ಎಲ್ಲಾ ಸ್ಟಾರ್‌ಗಳಿಂತ ವಿಭಿನ್ನ ಧನುಷ್ಯ-ಐಶ್ವರ್ಯ : ಡೈವೋರ್ಸ್‌ ನಿರ್ಧಾರ ಕೈಬಿಟ್ಟ ದಂಪತಿ..!

ಖ್ಯಾತ ನಟ ಧನುಷ್‌ ಕೊಂಚ ವಿಭಿನ್ನವಾಗಿದ್ದು, ಮುರಿದು ಬಿಳುವ ಹಂತದಲ್ಲಿದ್ದ ದಾಂಪತ್ಯ ಜೀವನವನ್ನು ಪುನಃ ಪ್ರಾರಂಭಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

Written by - Krishna N K | Last Updated : Oct 5, 2022, 09:02 PM IST
  • ಚಿತ್ರರಂಗಲ್ಲಿ ಡೈವೋರ್ಸ್‌ ಕಾಮನ್‌ ಆಗಿಬಿಟ್ಟಿದೆ.
  • ಖ್ಯಾತ ನಟ ಧನುಷ್‌ ಕೊಂಚ ವಿಭಿನ್ನವಾಗಿದ್ದು, ಡೈವೋರ್ಸ್‌ ನಿರ್ಧಾರ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ
  • ಡೈವೋರ್ಸ್‌ ಕುರಿತು ಧನುಷ್‌ ಮತ್ತು ಐಶ್ವರ್ಯ ಅವರು ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.
ಎಲ್ಲಾ ಸ್ಟಾರ್‌ಗಳಿಂತ ವಿಭಿನ್ನ ಧನುಷ್ಯ-ಐಶ್ವರ್ಯ : ಡೈವೋರ್ಸ್‌ ನಿರ್ಧಾರ ಕೈಬಿಟ್ಟ ದಂಪತಿ..! title=

ಬೆಂಗಳೂರು : ಚಿತ್ರರಂಗಲ್ಲಿ ಡೈವೋರ್ಸ್‌ ಕಾಮನ್‌ ಆಗಿಬಿಟ್ಟಿದೆ. ಸ್ಟಾರ್‌ ನಟ, ನಟಿಯರು ವಿವಾಹ ವಿಚ್ಛೇದನ ಪಡೆದಿದ್ದಾರೆ ಎಂದು ನ್ಯೂಸ್‌ ಬಂದ್ರೂ ಸಹ.. ಇದು ಮಾಮೂಲಿ ಸುದ್ದಿ ಎನ್ನುವ ಹಂತಕ್ಕೆ ಬಂದಿದೆ. ಇಂತಹವರ ಸಾಲಿನಲ್ಲಿ ಖ್ಯಾತ ನಟ ಧನುಷ್‌ ಕೊಂಚ ವಿಭಿನ್ನವಾಗಿದ್ದು, ಮುರಿದು ಬಿಳುವ ಹಂತದಲ್ಲಿದ್ದ ದಾಂಪತ್ಯ ಜೀವನವನ್ನು ಪುನಃ ಪ್ರಾರಂಭಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ತಮಿಳು ನಟ ಧನುಷ್ ಮತ್ತು ಐಶ್ವರ್ಯ ಡೈವೋರ್ಸ್‌ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಚಾರ. ನಟ ರಜಿನಿಕಾಂತ್ ಅವರ ಹಿರಿಯ ಮಗಳಾದ ಐಶ್ವರ್ಯಾ, 2004ರಲ್ಲಿ ಮದುವೆಯಾಗಿದ್ದರು. ಇವರಿಗೆ ಯಾತ್ರರಾಜ ಮತ್ತು ಲಿಂಗರಾಜ ಎಂಬ ಇಬ್ಬರು ಪುತ್ರರು ಇದ್ದಾರೆ. ಅನ್ಯೋನ್ಯವಾಗಿದ್ದ ದಂಪತಿಗಳು ಈ ವರ್ಷದ ಜನವರಿ ತಿಂಗಳಿನಲ್ಲಿ ಬೇರೆಯಾಗುವುದಾಗಿ ಘೋಷಿಸಿದ್ದರು. ಈ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು.

ಇದನ್ನೂ ಓದಿ: KSRTC ಬಸ್‌ ಟಿಕೆಟ್‌ನಲ್ಲಿ ನಾಡದ್ರೋಹಿ ʼಮಹಾರಾಷ್ಟ್ರ ಸರ್ಕಾರದ ಲಾಂಚನʼ..!

ಧನುಷ್-ಐಶ್ವರ್ಯ ಬೇರೆಯಾಗಲು ಕಾರಣವನ್ನೂ ಸಹ ಎಲ್ಲೂ ಹೇಳಿಕೊಂಡಿದ್ದಿಲ್ಲ. ಆನಂತರ ಕುಟುಂಬದವರು ಇವರನ್ನು ಮತ್ತೆ ಸೇರಿಸುವ ಪ್ರಯತ್ನದಲ್ಲಿ ತೊಡಗಿದ್ದರು ಎಂದು ವರದಿಗಳು ಪ್ರಕಟವಾದವು. ಇತ್ತೀಚೆಗೆ ಧನುಷ್-ಐಶ್ವರ್ಯ ದಂಪತಿ ಹಿರಿಯ ಮಗನ ಶಾಲೆಯ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಇಬ್ಬರೂ ಮತ್ತೆ ಜೊತೆಯಾಗಲಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ಮುಕ್ತ ಕರ್ನಾಟಕ : ಹೆಚ್‌ಡಿಕೆ, ಕೆಸಿಆರ್ ಸಂಕಲ್ಪ

ಹೀಗಿರುವಾಗ ಧನುಷ್ ಮತ್ತು ಐಶ್ವರ್ಯಾ ರಜಿನಿಕಾಂತ ವಿವಾದದ ಅಂತ್ಯವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆ. ಇದನ್ನು ನೋಡಿದ ಅಭಿಮಾನಿಗಳು ಆಸಕ್ತಿಯಿಂದ ಕಾಮೆಂಟ್ ಮಾಡುತ್ತಿದ್ದಾರೆ, ʼಈ ಸುದ್ದಿ ನಿಜವಾಗಬೇಕು ಎಂದು ನಾನು ಭಾವಿಸುತ್ತೇನೆʼ, ʼಸಮಂತಾ-ನಾಗ ಚೈತನ್ಯ ಅವರಂತೆ ಆಗದಿದ್ದಂತೆ ಒಳ್ಳೆಯದುʼ ಎಂದು ಫ್ಯಾನ್ಸ್‌ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಡೈವೋರ್ಸ್‌ ಕುರಿತು ಧನುಷ್‌ ಮತ್ತು ಐಶ್ವರ್ಯ ಅವರು ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News