ವಯಸ್ಸಲ್ಲಿ ರಾಘವ್‌ ಚಡ್ಡಾ ಅವರಿಗಿಂತ ದೊಡ್ಡವರಾ ಪರಿಣಿತಿ ಚೋಪ್ರಾ?

Parineeti-Raghav Age Diffrence: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಸಂಸದ ರಾಘವ್ ಚಡ್ಡಾ ಅವರು ಸೆಪ್ಟೆಂಬರ್​ 24 ಗ್ರ್ಯಾಂಡ್ ಆಗಿ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದೆ. 

Written by - Savita M B | Last Updated : Sep 30, 2023, 11:13 AM IST
  • ನಟಿ ಪರಿಣಿತಿ ಚೋಪ್ರಾ 2011ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ನಟಿ.
  • ವಯಸ್ಸಿನ ಅಂತರವನ್ನು ಲೆಕ್ಕಿಸದೇ ಸ್ಟಾರ್​ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯವಾಗಿದೆ
  • ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.
ವಯಸ್ಸಲ್ಲಿ ರಾಘವ್‌ ಚಡ್ಡಾ ಅವರಿಗಿಂತ ದೊಡ್ಡವರಾ ಪರಿಣಿತಿ ಚೋಪ್ರಾ?  title=

Parineetti Chopra-Raghav Chadda: ವಯಸ್ಸಿನ ಅಂತರವನ್ನು ಲೆಕ್ಕಿಸದೇ ಸ್ಟಾರ್​ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಇದು ಮಾಮೂಲು. ಸದ್ಯಕ್ಕೆ ಅದ್ದೂರಿಯಾಗಿ ಮದುವೆಯಾಗಿ ಸುದ್ದಿಯಲ್ಲಿರುವ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.

ಮೂಲಗಳ ಪ್ರಕಾರ ನಟಿ ಪರಿಣಿತಿ ಚೋಪ್ರಾ ಅವರು ಜನಿಸಿದ್ದು 22 ಅಕ್ಟೋಬರ್​​ 1988ರಲ್ಲಿ, ಹಾಗೆಯೇ ರಾಘವ್‌ ಚಡ್ಡಾ ಅವರು ಜನಿಸಿದ್ದು 11 ನವೆಂಬರ್​ 1988ರಲ್ಲಿ. ಅಂದರೇ ಇಬ್ಬರಿಗೂ ಈಗ 35 ವರ್ಷ ವಯಸ್ಸಾಗಿದ್ದು, ನಟಿ ಪರಿಣಿತಿ ಚೋಪ್ರಾ ಅವರು ರಾಘವ್‌ ಚಡ್ಡಾ ಅವರಿಗಿಂತ 20 ದಿನ ದೊಡ್ಡವರಾಗಿದ್ದಾರೆ. 

ಇದನ್ನೂ ಓದಿ-ಕಿರುತೆರೆಯಿಂದ ಹಿರಿತೆರೆಯತ್ತ ಜನಪ್ರಿಯ ಧಾರಾವಾಹಿಗಳ ನಟಿ ಗಗನ ಕುಂಚಿ..!

ಇನ್ನು ನಟಿ ಪರಿಣಿತಿ ಚೋಪ್ರಾ  2011ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ನಟಿ. ನಮಸ್ತೆ ಇಂಗ್ಲೆಂಡ್, ಶುದ್ಧ್ ದೇಸಿ ರೊಮ್ಯಾನ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಇವರು ಅಕ್ಷಯ್ ಕುಮಾರ್ ಜೊತೆ ನಟಿಸಿರುವ ‘ಮಿಷನ್ ರಾಣಿಗಂಜ್’ ಬಿಡುಗಡೆಯಾಗಬೇಕಿದೆ. 

ನಟಿ ಪರಿಣಿತಿ ಚೋಪ್ರಾ ಪತಿ ರಾಘವ್ ಚಡ್ಡಾ ಅವರು ತಮ್ಮ 33ನೇ ವಯಸ್ಸಿಗೆ ರಾಜ್ಯಸಭೆ ಪ್ರವೇಶಿಸುತ್ತಾರೆ. ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯ ಎಂಬ ಖ್ಯಾತಿಗೆ ಇವರು ಪಾತ್ರವಾಗಿದ್ದಾರೆ. 

ಇದನ್ನೂ ಓದಿ-ಕಾಂತಾರ ಚಿತ್ರಕ್ಕೆ 1 ವರ್ಷ...! ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಸಜ್ಜಾದ ಹೊಂಬಾಳೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News