vaibhav suryavanshi: ಎಲ್ಲರೂ ಸಾಕಷ್ಟು ಕುತೂಹಲದಿಂದ ಕಾದು ಕುಳಿತಿದ್ದ ಐಪಿಎಲ್ ಮೆಗಾ ಹರಾಜು ನಡೆದು ಮುಗಿದಿದೆ, ಸ್ಟಾರ್ ಆಟಗಾರರು ವಿವಿಧ ತಂಡಗಳನ್ನು ಸೇರಿದ್ದಾರೆ. ಇನ್ನೂ, ಯಾರು ಕೂಡ ನಿರೀಕ್ಷಿಸದ ಬೆಲವಣಿಗೆಗಳು ತಂಡದಲ್ಲಿ ನಡೆದಿದ್ದು, ಕೊಲವೊಂದು ಅಂಶಗಳು ಅಭಿಮಾನಿಗಳಿಗೆ ಖಷಿಯನ್ನುಂಟು ಮಾಡಿದ್ದರೆ, ಇನ್ನೂ ಕೆಲವು ಅಂಶಗಳು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಅದರಲ್ಲೂ, ಐಪಿಎಲ್‌ನಲ್ಲಿ ಈ ಭಾರಿ ಸಾಕಷ್ಟು ದಾಖಲೆಗಳು ಸೃಷ್ಟಿಯಾಗಿವೆ, ಈ ಭಾರಿಯ ಮೆಗಾ ಹರಾಜು ಇತಿಹಾಸವನ್ನೆ ಸೃಷ್ಟಿಸಿದೆ ಎಂದು ಹೇಳಬಹುದು. ಹೌದು, ಕಳೆದ ವರ್ಷ ವಿದೇಶಿ ಆಟಗಾರರು ಬಾರಿ ಮೊತ್ತಕ್ಕೆ ಸೇಲ್ ಆಗುವ ಮೂಲಕ ದಾಖಲೆ ಬರೆಇದ್ದರು, ಇದು ದೇಶಿಯ ಅಭಿಮಾನಿಗಳಲ್ಲಿ ನಿರಶೆಯನ್ನುಂಟು ಮಾಡಿತ್ತು, ಭಾರತ ತಂಡದ ಆಟಗಾರರನ್ನು ಕಡೆಗಣಿಸಿದ ಕಾರಣಕ್ಕಾಗಿ ಎಲ್ಲರೂ ಗರಂ ಆಗಿದ್ದರು, ಆದರೆ, ಈ ಭಾರಿಯ ಸೀನ್ ಕಂಪ್ಲೀಟ್ ಚೇಂಜ್ ಆಗಿದೆ.
ಈ ಭಾರಿಯ ಮಎಗಾ ಹರಾಜಿನಲ್ಲಿ ಬಾರತ ತಂಡದ ಆಟಗಾರರು ದಾಕಲೆಯ ಮಟ್ಟಕ್ಕೆ ಸೇಲ್ ಆಗಿದ್ದಾರೆ. ರಿಷಬ್ ಪಂತ್ ಅವರು 27 ಕೋಟಿಗೆ ಹರಜಾಗುವ ಮೂಲಕ ದಾಕಲೆ ಬರೆದಿದ್ದರೆ, ಶ್ರೇಯಸ್ ಐಯ್ಯರ್ 23.7 ಕೋಟಿಗೆ ಸೇಲ್ ಆಗುವ ಮೂಲಕ ಈ ಭಾರಿಯ ಐಪಿಎಲ್ ಹರಾಜಿನಲ್ಲಿ ಸದ್ದು ಮಾಡಿದ್ದಾರೆ.
ಇದರ ಮಧ್ಯೆ, 13 ವರ್ಷದ ಯುವಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾನೆ, ಐಪಿಎಲ್ ಹರಾಜಿಗಿಳಿದ ಅತ್ಯಂತ ಕಿರಿಯ ಆಟಗಾರ 1.10 ಕೋಟಿಗೆ ಹರಾಜಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಬಿಹಾರದ ಈ ಬಾಲಕನನ್ನು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದೆ. ವೈಭವ್ ಸೂರ್ಯ ವಂಶಿ ಈ ದಾಕಲೆಯನ್ನು ಮಾಡಿದ್ದಾರೆ. 2011ರಲ್ಲಿ ಭಾರತ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ವರ್ಷದಲ್ಲಿ ಜನಿಸಿದ ಈ ಹುಡುಗ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಿದ್ಧನಾಗಿದ್ದಾನೆ.
ಬಿಹಾರದ ವೈಭವ್ ಸೂರ್ಯವಂಶಿ ಕೂಡ 19 ವರ್ಷದೊಳಗಿನವರ ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿರುವ ಇವರು ಈ ಭಾರಿಯ ಮೆಗಾ ಹರಾಜಿಗೆ ಲಭ್ಯವಿದ್ದರು. ಆಸ್ಟ್ರೇಲಿಯದ ಅಂಡರ್-19 ತಂಡದ ವಿರುದ್ಧ ಯೂತ್ ಟೆಸ್ಟ್‌ನಲ್ಲಿ ಸೂರ್ಯ ವಂಶಿ ಶತಕ ಸಿಡಿಸಿದ್ದು, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಇತಿಹಾಸ ಬರೆದಿದ್ದರು. ಈ ಪಂದ್ಯದಲ್ಲಿ ವೈಭವ್ 62 ಎಸೆತಗಳಲ್ಲಿ 104 ರನ್ ಗಳಿಸಿದ್ದರು.
ಸದ್ಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಇವರು, ಇದೀಗ 1 ಕೋಟಿ 10 ಲಕ್ಷಕ್ಕೆ ಸೇಲ್ ಆಗುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗಿ ಇತಿಹಾಸ ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.