ನಾಯಕನಾಗಿ 'ಸಜ್ಜು' ಎಂಟ್ರಿಗೆ ವೇದಿಕೆ ಸಜ್ಜು..! ಹೇಗಿದೆ ‘ಮ್ಯಾನ್ಷನ್ ಹೌಸ್ ಮುತ್ತು’ ಲುಕ್..?‌

Written by - Malathesha M | Edited by - Manjunath N | Last Updated : Aug 3, 2022, 09:17 PM IST
  • ನವೀನ್ ಸಜ್ಜು ಸಂಗೀತಕ್ಕೆ ಮನಸೋಲದೆ ಇರೋರಿಲ್ಲ.
  • ಯಾಕಂದ್ರೆ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸದೊಂದು ಹುರುಪು ತಂದುಕೊಟ್ಟಿದ್ದು ನವೀನ್ ಸಜ್ಜು ಅವರ ಸಂಗೀತ.
  • ಹೊಸ ಪ್ರಯತ್ನದ ಮೂಲಕ ಸಜ್ಜು ಸಾಕಷ್ಟು ಸದ್ದು ಮಾಡಿದ್ದರು.
ನಾಯಕನಾಗಿ 'ಸಜ್ಜು' ಎಂಟ್ರಿಗೆ ವೇದಿಕೆ ಸಜ್ಜು..! ಹೇಗಿದೆ ‘ಮ್ಯಾನ್ಷನ್ ಹೌಸ್ ಮುತ್ತು’ ಲುಕ್..?‌ title=

ಕೊರೊನಾ.. ಕೊರೊನಾ.. ಕೊರೊನಾ.. ಹೀಗೆ 'ಕೊರೊನಾ' ಕಂಟಕದ ಮಧ್ಯೆ ನರಳಾಡಿದ್ದ ಸಿನಿಮಾ ಮಂದಿಗೆ ಹೊಸ ಯುಗ ಆರಂಭವಾಗಿದೆ. ಅದರಲ್ಲೂ ಸಾಲು ಸಾಲಾಗಿ ಕನ್ನಡ ‌ಚಿತ್ರಗಳು ಹಿಟ್‌ ಆಗುತ್ತಿರುವುದು ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ ಹುರುಪು ಮೂಡಿಸಿದೆ. ಹೀಗೆ ಮತ್ತೊಬ್ಬ ನಾಯಕನನ್ನ ವೆಲ್‌ಕಂ ಮಾಡಲು ಕನ್ನಡ ಸಿನಿಮಾ ರಂಗ ಸರ್ವ ಸನ್ನದ್ಧವಾಗಿದೆ.

ನವೀನ್ ಸಜ್ಜು ಹೆಸರು ಕೇಳಿದ್ರೆ ಅವರ ಹಾಡುಗಳು ಕಿವಿಯಲ್ಲಿ ಗುನುಗೋದು ಗ್ಯಾರಂಟಿ. ಯಾಕಂದ್ರೆ ಇಷ್ಟು ದಿನ ತಮ್ಮ ಹಾಡು & ಸಂಗೀತದ ಮೂಲಕವೇ ಸಜ್ಜು ಸದ್ದು ಮಾಡಿದ್ದರು. ಹೀಗೆ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಗಾಯಕ ಕಂ ಸಂಗೀತ ನಿರ್ದೇಶಕ ನವೀನ್ ಸಜ್ಜು ಹೊಸ ಹುರುಪಿನಲ್ಲಿ ನಾಯಕನ ಸ್ಥಾನ ಅಲಂಕರಿಸುತ್ತಿದ್ದಾರೆ. ನವೀನ್ ಸಜ್ಜು ನಾಯಕನಾಗಿ ನಟಿಸಿರುವ  ‘ಮ್ಯಾನ್ಷನ್ ಹೌಸ್ ಮುತ್ತು’ ಚಿತ್ರದ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ.

ಇದನ್ನೂ ಓದಿ : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ

ಸಜ್ಜು ಸಂಗೀತ..!

ನವೀನ್ ಸಜ್ಜು ಸಂಗೀತಕ್ಕೆ ಮನಸೋಲದೆ ಇರೋರಿಲ್ಲ. ಯಾಕಂದ್ರೆ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸದೊಂದು ಹುರುಪು ತಂದುಕೊಟ್ಟಿದ್ದು ನವೀನ್ ಸಜ್ಜು ಅವರ ಸಂಗೀತ. ಹೊಸ ಪ್ರಯತ್ನದ ಮೂಲಕ ಸಜ್ಜು ಸಾಕಷ್ಟು ಸದ್ದು ಮಾಡಿದ್ದರು. ಹೀಗೆ ಸಂಗೀತದಲ್ಲಿ ಮೋಡಿ ಮಾಡಿದ್ದ ಸಜ್ಜು ನಟನೆ ಮೂಲಕ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಮುಖ್ಯಭೂಮಿಕೆಯಲ್ಲಿ ಸಿನಿಮಾ ಒಂದಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ನವೀನ್ ಸಜ್ಜು ನಟನೆಯ ‘ಮ್ಯಾನ್ಷನ್ ಹೌಸ್ ಮುತ್ತು’ ಡಬ್ಬಿಂಗ್‌ ಕೆಲಸವನ್ನೆಲ್ಲಾ ಮುಗಿಸಿ ನವೆಂಬರ್ ತಿಂಗಳಲ್ಲಿ ರಿಲೀಸ್‌ ಆಗಲು ರೆಡಿಯಾಗಿದೆ.

ಅಂದಹಾಗೆ ‘ಮ್ಯಾನ್ಷನ್ ಹೌಸ್ ಮುತ್ತು’ ಕಾಮಿಡಿ ಥ್ರಿಲ್ಲರ್ ಸಿನಿಮಾ ಆಗಿದ್ದು, ವಿಭಿನ್ನ ಟೈಟಲ್‌ ಜೊತೆಗೆ ವಿಭಿನ್ನ ಕಥಾಹಂದರ ಕೂಡ ಹೊಂದಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಖ್ಯಾತಿಯ ಕುಮಾರ್‌ ಈ ಸಿನಿಮಾಗೆ ಆಕ್ಷನ್‌ & ಕಟ್‌ ಹೇಳಿದ್ದಾರೆ. ನಟ ಗಿರೀಶ್ ಶಿವಣ್ಣ, ಸಮೀಕ್ಷಾ ರಾಮ್, ಸತೀಶ್ ಚಂದ್ರ, ವಿಜೇತ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಒಟ್ಟಾರೆ ‘ಮ್ಯಾನ್ಷನ್ ಹೌಸ್ ಮುತ್ತು’ ಹಲವು ಆಯಾಮಗಳಲ್ಲೂ ಸಖತ್‌ ಗಮನವನ್ನ ಸೆಳೆದಿದ್ದು, ರಿಲೀಸ್‌ಗೂ ಮೊದಲೇ ಹೈಪ್‌ ಕ್ರಿಯೇಟ್‌ ಮಾಡಿದೆ.No description available.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News