ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಅಭಿನಯದ ʻರನ್ವೇ 34ʼ ಮೋಷನ್ ಪೋಸ್ಟರ್ ರಿಲೀಸ್....!

ಅಜಯ್ ದೇವಗನ್ ನಿರ್ದೇಶನದ ಬಹುನಿರೀಕ್ಷಿತ ರನ್ವೇ 34 ಚಿತ್ರದ  ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.

Written by - SHILPA RAJAN | Last Updated : Mar 12, 2022, 08:55 PM IST
  • ಈ ಚಿತ್ರದಲ್ಲಿನ ಪ್ರಮುಖ ಪಾತ್ರದಲ್ಲಿ ಅಜಯ್, ಅಮಿತಾಬ್ ಬಚ್ಚನ್ (Amitabh Bachchan) ಮತ್ತು ರಾಕುಲ್ ಪ್ರೀತ್ ಸಿಂಗ್ Rakul Preet Singh ನಟಿಸಿದ್ದಾರೆ
ಅಜಯ್ ದೇವಗನ್, ಅಮಿತಾಬ್ ಬಚ್ಚನ್  ಅಭಿನಯದ ʻರನ್ವೇ 34ʼ ಮೋಷನ್ ಪೋಸ್ಟರ್ ರಿಲೀಸ್....! title=

ಮುಂಬೈ: ಅಜಯ್ ದೇವಗನ್ ನಿರ್ದೇಶನದ ಬಹುನಿರೀಕ್ಷಿತ ರನ್ವೇ 34 ಚಿತ್ರದ  ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿನ ಪ್ರಮುಖ ಪಾತ್ರದಲ್ಲಿ ಅಜಯ್, ಅಮಿತಾಬ್ ಬಚ್ಚನ್ (Amitabh Bachchan) ಮತ್ತು ರಾಕುಲ್ ಪ್ರೀತ್ ಸಿಂಗ್ Rakul Preet Singh ನಟಿಸಿದ್ದಾರೆ.ನೈಜ ಘಟನೆಗಳ ಆಧಾರದ ಮೇಲೆ ಚಿತ್ರೀಕರಿಸಲಾಗಿದೆ.ಏಪ್ರಿಲ್ 29 ರಂದು ಚಿತ್ರ ಬಿಡುಗಡೆಯಾಗಲಿದೆ.

ರನ್‌ವೇ 34 ಚಿತ್ರವು 2016ರಲ್ಲಿ ಶಿವಾಯ್ ನಂತರ ಅಜಯ್ ದೇವಗನ್ ನಿರ್ದೇಶಕರ ಕುರ್ಚಿಗೆ ಈ ಚಿತ್ರದ ಮೂಲಕ ಮರಳಿದ್ದಾರೆ. ಅಮಿತಾಬ್ ಬಚ್ಚನ್ ಒಳಗೊಂಡ ಮೋಷನ್ ಪೋಸ್ಟರ್ ಅದ್ಭುತವಾಗಿದೆ.ಅದನ್ನು ಹಂಚಿಕೊಂಡ ಅಜಯ್ ಮೋಷನ್ ಪೋಸ್ಟರ್‌ಗೆ, "ಬ್ರೇಸ್ ಫಾರ್ ದ ಅನ್‌ ಎಕ್ಸಪೆಕ್ಟೆಡ್" ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: ಏಕಾಏಕಿ Twitter ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಟ್ರೆಂಡಿಂಗ್ ಆಗಿದ್ದೇಕೆ?

ಅಜಯ್ ದೇವಗನ್ ಎಫ್‌ಫಿಲ್ಮ್ಸ್ ನಿರ್ಮಿಸಿರುವ ʻರನ್‌ವೇ 34ʼ ಅನ್ನು ಕುಮಾರ್ ಮಂಗತ್ ಪಾಠಕ್, ವಿಕ್ರಾಂತ್ ಶರ್ಮಾ, ಸಂದೀಪ್ ಹರೀಶ್ ಕೆವ್ಲಾನಿ, ತರ್ಲೋಕ್ ಸಿಂಗ್ ಜೇಥಿ, ಹಸ್ನೇನ್ ಹುಸೇನಿ ಮತ್ತು ಜೇ ಕನುಜಿಯಾ ಸಹ-ನಿರ್ಮಾಣ ಮಾಡುತ್ತಿದ್ದಾರೆ. ಡ್ರಾಮಾ ಥ್ರಿಲ್ಲರ್ ಕಥಾವಸ್ತುವಿನೊಂದಿಗೆ, ರನ್ವೇ 34 ನೈಜ ಘಟನೆಗಳಿಂದ ಪ್ರೇರಿತವಾಗಿದೆ.

ಈ ಚಿತ್ರವು 2015 ರ ಜೆಟ್ ಏರ್‌ವೇಸ್ ದೋಹಾ-ಕೊಚ್ಚಿ ವಿಮಾನವನ್ನು ಆಧರಿಸಿದೆ.ಪೋಸ್ಟರ್‌ಗಳು ಮತ್ತು ಫಸ್ಟ್ ಲುಕ್ ನೋಡಿದಾಗ, ಅಜಯ್ ಮತ್ತು ರಾಕುಲ್ ಪ್ರೀತ್ ಚಿತ್ರದಲ್ಲಿ ಪೈಲಟ್‌ಗಳಾಗಿ ನಟಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News