ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ "ಡೇವಿಡ್" ಚಿತ್ರದ ರಿಲೀಸ್‌ ಡೇಟ್‌ ಫೀಕ್ಸ್‌..!

ಶಾಸಕ ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಡೇವಿಡ್‌ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ‌.

Written by - YASHODHA POOJARI | Edited by - Krishna N K | Last Updated : Jul 16, 2023, 06:35 PM IST
  • ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ವಿಭಿನ್ನ ಸಿನಿಮಾಗಳು ತೆರೆ ಕಾಣುತ್ತಿವೆ.
  • ಇದೀಗ ಡೇವಿಡ್‌ ಸಿನಿಮಾದ ಮೂಲಕ ಶ್ರೇಯಸ್‌ ಚಿಂಗಾ ತೆರೆ ಮೇಲೆ ಬರುತ್ತಿದ್ದಾರೆ.
  • ಡೇವಿಡ್‌ ಚಿತ್ರವನ್ನು ಶ್ರೇಯಸ್‌ ಚಿಂಗಾ ನಟಿಸಿ ನಿರ್ದೇಶನ ಮಾಡಿದ್ದಾರೆ.
 ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ "ಡೇವಿಡ್" ಚಿತ್ರದ ರಿಲೀಸ್‌ ಡೇಟ್‌ ಫೀಕ್ಸ್‌..! title=

David kannada movie : ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ವಿಭಿನ್ನ ಸಿನಿಮಾಗಳು ತೆರೆ ಕಾಣುತ್ತಿವೆ. ಹೊಸ ಪ್ರತಿಭೆಗಳು ತೆರೆ ಮೇಲೆ ಮೋಡಿ ಮಾಡುತ್ತಿದ್ದಾರೆ. ಇದೀಗ ಚಂದನವನ್ನಕ್ಕೆ ʼಡೇವಿಡ್‌ʼ ಚಿತ್ರದ ಮೂಲಕ ಪೂರ್ಣ ನಾಯಕ ನಟ ಮತ್ತು ನಿರ್ದೇಶಕನಾಗಿ ಶ್ರೇಯಸ್‌ ಚಿಂಗಾ ಎಂಟ್ರಿ ಕೊಟ್ಟಿದ್ದು, ಸಿನಿಮಾ ಬಿಡುಗುಡೆ ದಿನಾಂಕ ಘೋಷಣೆ ಮಾಡಿದ್ದಾರೆ.

ಹೌದು.. ಶಾಸಕ ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಡೇವಿಡ್‌ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ‌. ಈ ಚಿತ್ರದ ಬಗ್ಗೆ ಕುರುತು ನಾಯಕ ಶ್ರೇಯಸ್ ಚಿಂಗಾ ಅವರು,‌ ಧನರಾಜ ಬಾಬು ಅವರ ಬಳಿ ಹೇಳಿದಾಗ, ಹೊಸತಂಡದ ಹೊಸಪ್ರಯತ್ನಕ್ಕೆ ಧನರಾಜ ಬಾಬು ಅವರು ಪ್ರೋತ್ಸಾಹ ನೀಡಲು ಮುಂದಾದರು.

ಇದನ್ನೂ ಓದಿ: ಬಾಯಿತಪ್ಪಿ ʼಸಲಾರ್‌ʼ ಕಥೆ ಹೇಳಿದ ನಟ ಜಗಪತಿ ಬಾಬು..! ಭಾಗ 1ರಲ್ಲಿ ಏನಾಗುತ್ತೆ ಗೊತ್ತೆ..?

ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಾಕಷ್ಟು ಮಾತನಾಡಿದರು. "ಡೇವಿಡ್" ಒಂದು ರೊಮ್ಯಾಂಟಿಕ್ ಮಾರ್ಡರ್ ಮಿಸ್ಟರಿ ಎಂದು ಮಾತು ಆರಂಭಿಸಿದ ನಾಯಕ, ನಿರ್ದೇಶಕ ಶ್ರೇಯಸ್ ಚಿಂಗಾ ಇದೊಂದು ಅದ್ಭುತ ಚಿತ್ರ. ಈವರೆಗೂ ನಾವು ನೋಡಿರದ ಬೆಂಗಳೂರನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಇದೊಂದು ತಂತ್ರಜ್ಞರ ಸಿನಿಮಾ. ಕಲಾವಿದರ ಅಭಿನಯ ಕೂಡ ಚೆನ್ನಾಗಿದೆ. ನಾನು ಹಾಗೂ ಭಾರ್ಗವ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದೇವೆ‌. ಚಿತ್ರ ಜುಲೈ 21 ರಂದು ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು.

Open photo

ನಾನು ಈ ಹಿಂದೆ "ಭರತ - ಬಾಹುಬಲಿ" ಚಿತ್ರದಲ್ಲಿ ನಟಿಸಿದ್ದೆ. "ಡೇವಿಡ್‌" ನನ್ನ ಎರಡನೇ ಚಿತ್ರ. ಈ ಹಿಂದೆ ಪ್ರಸಿದ್ದ ಜಾಹೀರಾತುಗಳಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದ ಪಾತ್ರ ಚೆನ್ನಾಗಿದೆ ಎಂದು ನಾಯಕಿ ಸಾರಾ ಹರೀಶ್ ತಿಳಿಸಿದರು. ನಾನು ಈ ಚಿತ್ರದಲ್ಲಿ ಶ್ರೀಮಂತರ ಮನೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಪ್ರತಾಪ್ ನಾರಾಯಣ್ ಹೇಳಿದರು. 

ಇದನ್ನೂ ಓದಿ: ಈ ಬಾರಿ ಕಾರು ಚಾಲಕನ ನಂಬಿ ಮೋಸ ಹೋದ ರಾಖಿ.. ಎದೆಬಡಿದುಕೊಂಡು ಅಳುವಂಥದ್ದೇ ನಡೆದೋಯ್ತಾ?

ಕರ್ನಾಟಕದ ಪ್ರಸಿದ್ದ ರಾಪರ್ ಗಳಾದ ಎಂ.ಸಿ.ಬಿಜು, ಸಿದ್ ಈ ಚಿತ್ರದಲ್ಲೂ ರಾಪರ್ ಪಾತ್ರದಲ್ಲೇ ಅಭಿನಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿನಯದ ಬಗ್ಗೆ ಹೇಳಿಕೊಂಡ ರಾಪರ್ ದ್ವಯರು ಸುಂದರವಾದ ರಾಪ್ ಹಾಡೊಂದನ್ನು ಹಾಡಿದರು. ನಿರ್ಮಾಪಕ ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.‌ ನಟ ಮೋಹಿತ್ ವಾಸ್ವನಿ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಚಿತ್ರವನ್ನು ಚಂದನ್ ಫಿಲಂಸ್ ವಿತರಣೆ ಮಾಡುತ್ತಿದೆ. ಮಾರ್ಕೆಟಿಂಗ್ ಹಾಗೂ ಪ್ರಮೋಷನ್ ರೋಶನಿ ರಾಮಪುರಂ ಅವರದು. ಶ್ರೇಯಸ್ ಚಿಂಗಾ, ರಾಕೇಶ್ ಅಡಿಗ, ಪ್ರತಾಪ್ ನಾರಾಯಣ್, ಸಾರಾ ಹರೀಶ್, ಅವಿನಾಶ್ ಯಳಂದೂರು,ಬುಲೆಟ್ ಪ್ರಕಾಶ್, ಕಾವ್ಯಾ ಶಾ, ನಂದೀಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ. "ಡೇವಿಡ್‌" ಬುಲೆಟ್ ಪ್ರಕಾಶ್ ಅವರ ನಟಸಿರುವ ಕೊನೆಯ ಚಿತ್ರ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News