ತಮಿಳು ಖ್ಯಾತ ನಟ ದಳಪತಿ ವಿಜಯ್‌ ಮೇಲೆ ಜಪ್ಪಲಿ ಎಸೆತ..! ವಿಡಿಯೋ ವೈರಲ್‌

Thalapathy Vijay : ನಿನ್ನೆಯಷ್ಟೇ ನಿಧನರಾದ ಖ್ಯಾತ ನಟ, ರಾಜಕಾರಣಿ ವಿಜಯಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆಯಲಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕೋಲಾಹಲಕ್ಕೆ ಕಾರಣವಾಗಿದೆ.

Written by - Krishna N K | Last Updated : Dec 29, 2023, 06:11 PM IST
  • ವಿಜಯಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನಟ ದಳಪತಿ ವಿಜಯ್.
  • ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆಯಲಾಗಿದೆ.
  • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ತಮಿಳು ಖ್ಯಾತ ನಟ ದಳಪತಿ ವಿಜಯ್‌ ಮೇಲೆ ಜಪ್ಪಲಿ ಎಸೆತ..! ವಿಡಿಯೋ ವೈರಲ್‌ title=

Slipper throw on actor Vijay : ರಾಜಕಾರಣಿ, ನಟ ವಿಜಯಕಾಂತ್ ನಿಧನರಾದ ಬೆನ್ನಲ್ಲೇ ಡಿಎಂಡಿಕೆ ಮುಖ್ಯಸ್ಥರ ನಿವಾಸಕ್ಕೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಟ ದಳಪತಿ ವಿಜಯ್ ಕೂಡ ಕ್ಯಾಪ್ಟನ್‌ಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ಅವರ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಹೌದು.. ಕ್ಯಾಪ್ಟನ್‌ ವಿಜಯಕಾಂತ್‌ ಅವರ ಅಂತಿಮ ದರ್ಶನ ಪಡೆಯಲು ನಟ ವಿಜಯ್‌ ಅವರು ಬಂದಿದ್ದರು. ಈ ವೇಳೆ ಭಾವುಕರಾದ ವಿಜಯ್ ಅವರು ವಿಜಯಕಾಂತ್ ಅವರ ಕುಟುಂಬದೊಂದಿಗೆ ಕೆಲ ಕ್ಷಣಗಳನ್ನು ಕಳೆದರು. ನಂತರ ಅಗಲಿದ ನಾಯಕನ ದರ್ಶನ ಪಡೆದರು. 

ಇದನ್ನೂ ಓದಿ: ಅಮ್ಮನ ಮಡಿಲಲ್ಲಿ ಪ್ರತಾಪ್‌ ಕಣ್ಣೀರು..! ಮಗನ ತಪ್ಪಿಗೆ ಅಡ್ಡ ಬಿದ್ದು ಕ್ಷಮೆ ಕೇಳಿದ ತಂದೆ

ದರ್ಶನ ಪಡೆದು ಮನೆಗೆ ಹಿಂತಿರುಗುತ್ತಿದ್ದ ವೇಲೆ ಮಾಧ್ಯಮದವರು ಅವರನ್ನು ಮಾತನಾಡಿಸಲು ಸುತ್ತುವರೆದರು, ಪೊಲೀಸರು ಮತ್ತು ಅವರ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದುಕೊಂಡು ಹೋಗಲು ಶತ ಪ್ರಯತ್ನಗಳನ್ನು ನಡೆಸಿದರು. ಈ ವೇಳೆ ಅವರ ಮೇಲೆ ಚಪ್ಪಲಿ ಎಸೆಯಲಾಯಿತು.

ಈ ಘಟನೆಯಿಂದ ವಿಜಯ್‌ ಅಭಿಮಾನಿಗಳು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ವಿಜಯಕಾಂತ್ ಅವರ ಸಾವಿನ ನಡುವೆ ಈ ರೀತಿಯ ವರ್ತನೆ ಸರಿಯಲ್ಲ ಎಂದು ದಳಪತಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ ಅಲ್ಲದೆ, ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. 

ಇದನ್ನೂ ಓದಿ:ʼಸಲಾರ್‌ ಲೇಡಿ ವಿಲನ್‌ʼ ಮೇಲೆ ಬಿತ್ತು ಪಡ್ಡೆ ಹೈಕ್ಳ ಕಣ್ಣು..! ಯಾರು ಈ ಸುಂದರಿ..?

71 ವರ್ಷ ವಯಸ್ಸಿನ ವಿಜಯಕಾಂತ್ ಅವರು ಅನಾರೋಗ್ಯ ಸಮಸ್ಯೆ ಮತ್ತು ಕೋವಿಡ್‌ ನಿಂದ ಚೆನ್ನೈನಲ್ಲಿ ಗುರುವಾರ ನಿಧನರಾದರು. ಡಿಎಂಡಿಕೆ ಮುಖ್ಯಸ್ಥರ ಪಾರ್ಥಿವ ಶರೀರವನ್ನು ಡಿಎಂಡಿಕೆ ಕಚೇರಿಯಲ್ಲಿ ಇರಿಸಲಾಗಿತ್ತು, ಅಲ್ಲಿ ಅನೇಕ ರಾಜಕೀಯ ನಾಯಕರು, ನಟರು ಮತ್ತು ಇತರರು ಅವರ ಅಂತಿಮ ದರ್ಶನಕ್ಕೆ ಬಂದಿದ್ದರು.

ವಿಜಯಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು 154 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ವಿರುಧಾಚಲಂ ಮತ್ತು ರಿಷಿವಂಡಿಯಂ ಕ್ಷೇತ್ರಗಳನ್ನು ಪ್ರತಿನಿಧಿಸಿ ಎರಡು ಬಾರಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News