಥ್ರಿಲ್ ಮೂಡಿಸಿದೆ. ರೋಬೋಟ್​ ಪಾತ್ರದಲ್ಲಿ ನಾಯಕ ರಜನಿಕಾಂತ್ ಮಿಂಚಿದ್ದು, ಎಂದಿನಂತೆ ಈ ಚಿತ್ರದಲ್ಲೂ ತಮ್ಮ ಸ್ಟೈಲ್​​​​ ತೋರಿಸಲಿದ್ದಾರೆ. ರೋಬೋ ಮೊದಲ ಆವೃತ್ತಿಯಲ್ಲಿ ವಸೀಗರನ್, ಚಿಟ್ಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಜನಿ, 2.0 ಚಿತ್ರದಲ್ಲಿ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಈ ಚಿತ್ರ ನಿರ್ಮಾಣಕ್ಕೆ ಬರೋಬ್ಬರಿ 540 ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಅಷ್ಟೇ ಅಲ್ಲದೆ ಸುಮಾರು 15 ಭಾಷೆಗಳಿಗೆ ಡಬ್ ಆಗಲಿರುವ ಈ ಚಿತ್ರ 3ಡಿ ರೂಪದಲ್ಲಿ ಸಿದ್ದಗೊಂಡಿದೆ. ಲೈಕಾ ಪ್ರೊಡಕ್ಷನ್ಸನಲ್ಲಿ ಕರಣ್ ಜೋವರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. 
 

Trending News