ಆ ವ್ಯಕ್ತಿಯನ್ನು ಹೊಡೆಯಲು ಹೋಗಿದ್ರು ʼರಾಜಮೌಳಿʼ..! ಅಷ್ಟಕ್ಕೂ ಯಾರದು ಗೊತ್ತಾ..?

ʼರಾಜಮೌಳಿʼ ಸದ್ಯ ಜಗತ್ತಿನಾದ್ಯಂತ ಟ್ರೆಂಡಿಂಗ್‌ನಲ್ಲಿರುವ ಹೆಸರು. ಭಾರತೀಯ ಸಿನಿರಂಗವನ್ನು ನೆಕ್ಸ್ಟ್‌ ಲೆವೆಲ್‌ಗೆ ತೆಗೆದುಕೊಂಡು ಹೋದ ನಿರ್ದೇಶಕ ಎಸ್‌ಎಸ್‌ ರಾಜಮೌಳಿಯವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯಗಳು, ದೇಶಗಳು ಮತ್ತು ಖಂಡಗಳನ್ನೇ ದಾಟಿ ಪ್ರಖ್ಯಾತಿಗಳಿದ ವ್ಯಕ್ತಿ ಜಕ್ಕಣ್ಣ. ಕಳೆದ ವರ್ಷ ಇವರ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಜಗತ್ತಿನಾದ್ಯಂತ ಸಿನಿಪ್ರೇಮಿಗಳು ರಾಜಮೌಳಿಯವರ ಅದ್ಬುತ ದೃಶ್ಯಕಾವ್ಯ ಸಿನಿಮಾವನ್ನು ತಲೆಮೇಲೆ ಎತ್ತಿಕೊಂಡು ಮೆರೆದಾಡುತ್ತಿದ್ದಾರೆ.

Written by - Krishna N K | Last Updated : Mar 2, 2023, 05:12 PM IST
  • ʼರಾಜಮೌಳಿʼ ಸದ್ಯ ಜಗತ್ತಿನಾದ್ಯಂತ ಟ್ರೆಂಡಿಂಗ್‌ನಲ್ಲಿರುವ ಹೆಸರು.
  • ಭಾರತೀಯ ಸಿನಿರಂಗವನ್ನು ನೆಕ್ಸ್ಟ್‌ ಲೆವೆಲ್‌ಗೆ ತೆಗೆದುಕೊಂಡು ಹೋದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ.
  • ಅಂತಹ ರಾಜಮೌಳಿ ತನ್ನ ಬಾಲ್ಯದಲ್ಲಿ ಹಣದ ಹಿಂದೆ ಬಿದ್ದಿದ್ದರಂತೆ ಅಲ್ಲದೆ ವ್ಯಕ್ತಿಯೋರ್ವನನ್ನು ಹೊಡೆಯಲು ಮುಂದಾಗಿದ್ದರಂತೆ.
 ಆ ವ್ಯಕ್ತಿಯನ್ನು ಹೊಡೆಯಲು ಹೋಗಿದ್ರು ʼರಾಜಮೌಳಿʼ..! ಅಷ್ಟಕ್ಕೂ ಯಾರದು ಗೊತ್ತಾ..? title=

SS Rajamouli : ʼರಾಜಮೌಳಿʼ ಸದ್ಯ ಜಗತ್ತಿನಾದ್ಯಂತ ಟ್ರೆಂಡಿಂಗ್‌ನಲ್ಲಿರುವ ಹೆಸರು. ಭಾರತೀಯ ಸಿನಿರಂಗವನ್ನು ನೆಕ್ಸ್ಟ್‌ ಲೆವೆಲ್‌ಗೆ ತೆಗೆದುಕೊಂಡು ಹೋದ ನಿರ್ದೇಶಕ ಎಸ್‌ಎಸ್‌ ರಾಜಮೌಳಿಯವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯಗಳು, ದೇಶಗಳು ಮತ್ತು ಖಂಡಗಳನ್ನೇ ದಾಟಿ ಪ್ರಖ್ಯಾತಿಗಳಿದ ವ್ಯಕ್ತಿ ಜಕ್ಕಣ್ಣ. ಕಳೆದ ವರ್ಷ ಇವರ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಜಗತ್ತಿನಾದ್ಯಂತ ಸಿನಿಪ್ರೇಮಿಗಳು ರಾಜಮೌಳಿಯವರ ಅದ್ಬುತ ದೃಶ್ಯಕಾವ್ಯ ಸಿನಿಮಾವನ್ನು ತಲೆಮೇಲೆ ಎತ್ತಿಕೊಂಡು ಮೆರೆದಾಡುತ್ತಿದ್ದಾರೆ.

ಆದರೆ ಅಂತಹ  ಸ್ಟಾರ್‌ ನಿರ್ದೇಶಕ ರಾಜಮೌಳಿ ತನ್ನ ಬಾಲ್ಯದಲ್ಲಿ ಹಣದ ಹಿಂದೆ ಬಿದ್ದಿದ್ದರಂತೆ ಅಲ್ಲದೆ ವ್ಯಕ್ತಿಯೋರ್ವನನ್ನು ಹೊಡೆಯಲು ಮುಂದಾಗಿದ್ದರಂತೆ. ಈಗಂತ ನಾವು ಹೇಳುತ್ತಿಲ್ಲ ಬದಲಿವೆ ಅವರೇ ಸಂದರ್ಶನವೊಂದರಲ್ಲಿ ಈ ವಿಚಿತ್ರ ಮಾತು ಹೇಳಿದ್ದರು. ರಾಜಮೌಳಿ ಕುಟುಂಬದ ಸದಸ್ಯರೆಲ್ಲರೂ ಆಂಧ್ರಪ್ರದೇಶದ ಕೊವ್ವೂರಿನವರು. ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಸಿನಿಮಾ ಬರಹಗಾರರಾಗಿ ಮದ್ರಾಸಿಗೆ ಹೋದರು. ಅವರ ಜೊತೆ ಅವರ ಕುಟುಂಬವೂ ಅಲ್ಲಿಗೆ ಹೋಗಿತ್ತು.

ಇದನ್ನೂ ಓದಿ: ʼವಿಠಲ್ ಮಲೆಕುಡಿʼ ಕಾನೂನು ಹೋರಾಟದ ರೋಚಕ ಕಥೆ ʼ19.20.21ʼ ನಾಳೆ ರಿಲೀಸ್‌..!

ಮದ್ರಾಸಿಗೆ ಹೋದಾಗ ಅವಕಾಶಗಳು ಸುಲಭವಾಗಿ ಸಿಗಲಿಲ್ಲ. ಹಲವು ಪ್ರಯತ್ನಗಳ ನಂತರ ನನಗೆ ಘೋಸ್ಟ್ ರೈಟರ್ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ ಅಂದು ಸಿನಿಮಾ ಬರಹಗಾರರಿಗೆ ಯಾವಾಗ ಸಂಬಳ ಸಿಗುತ್ತೇ ಎನ್ನುವುದೋ ದೊಡ್ಡ ಪ್ರಶ್ನೆಯಾಗಿತ್ತು. ಅಲ್ಲದೆ, ಕೀರವಾಣಿ ಸಂಪಾದನೆಯಲ್ಲಿ ಸುಮಾರು 17, 18 ಮಂದಿ ಬದುಕುತ್ತಿದ್ದರು. ಆಗ ಕೀರವಾಣಿಯವರು ದೊಡ್ಡ ಸಂಗೀತ ನಿರ್ದೇಶಕರೊಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಬಂದ ಹಣದಲ್ಲಿ ಅವರ ಇಡೀ ಕುಟುಂಬ ಬದುಕುತ್ತಿತ್ತು.

ಆದರೆ ತಮ್ಮ ತಂದೆಯ ಘೋಸ್ಟ್ ರೈಟರ್ ಸಂಭಾವನೆ ಹಣ ಬಂದಾಗ ಕೊಡುವುದಾಗಿ ಹೇಳಿ ಸಮೀಪದ ತರಕಾರಿ ಅಂಗಡಿಯಲ್ಲಿ ಸಾಲ ಮಾಡಿ ಸಾಮಾನು ತರಿಸಿಕೊಳ್ಳುತ್ತಿದ್ದರು. ಒಂದು ದಿನ ರಾಜಮೌಳಿ ತರಕಾರಿ ವ್ಯಾಪಾರಿಯೊಬ್ಬರ ಬಳಿ ಹೋಗಿ ಒಂದು ಕೆಜಿ ಟೊಮೇಟೊ ಕೊಡುವಂತೆ ಕೇಳಿದ್ದರಂತೆ. ಆಗ ಅಂಗಡಿಯವನು ಸ್ವಲ್ಪ ಹೊತ್ತು ನಿಲ್ಲುವಂತೆ ಹೇಳಿದರು. ಈ ಘಟನೆಯನ್ನು ರಾಜಮೌಳಿ ಅವಮಾನವೆಂದು ಭಾವಿಸಿದರು. ಇದೇ ವೇಳೆ ಸಾಕಷ್ಟು ಹಣ ಗಳಿಸಬೇಕು ಮತ್ತು ಅಂಗಡಿಯವನಿಗೆ ಹೊಡೆಯಬೇಕು ಅಂತ ನಿರ್ಧರಿಸಿದ್ದರಂತೆ. ಈಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ ಎಂದು ರಾಜಮೌಳಿಯವರು ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News