ಖ್ಯಾತ ಬಾಲಿವುಡ್ ನಟ Sanjay Dutt ಲೀಲಾವತಿ ಆಸ್ಪತ್ರೆಗೆ ದಾಖಲು

ಉಸಿರಾಟದ ತೊಂದರೆಯ ಕಾರಣ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ ಅವರನ್ನು ಇಂದು ಸಂಜೆ 4 ಗಂಟೆಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್ ದತ್ ಅವರಿಗೆ ಎದೆಯಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

Updated: Aug 8, 2020 , 11:31 PM IST
ಖ್ಯಾತ ಬಾಲಿವುಡ್ ನಟ Sanjay Dutt ಲೀಲಾವತಿ ಆಸ್ಪತ್ರೆಗೆ ದಾಖಲು

ಮುಂಬೈ: ಉಸಿರಾಟದ ತೊಂದರೆಯ ಕಾರಣ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ (Sanjay Dutt) ಅವರನ್ನು ಇಂದು ಸಂಜೆ 4 ಗಂಟೆಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್ ದತ್ ಅವರಿಗೆ ಎದೆಯಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ 61 ವರ್ಷ ವಯಸ್ಸಿನ ಸಂಜಯ್ ದತ್ ಅವರು ಕೊವಿಡ್-19 ಎಂಟಿಜೇನ್ ಟೆಸ್ಟ್ ನಡೆಸಲಾಗಿದ್ದು, ಟೆಸ್ಟ್ ವರದಿ ನಕಾರಾತ್ಮಕ ಬಂದಿದೆ. ಅವರ ಸ್ವ್ಯಾಬ್ ಟೆಸ್ಟ್ ಕೂಡ ನಡೆಸಲಾಗಿದೆ. ಆದರೆ, ಅದರ ವರದಿ ಇನ್ನೂ ಬಂದಿಲ್ಲ.

ಈ ಕುರಿತು ಮಾತನಾಡಿರುವ ಲೀಲಾವತಿ ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್ ಡಾ. ವಿ. ಶಿವಶಂಕರ್, ಆಸ್ಪತ್ರಗೆ ದಾಖಲಾಗುವ ವೇಳೆ ಸಂಜಯ್ ದತ್ ಅವರ ದೇಹದ ಆಮ್ಲಜನಕದ ಮಟ್ಟದಲ್ಲಿ ಏರಿಳಿತ ಗಮನಿಸಲಾಗಿದೆ. ಆದರೆ, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಸಂಜಯ್ ದತ್ ಅವರನ್ನು ನಾನ್ ಕೊವಿಡ್ ವಾರ್ಡ್ ನಲ್ಲಿ ದಾಖಲಿಸಲಾಗಿದ್ದು, ವೈದ್ಯರ ತಂಡ ಅವರ ಆರೋಗ್ಯ ಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿದೆ. ಅವರನ್ನು ಹಲವು ಟೆಸ್ಟ್ ಗಳಿಗೆ ಒಳಪಡಿಸಲಾಗಿದೆ ಎಂದು ಡಾ. ಶಿವಶಂಕರ್ ಹೇಳಿದ್ದಾರೆ.