ಸಾರಾ ಅಲಿ ಖಾನ್ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೂ ನಿಬ್ಬೆರಗಾಗುವಿರಿ

ಇದೀಗ ಸಾರಾ ಹಂಚಿಕೊಂಡಿರುವ ಅವರ 'ತೇಲ್ ಮಾಲಿಶ್' ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಸಾರಾಳ ಅತ್ಯಂತ ಹಳೆ ವಿಡಿಯೋ ಇದಾಗಿದ್ದು, ಇದರಲ್ಲಿ ಸಾರಾ ಸೈಜ್ ನೋಡಿ ನೀವು ನಿಬ್ಬೆರಗಾಗುವಿರಿ. ವಿಡಿಯೋ ಹಿನ್ನೆಲೆಯಲ್ಲಿ 'ಸರ್ ಜೋ ತೇರಾ ಚಕರಾಯೇ' ಹಾಡು ಕೇಳಿ ಬರುತ್ತಿದೆ.

Updated: Jan 28, 2020 , 07:48 PM IST
ಸಾರಾ ಅಲಿ ಖಾನ್ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೂ ನಿಬ್ಬೆರಗಾಗುವಿರಿ

ನವದೆಹಲಿ: ಖ್ಯಾತ ಬಾಲಿವುಡ್ ಅತಿ ಸಾರಾ ಅಲಿ ಖಾನ್ ಸದ್ಯ ತಮ್ಮ ಮುಂಬರುವ ಚಿತ್ರ 'ಲವ್ ಆಜ್ ಕಲ್' ಚಿತ್ರದ ಪ್ರಚಾರದಲ್ಲಿ ಬ್ಯೂಸಿ ಆಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಸಾಕಷ್ಟು ಸಕ್ರೀಯರಾಗಿರುವ ಸಾರಾ, ತಮ್ಮ ಹಲವಾರು ಭಾವಚಿತ್ರಗಳು ಹಾಗೂ ವಿಡಿಯೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರ 'ತೇಲ್ ಮಾಲಿಶ್' ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಸಾರಾಳ ಅತ್ಯಂತ ಹಳೆ ವಿಡಿಯೋ ಇದಾಗಿದ್ದು, ಇದರಲ್ಲಿ ಸಾರಾ ಸೈಜ್ ನೋಡಿ ನೀವು ನಿಬ್ಬೆರಗಾಗುವಿರಿ. ವಿಡಿಯೋ ಹಿನ್ನೆಲೆಯಲ್ಲಿ 'ಸರ್ ಜೋ ತೇರಾ ಚಕರಾಯೇ' ಹಾಡು ಕೇಳಿ ಬರುತ್ತಿದೆ.

ಸಾರಾಳ ಈ ವಿಡಿಯೋ ನೋಡಿದ ಹಲವರು ಆಶ್ಚರ್ಯಚಕಿತರಾಗಿದ್ದಾರೆ. ತಮ್ಮ ಶರೀರದ ತೂಕ ಇಳಿಸಲು ಸಾರಾ ಯಾವರೀತಿ ಶ್ರಮಪಟ್ಟಿದ್ದಾರೆ ಎಂಬುದು ಈ ವಿಡಿಯೋ ನೋಡಿ ನೀವು ಊಹಿಸಬಹುದಾಗಿದೆ. ಈ ವಿಡಿಯೋ ಅನ್ನು ಹಂಚಿಕೊಂಡಿರುವ ಸಾರಾ, "ಸಾರಾ ಕಾ ಸಾರಾ ಕಾ ಸಾರಾ.." ಎಂದು ಬರೆದುಕೊಂಡಿದ್ದಾರೆ. ವಿಮಾನವೊಂದರಲ್ಲಿ ಚಿತ್ರೀಕರಿಸಲಾಗಿರುವ ಈ ವಿಡಿಯೋದಲ್ಲಿ ಸಾರಾ ಸ್ನೇಹಿತೆಯರೂ ಕೂಡ ಕಾಣಿಸಿಕೊಂಡಿದ್ದಾರೆ. ವಿಡಿಯೋ ಅನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು ಭಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇತ್ತ ಸಾರಾ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಶೀಘ್ರದಲ್ಲಿಯೇ ಸಾರಾ ಹಾಗೂ ಕಾರ್ತಿಕ್ ಅಭಿನಯದ 'ಲವ್ ಆಜ್ ಕಲ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾರಾ ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ಬಿಡುಗಡೆಯಾಗುತ್ತಲೇ ಈ ಇಬ್ಬರನ್ನು ಬೆಳ್ಳಿ ಪರದೆಯ ಮೇಲೆ ನೋಡಬಯಸುವ ಅವರ ಅಭಿಮಾನಿಗಳ ತವಕ ಇನ್ನೂ ಹೆಚ್ಚಿಸಿವೆ. ಈ ಟ್ರೈಲರ್ ನಲ್ಲಿ ಸಾರಾ, ನಟ ಕಾರ್ತಿಕ್ ಆರ್ಯನ್ ಜೊತೆ ಲಿಪ್ ಲಾಕ್ ನಡೆಸುತ್ತಿರುವುದನ್ನು ಕೂಡ ತೋರಿಸಲಾಗಿದೆ. ಈ ಮೊದಲು ಎಂದಿಗೂ ಕೂಡ ಸಾರಾ ಈ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಚಿತ್ರದಲ್ಲಿ ಒಟ್ಟು ಎರಡು ಪ್ರೇಮಕಥೆಗಳನ್ನು ತೋರಿಸಲಾಗಿದೆ. ಮೊದಲ ಲವ್ ಸ್ಟೋರಿ 1990ರ ಲವ್ ಸ್ಟೋರಿ ಆಗಿದ್ದು ಆಗ ಕಾರ್ತಿಕ್ ಸ್ಕೂಲ್ ನಲ್ಲಿರುವುದನ್ನು ತೋರಿಸಲಾಗಿದೆ. ಎರಡನೇ ಲವ್ ಸ್ಟೋರಿ 2020 ಕಥಾ ಹಂದರ ಹೊಂದಿದೆ.

ಟ್ರೈಲರ್ ನಲ್ಲಿ ಕಾರ್ತಿಕ್ ಅವರಿಗೆ ಸಾರಾ ಜೊತೆ ಲವ್ ಆಗುವುದನ್ನು ತೋರಿಸಲಾಗಿದೆ. ಆದರೆ, ಸಾರಾ ಪಾಲಿಗೆ ಅವರ ಕರಿಯರ್ ತುಂಬಾ ಮಹತ್ವದ್ದಾಗಿರುತ್ತದೆ. ಆದರೂ ಸಹ ಕಾರ್ತಿಕ್ ಸಾರಾ ಮನಸ್ಸಿನಲ್ಲಿ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಟ್ರೈಲರ್ ನಲ್ಲಿ ಸಾರಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕಸ್ಮಿಕವಾಗಿ ಟ್ರೈಲರ್ ನಲ್ಲಿ ಟ್ವಿಸ್ಟ್ ಎದುರಾಗುತ್ತಿದ್ದು, ಇದರಲ್ಲಿ ಸಾರಾ ತಾನು ಕರಿಯರ್ ಹಾಗೂ ಕಾರ್ತಿಕ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿರುವುದಾಗಿ ಹೇಳುತ್ತಾರೆ. ಈ ವೇಳೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಸಂಬಂಧ ಮುರಿದುಹೋಗುವ ಹಂತ ತಲುಪುತ್ತದೆ.

ಚಿತ್ರದಲ್ಲಿ ಕಾರ್ತಿಕ್ 'ವೀರ್' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರೆ, ಸಾರಾ 'ಜೋಯಿ' ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಆರುಷಿ ಶರ್ಮಾ (ಹೊಸ ಪರಿಚಯ) ಮುಖ್ಯ ಭೂಮಿಕೆಯಲ್ಲಿದ್ದಾರೆ. ಆರುಷಿ ಜೊತೆ ಕಾರ್ತಿಕ್ ಅವರ 1990 ಲವ್ ಸ್ಟೋರಿ ಅನ್ನು ತೋರಿಸಲಾಗಿದೆ.

ಖ್ಯಾತ ನಿರ್ದೇಶಕ ಕರಣ್ ಜೋಹರ್ ಷೋನಲ್ಲಿ ಪಾಲ್ಗೊಂಡಿದ್ದ ಸಾರಾ ತಾವು ಕಾರ್ತಿಕ್ ಜೊತೆ ಡೇಟ್ ನಡೆಸುತ್ತಿರುವುದಾಗಿ ಹೇಳಿದ್ದರು. 'ಲವ್ ಆಜ್ ಕಲ್' ಚಿತ್ರದ ನೆಪದಲ್ಲಿ ಒಟ್ಟಿಗೆ ಬಂದ ಈ ಜೋಡಿಯ ಮಧ್ಯೆ ಬಳಿಕ ಸ್ನೇಹ ಚಿಗುರಿದೆ. ಹಲವು ಬಾರಿ ಈ ಇಬ್ಬರನ್ನು ಒಟ್ಟಿಗೆ ನೋಡಲಾಗಿದ್ದು, ಬಳಿಕ ಆಕಸ್ಮಿಕವಾಗಿ ಈ ಇಬ್ಬರು ಬೇರೆ ಬೇರೆಯಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ಈ ಚಿತ್ರ ವ್ಯಾಲೆಂಟೈನ್ ಡೇ ಅಂದರೆ ಫೆಬ್ರುವರಿ 14ಕ್ಕೆ ಬಿಡುಗಡೆಯಾಗಲಿದೆ. ಸಾರಾ-ಕಾರ್ತಿಕ್ ಜೊತೆ ಈ ಚಿತ್ರದಲ್ಲಿ ರಣದೀಪ್ ಹುಡ್ಡಾ ಅವರೂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ದೀಪಿಕಾ ಪಡುಕೋಣೆ ಹಾಗೂ ಸೈಫ್ ಅಲಿ ಖಾನ್ ಅಭಿನಯದ 'ಲವ್ ಆಜ್ ಕಲ್' ಚಿತ್ರದ ಸಿಕ್ವಲ್ ಆಗಿದೆ.