ಕಿಂಗ್‌ ಖಾನ್‌ ಜೊತೆ ರಾಕಿಭಾಯ್ ಹೊಸ ಸಿನಿಮಾ: ಸಿನಿಪ್ರಿಯರು ಸಖತ್‌ ಥ್ರೀಲ್!

Yash And Shah Rukh: ಚಂದನವನದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಇಬ್ಬರೂ ಒಟ್ಟಾಗಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗಾದ್ರೆ ಇವರಿಬ್ಬರು ಯಾವ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Jan 30, 2024, 02:48 PM IST
  • ಇತ್ತೀಚೆಗೆ ಶಾರುಖ್ ಖಾನ್ ಜೊತೆಗೆ ಯಶ್ ಹೊಸ ಸಿನಿಮಾ ಮಾಡಲಿದ್ದು, ಇದನ್ನು ಸ್ವತಃ ಶಾರುಖ್ ಅವರ ರೆಡ್ ಚಿಲ್ಲೀಸ್ ಸಂಸ್ಥೆಯೇ ನಿರ್ಮಾಣ ಮಾಡಲಿದೆಯಂತೆ ಎಂಬ ಮಾಹಿತಿ ದೊರಕಿದೆ.
  • ಈ ಕ್ರೇಜಿ ಪ್ರಾಜೆಕ್ಟ್‌ ಬಗ್ಗೆ ಶಾರುಖ್ ಖಾನ್ ಆಗಲಿ, ಯಶ್ ಆಗಲಿ ರಿಯಾಕ್ಷನ್ ನೀಡಿಲ್ಲ. ಅದೇ ರೀತಿ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಸಹ ಇದರ ಬಗ್ಗೆ ಏನೊಂದು ಪ್ರತಿಕ್ರಿಯೆಯನ್ನು ನೀಡಿಲ್ಲ.
  • ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್‌ ಮಾನ್‌ಸ್ಟಾರ್‌ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿನಿಮಾ ಶುರುವಾಗಿದೆ. ಸದ್ಯ ಶ್ರುತಿ ಹಾಸನ್ ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾಹಿತಿ ಇದೆ.
ಕಿಂಗ್‌ ಖಾನ್‌ ಜೊತೆ ರಾಕಿಭಾಯ್ ಹೊಸ ಸಿನಿಮಾ: ಸಿನಿಪ್ರಿಯರು ಸಖತ್‌ ಥ್ರೀಲ್! title=

Yash And Shah Rukh Khan Combo: ಸ್ಯಾಂಡಲ್‌ವುಡ್‌ ಅಂಗಳದಲ್ಲಿ 'ರಾಕಿಂಗ್ ಸ್ಟಾರ್‌' ಯಶ್ ಸಿನಿಮಾಗಳ ಮೇಲೆ ಸದ್ಯ ಎಲ್ಲಿಲ್ಲದ ನಿರೀಕ್ಷೆ ಹುಟ್ಟುಕೊಂಡಿದ್ದು, ಮುಂದೆ ಯಾವ ಸಿನಿಮಾ ಮಾಡಲಿದ್ದಾರೆ ಎಂಬೆಲ್ಲ ಪ್ರಶ್ನೆಗಳು ಅಭಿಮಾನಿಗಳಲ್ಲಿ ಚರ್ಚೆಗೀಡಾಗುತ್ತಿವೆ. ಇತ್ತೀಚೆಗೆ ಶಾರುಖ್ ಖಾನ್ ಜೊತೆಗೆ ಯಶ್ ಹೊಸ ಸಿನಿಮಾ ಮಾಡಲಿದ್ದು, ಇದನ್ನು ಸ್ವತಃ ಶಾರುಖ್ ಅವರ ರೆಡ್ ಚಿಲ್ಲೀಸ್ ಸಂಸ್ಥೆಯೇ ನಿರ್ಮಾಣ ಮಾಡಲಿದೆಯಂತೆ ಎಂಬ ಮಾಹಿತಿ ದೊರಕಿದೆ. ನಟ ಶಾರುಖ್ ಖಾನ್ ಮತ್ತು ಯಶ್ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಮಾತುಕತೆಗಳು ನಡೆದಿದ್ದು, ಇಬ್ಬರು ನಟರು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಆದರೂ, ಇವರಿಬ್ಬರು ಒಟ್ಟಿಗೆ ನಟಿಸಲು ಸರಿಯಾದ ಕಥೆಯ ಅಗತ್ಯವಿದೆ. 

ಹೌದು.. ಯಶ್‌ ಹಾಗೂ ಶಾರುಖ್‌ ಖಾನ್‌ ಇಬ್ಬರು ಒಟ್ಟಾಗಿ ಅಭಿನಯಿಸಲು ಒಳ್ಳೆಯ ಕಥೆಯ ಅವಶ್ಯಕತೆಯಿದೆ, ಏಕೆಂದರೆ ಈ ಕಾಂಬಿನೇಷನ್ ಎಂದಮೇಲೆ ನಿರೀಕ್ಷೆಗಳು ದೊಡ್ಡಮಟ್ಟದಲ್ಲಿ ಇರುತ್ತವೆ. ಅಲ್ಲದೆ, ಅವರಿಬ್ಬರು ಕೂಡ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲು ಇಷ್ಟಪಡದ ಕಾರಣಕ್ಕಾಗಿ ತಕ್ಷಣಕ್ಕೆ ಇದನ್ನು ಪ್ರಾರಂಭಿಸುವ ಬದಲು ಸಾಕಷ್ಟು ಯೋಚನೆ ಮಾಡುತ್ತಿದ್ದಾರೆ ಎಂದು ಕೆಲವು ಮೂಲಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿವೆ. ಆದರೆ ಈ ಕ್ರೇಜಿ ಪ್ರಾಜೆಕ್ಟ್‌ ಬಗ್ಗೆ ಶಾರುಖ್ ಖಾನ್ ಆಗಲಿ, ಯಶ್ ಆಗಲಿ ರಿಯಾಕ್ಷನ್ ನೀಡಿಲ್ಲ. ಅದೇ ರೀತಿ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಸಹ ಇದರ ಬಗ್ಗೆ ಏನೊಂದು ಪ್ರತಿಕ್ರಿಯೆಯನ್ನು ನೀಡಿಲ್ಲ. 

ಇದನ್ನೂ ಓದಿ: 22ನೇ ವಯಸ್ಸಿಗೆ ಮನೆ ಬಿಟ್ಟು.. ಕುಟುಂಬದಿಂದ ದೂರ ಉಳಿದಿದ್ದ ಈಕೆ ಬಿಗ್‌ಬಾಸ್‌ನ 2nd ರನ್ನರ್‌ಅಪ್!

ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ 'ಕೆಜಿಎಫ್‌' ಸಿನಿಮಾದ ನಂತರ ದೇಶದಾದ್ಯಂತ ಇವರ ಜನಪ್ರಿಯತೆ ಜೋರಾಗಿದ್ದು, ಇನ್ನು ಆರು ವರ್ಷಗಳ ಹಿಂದೆ 'ಕೆಜಿಎಫ್' ಎದುರು ಶಾರುಖ್ ಖಾನ್ ಅವರು 'ಜೀರೋ' ಸಿನಿಮಾವನ್ನು ರಿಲೀಸ್ ಮಾಡಿದ್ದರು. ಆದರೆ 'ಜೀರೋ' ಸಿನಿಮಾವು ಹೀನಾಯ ಸೋಲು ಕಂಡಿದ್ದು, ಆ ಸೋಲಿನ ಎಫೆಕ್ಟ್‌ನಿಂದ ಹೊರಬರುವುದಕ್ಕೆ ಶಾರುಖ್‌ಗೆ ಸಾಕಷ್ಟು ಸಮಯ ಹಿಡಿಯಿತು. ಇದೀಗ ನಟ ಯಶ್  ಸಂಪೂರ್ಣ ಗಮನ 'ಟಾಕ್ಸಿಕ್' ಸಿನಿಮಾದ ಮೇಲಿದ್ದು, ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಯಶ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್‌ ಮಾನ್‌ಸ್ಟಾರ್‌ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿನಿಮಾ ಶುರುವಾಗಿದೆ. ಸದ್ಯ ಶ್ರುತಿ ಹಾಸನ್ ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾಹಿತಿ ಇದೆ. 

'ಟಾಕ್ಸಿಕ್' ಚಿತ್ರ 2025ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ ಎಂಬ ಅಪ್‌ಡೇಟ್‌ ಸಿಕ್ಕಿದ್ದು, ಇದರ ಜೊತೆಗೆ ಬಾಲಿವುಡ್ ಡೈರೆಕ್ಟರ್ ನಿತೇಶ್ ತಿವಾರಿ  'ರಾಮಾಯಣ' ಸಿನಿಮಾದಲ್ಲಿ ಯಶ್  ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಪ್ರಬಲವಾಗಿ ಕೇಳಿಬರುತ್ತಿದೆ. ಇದೇ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇನ್ನು, ಹನುಮಂತನ ಪಾತ್ರಕ್ಕೆ ಬಾಬಿ ಡಿಯೋಲ್ ಅವರನ್ನು ಒಪ್ಪಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಈ ಸಿನಿಮಾ ಯಾವಾಗ ಶುರುವಾಗಲಿದೆ ಎಂಬ ಕುತೂಹಲ ಜೋರಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News