ಪಿರಿಯಡ್ಸ್ ಆದ್ರೂ ಕೆಲಸ ಮಾಡಬೇಕು, ಆದ್ರೆ ಸಂಬಳ ಕೊಟ್ಟಿಲ್ಲ: ಶುಭ ಪೂಂಜಾ ಬೇಸರದ ಮಾತು

Shubha Poonja Interview : ಶುಭ ಪೂಂಜಾ ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅವರು ಸಿನಿರಂಗಕ್ಕೆ ಬಂದಾಗ ಇದ್ದ ಪ್ರೊಫೆಷನಲ್‌ ಮತ್ತು ಅನ್‌ಪ್ರೊಫೆಷನಲ್‌‌ ಲೈಫ್‌ ಬಗ್ಗೆ ಮಾತನಾಡಿದ್ದಾರೆ.  

Written by - Chetana Devarmani | Last Updated : Nov 23, 2023, 08:46 PM IST
  • ಶುಭ ಪೂಂಜಾ ವೃತ್ತಿ ಜೀವನ
  • ಸಿನಿರಂಗದ ಬಗ್ಗೆ ಶುಭ ಪೂಂಜಾ ಮಾತು
  • ಶುಭ ಪೂಂಜಾ ಎದುರಿಸಿದ ಸವಾಲುಗಳು
ಪಿರಿಯಡ್ಸ್ ಆದ್ರೂ ಕೆಲಸ ಮಾಡಬೇಕು, ಆದ್ರೆ ಸಂಬಳ ಕೊಟ್ಟಿಲ್ಲ: ಶುಭ ಪೂಂಜಾ ಬೇಸರದ ಮಾತು  title=
Shubha Poonja

Challenges Faced by Shubha Poonja : ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅವರು ಸಿನಿರಂಗಕ್ಕೆ ಬಂದಾಗ ಇದ್ದ ಪ್ರೊಫೆಷನಲ್‌ ಮತ್ತು ಅನ್‌ಪ್ರೊಫೆಷನಲ್‌‌ ಲೈಫ್‌ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ತಾವು ಎದುರಿಸಿದ ಚಾಲೆಂಜಸ್‌ ಬಗ್ಗೆ ಶುಭ ಪೂಂಜಾ ಮಾತನಾಡಿದ್ದಾರೆ. 

ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನ ಫೇಸ್‌ ಮಾಡಿದ್ದೇನೆ. ಕೆಲವರು ಪ್ರೊಫೆಷನಲ್‌ ವಿಚಾರಕ್ಕೆ ನಮಗೆ ಕಾಲ್‌ ಮಾಡಿದರೆ, ಮತ್ತೆ ಕೆಲವರು ಅನ್‌ಪ್ರೊಫೆಷನಲ್‌ ವಿಚಾರಕ್ಕೆ ಕಾಲ್‌ ಮಾಡುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಇಲ್ಲಿದಿದ್ದರೂ ಆದರೂ ನಾವು ಅವರ ಜೊತೆ ಕಾಂಟಾಕ್ಟ್‌ ಅಲ್ಲಿರಬೇಕು. ಈ ರೀತಿ ವಿಚಿತ್ರ ಜನರು ಇರುತ್ತಾರೆ ಎಂದರು. 

ಇದನ್ನೂ ಓದಿ : ನನ್ನ ಮರ್ಯಾದೆಗೆ ಭಂಗ ಬಂದಿದೆ.. ಅದಕ್ಕೆ..! ಮಹತ್ವದ ನಿರ್ಧಾರ ತೆಗೆದುಕೊಂಡ ʼಪುಷ್ಪಾʼ ನಟಿ

ನಾನು ಚಿತ್ರರಂಗಕ್ಕೆ ಬಂದಾಗ ಕ್ಯಾರವಾನ್ ಇರಲಿಲ್ಲ. ಕಪ್ಪು ಬಟ್ಟೆ ಹಾಕಿ ಅಲ್ಲಿ ಶೂಟಿಂಗ್ ಡ್ರೆಸ್‌ ಚೇಂಜ್‌ ಮಾಡ್ತಿದ್ವಿ. ಕೆಲವೊಮ್ಮೆ ಬೇರೆಯವರ ಮನೆಯಲ್ಲಿ ಹೋಗಿ ಬಟ್ಟೆ ಬದಲಾಯಿಸಿದ್ದೇವೆ. ಈಗೆಲ್ಲ ಈವೆಂಟ್‌ ಎಂದು ಹೋಗಿ ಹಣ ಸಂಪಾದಿಸುತ್ತೇವೆ. ಆಗ ಸಿನಿಮಾ ಮಾಡಿ ಮೂರು ತಿಂಗಳು ಆದ್ಮೇಲೆ ಪೇಮೆಂಟ್‌ ಆಗ್ತಿತ್ತು ಎಂದಿದ್ದಾರೆ. 

ನಾನು ಅನೇಕ ಶೋಗಳಿಗೆ ಹೋಗಿದ್ದೇನೆ. ಆದ್ರೆ ಹಣ ಪಡೆದಿಲ್ಲ. ಆಗ ಯಾಕೆ ಹಣ ಪಡೆಯಲಿಲ್ಲ ಎಂದು ಈಗ ಒಮ್ಮೊಮ್ಮೆ ಯೋಚನೆ ಮಾಡ್ತಿನಿ. ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದೇನೆ. ಪಿರಿಯಡ್ಸ್‌ ಆದರೂ ಕೇರ್ ಮಾಡದೇ ಸಿನಿಮಾ ಮಾಡ್ತೀವಿ ಆದರೆ ಸಂಬಳ ಬಾರದೇ ಇದ್ದಾಗ ತುಂಬಾ ಬೇಸರ ಆಗುತ್ತೆ ಎಂದು ಶುಭಾ ಪೂಂಜಾ ಹೇಳಿದ್ದಾರೆ. 

ಇದನ್ನೂ ಓದಿ : ಕೀರ್ತಿ ಸುರೇಶ್ ಮೇಲೆ ಲೈಂಗಿಕ ದೌರ್ಜನ್ಯ.. ಶಾಕಿಂಗ್‌ ವಿಚಾರ ತಿಳಿಸಿದ ಮಹಾನಟಿ!? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News