ಭಾರತೀಯ ಸಿನಿರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನ್ಯಾಷುನಲ್ ಕ್ರಷ್, ರಶ್ಮಿಕಾ ಮಂದಣ್ಣ ಅವರಿಗೆ ಕರ್ನಾಟಕ ಸಿನಿ ಪ್ರೇಕ್ಷಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್ʼ, ʼರಶ್ಮಿಕಾ ಬಾಯ್ಕಾಟ್ʼ ಎಂಬ ಪದ ಬಳಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಮಾಡಿದ ತಪ್ಪೇನು ಎಂದು ಅವರ ಕಟ್ಟಾಭಿಮಾನಿಗಳು ಕೇಳುತ್ತಿದ್ದಾರೆ.
ಕಿರಿಕ್ ಬೆಡಗಿ, ನ್ಯಾಷುನಲ್ ಕ್ರಷ್, ರಶ್ಮಿಕಾ ಮಂದಣ್ಣ ಅವರಿಗೆ ಕರುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡನಾಡಿನಿಂದ ರಶ್ಮಿಕಾ ಅವರನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್ʼ, ʼರಶ್ಮಿಕಾ ಬಾಯ್ಕಾಟ್ʼ ಎಂಬ ಹ್ಯಾಷ್ ಟ್ಯಾಗ್‌ಗಳು ಕೂಡಾ ಟ್ರೇಡಿಂಗ್ ಆಗುತ್ತಿವೆ.