ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ತೆರೆಯಲು ಸಜ್ಜಾದ ಗಾಯಕ ನವೀನ್ ಸಜ್ಜು

Written by - Malathesha M | Edited by - Manjunath Naragund | Last Updated : Aug 4, 2022, 11:31 PM IST
  • ‘ಮ್ಯಾನ್ಷನ್ ಹೌಸ್ ಮುತ್ತು’ ಡಬ್ಬಿಂಗ್‌ ಕೆಲಸವನ್ನೆಲ್ಲಾ ಮುಗಿಸಿ ನವೆಂಬರ್ ತಿಂಗಳಲ್ಲಿ ರಿಲೀಸ್‌ ಆಗಲು ರೆಡಿಯಾಗಿದೆ.
  • ಇದರ ಜೊತೆಗೆ ನವೀನ್ ಸಜ್ಜು ಈಗ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕೂಡ ಹುಟ್ಟುಹಾಕಿದ್ದಾರೆ.
ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ತೆರೆಯಲು ಸಜ್ಜಾದ ಗಾಯಕ ನವೀನ್ ಸಜ್ಜು title=

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಪ್ರತಿಭೆಗಳಿಗೆ ಕಡಿಮೆ ಏನಿಲ್ಲ. ಆದರೆ ಹೊಸ ಪ್ರತಿಭೆಗಳ ಪೈಕಿ ದಡ ಮುಟ್ಟಿ ಸಾಧನೆ ಮಾಡುವವರ ಸಂಖ್ಯೆ ಮಾತ್ರ ಬೆರಳೆಣಿಕೆ. ಇಂತಹ ಬೆರಳೆಣಿಕೆಯಷ್ಟು ಹೊಸ ಪ್ರತಿಭೆಗಳ ಸಾಲಲ್ಲಿ ಸಿಂಗರ್‌ ಕಂ ನಟ ನವೀನ್ ಸಜ್ಜು ಅವರು ಕೂಡ ನಿಲ್ಲುತ್ತಾರೆ. ಇತ್ತೀಚೆಗಷ್ಟೇ ನಾಯಕನ ಪಟ್ಟ ಗಿಟ್ಟಿಸಿಕೊಂಡಿದ್ದ ನಟನಿಗೆ ಇದೀಗ ಡಬಲ್‌ ಖುಷಿ ಸಿಕ್ಕಿದೆ.

ಅಷ್ಟಕ್ಕೂ ನವೀನ್ ಸಜ್ಜು ಸಂಗೀತಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸದೊಂದು ಹುರುಪು ತಂದುಕೊಟ್ಟಿದ್ದು ನವೀನ್ ಸಜ್ಜು ಅವರ ಸಂಗೀತ. ಹೊಸ ಪ್ರಯತ್ನದ ಮೂಲಕ ಸಜ್ಜು ಸಾಕಷ್ಟು ಸದ್ದು ಮಾಡಿದ್ದರು. ಸಂಗೀತದಲ್ಲಿ ಮೋಡಿ ಮಾಡಿದ್ದ ಸಜ್ಜು ನಟನೆ ಮೂಲಕವೂ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಮುಖ್ಯಭೂಮಿಕೆಯಲ್ಲಿ ಸಿನಿಮಾ ಒಂದಕ್ಕೆ ಎಂಟ್ರಿಕೊಟ್ಟಿದ್ದರು. ‘ಮ್ಯಾನ್ಷನ್ ಹೌಸ್ ಮುತ್ತು’ ಡಬ್ಬಿಂಗ್‌ ಕೆಲಸವನ್ನೆಲ್ಲಾ ಮುಗಿಸಿ ನವೆಂಬರ್ ತಿಂಗಳಲ್ಲಿ ರಿಲೀಸ್‌ ಆಗಲು ರೆಡಿಯಾಗಿದೆ. ಇದರ ಜೊತೆಗೆ ನವೀನ್ ಸಜ್ಜು ಈಗ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕೂಡ ಹುಟ್ಟುಹಾಕಿದ್ದಾರೆ.

ಇದನ್ನೂ ಓದಿ: ನಾಯಕನಾಗಿ 'ಸಜ್ಜು' ಎಂಟ್ರಿಗೆ ವೇದಿಕೆ ಸಜ್ಜು..! ಹೇಗಿದೆ ‘ಮ್ಯಾನ್ಷನ್ ಹೌಸ್ ಮುತ್ತು’ ಲುಕ್..?‌

ಸಜ್ಜು ಸಂತಸ..!

ತಮ್ಮ ಈ ಸಿನಿಮಾ ನಿರ್ಮಾಣ ಸಂಸ್ಥೆಗೆ ‘ನವೀನ್ ಸಜ್ಜು ಸ್ಟುಡಿಯೋ’ ಎಂದು ನಾಮಕರಣ ಮಾಡಿರುವ ಗಾಯಕ ಸಜ್ಜು, ಕನ್ನಡ ಚಿತ್ರರಂಗದಲ್ಲಿ ಕೇವಲ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಳ್ಳುವುದಷ್ಟೇ ಅಲ್ಲದೆ, ನಟನೆ, ಚಿತ್ರ ನಿರ್ಮಾಣದ ಕೆಲಸದಲ್ಲಿಯೂ ತೊಡಗಿಸಿಕೊಳ್ಳುವುದರ ಮೂಲಕ ತಾವೊಬ್ಬ ಬಹುಮುಖ ಪ್ರತಿಭೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.ಈಗ ಈ ನಿರ್ಮಾಣ ಸಂಸ್ಥೆಯ ಮೂಲಕ ಅವರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ಈಗ ತಮ್ಮ ಈ ಕನಸಿನ ನಿರ್ಮಾಣ ಸಂಸ್ಥೆಯ ಕುರಿತಾಗಿ ತಮ್ಮ ಅಧಿಕೃತ ಸಾಮಾಜಿಕ ವೇದಿಕೆಯಲ್ಲಿ ಬರೆದುಕೊಂಡಿರುವ ನವೀನ್ ಸಜ್ಜು' "ಬಂದೇ ಬರುವುದು ಬೆಳಕು ಹೊಂಬೆಳಕು ಎನ್ನುವ ಹೊಸ ಆಶಯವನ್ನು ವ್ಯಕ್ತಪಡಿಸುತ್ತಾ ಅವರು ‘ಗಾಯಕನಾಗಿ ಗಂಧದಗುಡಿಗೆ ಕಾಲಿಟ್ಟವನು, ಈಗ ಹಿಂತಿರುಗಿ ನೋಡಿದರೆ ಎಷ್ಟೊಂದು ಹಾಡುಗಳಿಗೆ ದನಿಯಾಗಿದ್ದೇನೆ, ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದೇನೆ, ಅಬ್ಬಾ.. ಇದೊಂದು ಸಾಗರ ಈಜಿದ ಅನುಭವ. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿರುವೆ "ನವೀನ್ ಸಜ್ಜು ಸ್ಟುಡಿಯೋ" (NS Studio) ಎನ್ನುವ ನಿರ್ಮಾಣ ಸಂಸ್ಥೆ ಕನಸು ಕಟ್ಟಿದ್ದೇನೆ. ಗಾಯಕ, ಸಂಗೀತ ನಿರ್ದೇಶಕನಾಗಿ ನನ್ನ ಮೇಲೆ ಅಭಿಮಾನ ಇರಿಸಿದ್ದೀರಿ. ಈಗ  ಹೊಸ ಅಖಾಡಕ್ಕೆ ಇಳಿಯುತ್ತಿರುವೆ... ಶೀಘ್ರದಲ್ಲೇ ಹೊಸ, ಹೊಸ ಸಂಗತಿಗಳೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ, ನಿಮ್ಮೆಲ್ಲರ ಹಾರೈಕೆ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಒಟ್ನಲ್ಲಿ ಹೀರೋ ಆದ ಖುಷಿಯಲ್ಲೇ ‘ನವೀನ್ ಸಜ್ಜು’ ಮತ್ತೊಂದು ಸರ್ಪ್ರೈಸ್‌ ಕೊಟ್ಟಿದ್ದಾರೆ. ತಮ್ಮ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ, ಶುಭ ಹಾರೈಸಿ ಎಂದು ಕೋರಿದ್ದಾರೆ. ಇದರ ಜೊತೆಗೆ ‘ಮ್ಯಾನ್ಷನ್ ಹೌಸ್ ಮುತ್ತು’ ರಿಲೀಸ್‌ಗೂ ಕೌಂಟ್‌ಡೌನ್‌ ಶುರುವಾಗಿದ್ದು, ಸಜ್ಜು ಅಭಿಮಾನಿ ಬಳಗಕ್ಕೆ ಇದೊಂದು ಡಬಲ್‌ ಸರ್ಪ್ರೈಸ್ ಎಂದೇ ಹೇಳಬಹುದು. ಸದಾ ಹೊಸತನಕ್ಕೆ ತುಡಿಯುವ ಗಾಯಕ ನವೀನ್ ಸಜ್ಜು ಅವರ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಮತ್ತು ಹಾರೈಕೆ ಸದಾ ಇರಲಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News