'ಯಕ್ಷ'ನ ಬಾಳಿಗೆ ಎಂಟ್ರಿ ಕೊಟ್ಟ 'ಸಾಹಿತ್ಯ'

                  

Last Updated : Oct 30, 2017, 01:40 PM IST
'ಯಕ್ಷ'ನ ಬಾಳಿಗೆ ಎಂಟ್ರಿ ಕೊಟ್ಟ 'ಸಾಹಿತ್ಯ'  title=
Pic: Youtube

'ದುನಿಯಾ'ದ ಅಲೆಮಾರಿ ಈಗ ಸಂಸಾರಿ ಆಗಲು ಹೊರಟಿದ್ದಾರೆ. ಲೂಸ್ ಮಾದ ಯೋಗೀಶ್ ಹಾಗೂ ಸಾಹಿತ್ಯ ಮದುವೆಗೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ನವೆಂಬರ್ 2 ರಂದು ಯೋಗಿ ತಮ್ಮ ಬಹುದಿನಗಳ ಗೆಳತಿ ಸಾಹಿತ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ.

ಬೆಂಗಳೂರಿಯ ಕೋಣನಕುಂಟೆಯಲ್ಲಿರುವ ಯೋಗಿ ಮನೆಯಲ್ಲಿ ಇಂದು ಚಪ್ಪರ ಪೂಜೆ, ನಡೆಯುತ್ತಿದೆ. ಅರಶಿನದ ಶಾಸ್ತ್ರ , ಬಳೆ ಶಾಸ್ತ್ರ, ಅರಶಿನ ಕುಟ್ಟುವ ಶಾಸ್ತ್ರ, ಮಂಗಳ ಸ್ನಾನ, ಅಕ್ಕಿ ಹಸೆ ಶಾಸ್ತ್ರ ಇನ್ನೂ ಮೊದಲಾದ ಶಾಸ್ತ್ರಗಳು ಇಂದು ನಡೆಯಲಿವೆ.

ಲೂಸ್ ಮಾದ ಯೋಗೇಶ್ ವೆಡ್ಸ್ ಸಾಹಿತ್ಯ ಹಿಂದೂ ಸಂಪ್ರದಾಯದ ಪ್ರಕಾರ ನಡೆಯುತ್ತಿದೆ ಎಂದು ಕುಟುಂಬ ತಿಳಿಸಿದೆ.

Trending News