/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

'ಪೀಟರ್' ಜೊತೆ ಬಂದ ಸುಕೇಶ್ ಶೆಟ್ಟಿ.. ಹೊಸ ಚಿತ್ರಕ್ಕೆ ಡಾಲಿ-ವಿಜಯ್ ಸೇತುಪತಿ ಸಾಥ್ !

Peter Movie: ದೂರದರ್ಶನ ಸಿನಿಮಾ ಮೂಲಕ ಗಟ್ಟಿ ಕಥೆ ಹೇಳಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಎರಡನೇ ಪ್ರಯತ್ನಗೆ ಸಜ್ಜಾಗಿದ್ದಾರೆ. 

Written by - YASHODHA POOJARI | Last Updated : Sep 15, 2024, 03:50 PM IST
  • ಸುಕೇಶ್ ಹೊಸ ಪ್ರಯತ್ನಕ್ಕೆ ದಿಗ್ಗಜ ನಟರ ಸಾಥ್
  • ಸುಕೇಶ್‌ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾ
  • 'ಪೀಟರ್' ಜೊತೆ ಬಂದ ಸುಕೇಶ್ ಶೆಟ್ಟಿ
'ಪೀಟರ್' ಜೊತೆ ಬಂದ ಸುಕೇಶ್ ಶೆಟ್ಟಿ.. ಹೊಸ ಚಿತ್ರಕ್ಕೆ ಡಾಲಿ-ವಿಜಯ್ ಸೇತುಪತಿ ಸಾಥ್ !  title=

Peter Movie: ದೂರದರ್ಶನ ಸಿನಿಮಾ ಮೂಲಕ ಗಟ್ಟಿ ಕಥೆ ಹೇಳಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಎರಡನೇ ಪ್ರಯತ್ನಗೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತೊಂದು ಫ್ರೆಶ್ ಕಥಾಹಂದರವನ್ನು ಪ್ರೇಕ್ಷಕರಿಗೆ ಹರವಿಡಲು ಹೊರಟಿದ್ದಾರೆ. ಅದರ ಮೊದಲ ಭಾಗವೆಂಬಂತೆ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರಿಬ್ಬರು ಸುಕೇಶ್ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.

ಸುಕೇಶ್ ಶೆಟ್ಟಿ 'ಪೀಟರ್' ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪೀಟರ್ ಟೈಟಲ್ ನ್ನು ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಪೀಟರ್ ಟೈಟಲ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ರಾಯಲ್ ಚಂಡೆ ಹುಡುಗರು , ಜೆಸ್ಸಿ ವಾಪಸ್ ಬಂದಿದ್ದಾಳೆ ಎಂಬ ಬರಹಗಳ ಜೊತೆಯಲ್ಲಿ ಯಮಹ ಬೈಕ್ , ಹಳೆಯ ಕಬ್ಬಿಣದ ಚೇರ್ ಪೋಸ್ಟರ್ ನಲ್ಲಿ ಹೈಲೆಟ್ಸ್. 

ಇದನ್ನೂ ಓದಿ: ಟ್ರೈಲರ್ ನಲ್ಲಿ "ರಣಾಕ್ಷ"ನ ಝಲಕ್! ದೇವರು- ದೆವ್ವದ ನಡುವಿನ ಸಂಘರ್ಷದ ಕಥೆ

'ಪೀಟರ್' ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. . ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಥಿಯೇಟರ್ ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ. ಅದನ್ನು ಪೀಟರ್ ಸಿನಿಮಾದಲ್ಲಿ ನಿರ್ದೇಶಕ ಸುಕೇಶ್ ಹೇಗೆ ಅಳವಡಿಸಲಿದ್ದಾರೆ ಎಂಬ ಕುತೂಹಲವಿದೆ.

ಚಿತ್ರದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಸದ್ದಿಲ್ಲದೇ ಚಿತ್ರತಂಡ ಈಗಾಗಲೇ 29 ದಿನಗಳ ಶೂಟಿಂಗ್ ಮುಗಿಸಿದೆ‌. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ‌ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮುಂದಿನ ಉಳಿದ ಚಿತ್ರೀಕರಣಕ್ಕೆ ನಾಯಕ ಮತ್ತು ಇನ್ನೆರಡು ಪಾತ್ರಧಾರಿಗಳು ದೇಹದ ತೂಕ ಕಡಿಮೆ ಮಾಡಿಕೊಳ್ಳೋ  ತಯಾರಿಯಲ್ಲಿದ್ದಾರೆ.

ಇದನ್ನೂ ಓದಿ: ದಂತದ ಬೊಂಬೆಯಂತಿರುವ ರಮ್ಯ ಕೃಷ್ಣನ್ ಗೆ ಎಷ್ಟು ವಯಸ್ಸಾಗಿದೆ ಗೊತ್ತೇ !

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ‌ ಮಿಶ್ರಣ ಪೀಟರ್ ಸಿನಿಮಾದ ಮಗದಷ್ಟು ಅಪ್ ಡೇಟ್  ನ್ನು ಚಿತ್ರತಂಡ‌ ಶೀಘ್ರದಲ್ಲೇ ನೀಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.