ಗಂಟುಮೂಟೆ ನಿರ್ದೇಶಕಿಯ ಹೊಸ ಸಾಹಸ ʻಗೋಚರʼ

ಏಕಾಏಕಿ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ರೂಪಾ ರಾವ್ ನಿರ್ದೇಶನಕ್ಕೆ ಮರಳಿದ್ದಾರೆ. ಆ ಸಿನಿಮಾಕ್ಕೆ ʻಗೋಚರ' ಎಂಬ ಶೀರ್ಷಿಕೆ ನಿಗದಿಯಾಗಿದೆ.

Written by - YASHODHA POOJARI | Last Updated : Sep 14, 2024, 10:47 AM IST
  • ಗಂಟುಮೂಟೆ ಖ್ಯಾತಿಯ ನಿರ್ದೇಶಕಿ ರೂಪಾ ರಾವ್
  • ನಿರ್ದೇಶನಕ್ಕೆ ಮರಳಿರುವ ರೂಪಾ ರಾವ್
  • ಆ ಸಿನಿಮಾಕ್ಕೆ ʻಗೋಚರ' ಎಂಬ ಶೀರ್ಷಿಕೆ
ಗಂಟುಮೂಟೆ ನಿರ್ದೇಶಕಿಯ ಹೊಸ ಸಾಹಸ ʻಗೋಚರʼ  title=

ಯಾರೂ ಸಲೀಸಾಗಿ ಮುಟ್ಟಲಾಗದ ಕತೆಗೆ ದೃಶ್ಯರೂಪ ಕೊಟ್ಟು ಗೆಲುವು ಕಂಡವರು ನಿರ್ದೇಶಕಿ ರೂಪಾ ರಾವ್. ಈ ಹಿಂದೆ ʻಗಂಟುಮೂಟೆʼ ಎಂಬ ಭಿನ್ನ ಬಗೆಯ ಚಿತ್ರವನ್ನು ರೂಪಾ ರಾವ್ ನಿರ್ದೇಶನ ಮಾಡಿದ್ದರು. ಅದಕ್ಕಾಗಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿರಳವಾಗಿರುವ ನಿರ್ದೇಶಕಿಯರ ಸಾಲಿನಲ್ಲಿ ವಿಶಿಷ್ಟವಾದ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಹಭೆಯಾಡುತ್ತಿದ್ದಾಗಲೇ, ಏಕಾಏಕಿ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ರೂಪಾ ರಾವ್ ನಿರ್ದೇಶನಕ್ಕೆ ಮರಳಿದ್ದಾರೆ. ಆ ಸಿನಿಮಾಕ್ಕೆ ʻಗೋಚರ' ಎಂಬ ಶೀರ್ಷಿಕೆ ನಿಗದಿಯಾಗಿದೆ.

ಇದನ್ನೂ ಓದಿ: ಆ ನಟನ ಜೊತೆ ಸಾಯಿ ಪಲ್ಲವಿ... ಈ ಸುದ್ದಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್‌ ಗೆ ಬಿಗ್‌ ಸರ್‌ಪ್ರೈಸ್ !

ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ಈ ಕಾರಣದಿಂದಲೇ ರೂಪಾ ಗಂಟುಮೂಟೆಯ ಸೀಕ್ವೆಲ್ ಕೈಗೆತ್ತಿಕೊಳ್ಳುವ ನಿರೀಕ್ಷೆಯೂ ಇತ್ತು. ಇದೀಗ ಗೋಚರ ಘೋಷಣೆಯಾದ ಬೆನ್ನಿಗೇ ಇದು ಗಂಟುಮೂಟೆಯ ಮುಂದುವರೆದ ಭಾಗವಾ ಅಂತೊಂದು ಪ್ರಶ್ನೆ ಮೂಡಿದೆ. ಸದ್ಯಕ್ಕೆ ರೂಪಾ ರಾವ್ ಗೋಚರ ಎಂಬುದು ಗಂಟುಮೂಟೆಯ ನಂಟು ಕಳಚಿಕೊಂಡ ಚಿತ್ರ ಎಂಬಂತೆ ಪೋಸ್ಟರ್ ಮೂಲಕ ಸಂದೇಶ ರವಾನಿಸಿದ್ದಾರೆ.

ಗೋಚರ ಚಿತ್ರ ಯಾವ ಬಗೆಯದ್ದೆಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಇದೊಂದು ಟ್ರಾವೆಲ್ ಮೂವಿ ಎಂಬ ಏಕಮಾತ್ರ ಸುಳಿವಷ್ಟೇ ಸದ್ಯ ಚಿತ್ರತಂಡದ ಕಡೆಯಿಂದ ಸಿಕ್ಕಿದೆ. ಇದೆಲ್ಲ ಏನೇ ಇದ್ದರೂ ಗೋಚರ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿದೆ ಎಂಬಂಥಾ ಅಭಿಪ್ರಾಯಗಳು ಮೂಡಿಕೊಂಡಿವೆ. ನಿರ್ಮಾಪಕಿಯಾಗಿಯೂ ಭಿನ್ನ ಸಿನಿಮಾದ ಭಾಗವಾಗಿದ್ದ ರೂಪಾ ರಾವ್, ನಿರ್ದೇಶಕಿಯಾಗಿ ಬೆರಗಿನ ಕಥೆಯನ್ನೇ ಆಯ್ದುಕೊಂಡಿದ್ದಾರೆಂಬುದರಲ್ಲಿ ಸಂಶಯವೇನಿಲ್ಲ. ಗೋಚರದ ಬಗೆಗಿನ ಮಿಕ್ಕುಳಿದ ಮಾಹಿತಿಗಳು ಹಂತ ಹಂತವಾಗಿ ಗೋಚರಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಪ್ರಭಾಸ್ ಚೆಲುವೆಯ ಹಾಟ್ ಕ್ಲೀವೇಜ್ ಶೋ..! ಮಾಳವಿಕಾ ತುಂಬಾ ಹಾಟ್ ಗುರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News