ಪವಿತ್ರಾ-ನರೇಶ್‌ ಮದುವೆ ನಿಜ ಅಂತ ನಂಬಿ ಬಕ್ರಾ ಆದ್ರಾ..!? ಇಲ್ಲಿದೆ ನೋಡಿ ವಿಡಿಯೋ ಸತ್ಯ

ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಕುರಿತ ಸುದ್ದಿಗಳು ಬಹಳ ದಿನಗಳಿಂದ ಸಾಕಷ್ಟು ಪ್ರಚಾರ ಪಡೆಯುತ್ತಿವೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅಲ್ಲದೆ, ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ, ಇವರಿಬ್ಬರ ಸಂಬಂಧದ ವಿಚಾರವಾಗಿ ದೂರುಗಳನ್ನು ಸಹ ನೀಡಿದ್ದಾರೆ. ಅಲ್ಲದೆ, ಪವಿತ್ರಾ ಜೊತೆ ನರೇಶ್‌ ಕೆಲ ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. 

Written by - Krishna N K | Last Updated : Mar 10, 2023, 04:34 PM IST
  • ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಕುರಿತ ಸುದ್ದಿಗಳು ಸಾಕಷ್ಟು ಪ್ರಚಾರ ಪಡೆಯುತ್ತಿವೆ.
  • ಇಂದು ಸಹ ನರೇಶ್‌ ಮತ್ತು ಪವಿತ್ರಾ ಮದುವೆ ವಿಡಿಯೋ ಹಂಚಿಕೊಂಡಿದ್ದರು.
  • ಈ ವಿಡಿಯೋ ನೋಡಿದ ಜನರು ನಿಜವೆಂದು ನಂಬಿದ್ದರು. ಅದರೆ ಇದರ ನಿಜಸ್ವರೂಪ ಬಯಲಾಗಿದೆ.
ಪವಿತ್ರಾ-ನರೇಶ್‌ ಮದುವೆ ನಿಜ ಅಂತ ನಂಬಿ ಬಕ್ರಾ ಆದ್ರಾ..!? ಇಲ್ಲಿದೆ ನೋಡಿ ವಿಡಿಯೋ ಸತ್ಯ title=

Naresh Pavitra Lokesh Marriage : ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಕುರಿತ ಸುದ್ದಿಗಳು ಬಹಳ ದಿನಗಳಿಂದ ಸಾಕಷ್ಟು ಪ್ರಚಾರ ಪಡೆಯುತ್ತಿವೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅಲ್ಲದೆ, ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ, ಇವರಿಬ್ಬರ ಸಂಬಂಧದ ವಿಚಾರವಾಗಿ ದೂರುಗಳನ್ನು ಸಹ ನೀಡಿದ್ದಾರೆ. ಅಲ್ಲದೆ, ಪವಿತ್ರಾ ಜೊತೆ ನರೇಶ್‌ ಕೆಲ ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. 

ಅಲ್ಲದೆ, ನರೇಶ್ ಕೂಡ ಮಾಧ್ಯಮ ಮೂಲಕ ರಮ್ಯಾ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದರು. ಇನ್ನು, ತಾವಿಬ್ಬರೂ ಡಿಸೆಂಬರ್ 31ಕ್ಕೆ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಲೋಕೇಶ್‌ಗೆ ಪವಿತ್ರಾ ಕಿಸ್ ಮಾಡುತ್ತಿರುವ ವಿಡಿಯೋವನ್ನು ನರೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ದೊಡ್ಡ ಚರ್ಚೆ ಶುರುವಾಗಿತ್ತು. ಆದರೆ ಅದೇ ಸಮಯದಲ್ಲಿ ರಮ್ಯಾ ಜೊತೆ ನರೇಶ್‌ ಇನ್ನೂ ವಿಚ್ಛೇದನ ಪಡೆದಿದ್ದಿಲ್ಲ ಆದ್ದರಿಂದ ಮದುವೆ ಅಮಾನ್ಯವಾಗಿತ್ತು.

ಇದನ್ನೂ ಓದಿ: Pavitra Lokesh : 3ನೇ ಮದುವೆ ಆದ ʼಪವಿತ್ರಾ ಲೋಕೇಶ್‌ ಬ್ಯಾಂಗ್ರೌಡ್‌ʼ ಕೇಳಿದ್ರೆ ಶಾಕ್‌ ಆಗ್ತೀರಾ...! UPSC ಪರೀಕ್ಷೆ ಬರೆದಿದ್ದರು

ಇದೀಗ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಇಂದು ಬೆಳಿಗ್ಗೆಯಿಂದಲೇ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಸ್ವತಃ ನಟ ನರೇಶ್‌ ತಮ್ಮ ಟ್ಟಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲದೆ, ಒಂದು ಪವಿತ್ರ ಬಂಧ, ಎರಡು ಮನಸು, ಮೂರು ಗಂಟುಗಳು, ಏಳು ಹೆಜ್ಜೆ, ನಿಮ್ಮ ಆಶೀರ್ವಾದವನ್ನು ಕೋರಿ.. ಎಂದು ಶೀರ್ಷಿಕೆ ಬರೆದು ನರೇಶ್‌ ವಿಡಿಯೋವನ್ನು ಶೇರ್‌ ಮಾಡಿದ್ದರು.

ಇದೀಗ ಆ ವೈರಲ್‌ ವಿಡಿಯೋದ ನಿಜ ಸ್ವರೂಪ ಬೆಳಕಿಗೆ ಬಂದಿದ್ದು, ಎಂ.ಎಸ್.ರಾಜು ನಿರ್ಮಿಸಲಿರುವ ಸಿನಿಮಾದ ಬಗ್ಗೆ ಹೇಳಲು ನರೇಶ್ ಪವಿತ್ರಾ ಪೆಳ್ಳಿ ಸಾಮಾಜಿಕ ಜಾಲತಾಣದಲ್ಲಿ ಎಬ್ಬಿಸಿರುವ ಹೈಪ್ ನ ಭಾಗವೇ ಇಂದು ಬಿಡುಗಡೆಯಾಗಿರುವ ವಿಡಿಯೋ ಕೂಡ ಇರಬಹುದು ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಕೇಳಿ ನೆಟ್ಟಿಗರು ನರೇಶ್ ನಮ್ಮನ್ನೆಲ್ಲ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:Naresh-Pavithra Lokesh: ಅದ್ಧೂರಿಯಾಗಿ 3ನೇ ಮದುವೆಯಾದ ಪವಿತ್ರ, ನರೇಶ್‌ಗೆ 4ನೇ ಮದುವೆ ಸಂಭ್ರಮ..!

ನರೇಶ್ ಈಗಾಗಲೇ ಎರಡು ಮದುವೆಗಳಲ್ಲಿ ವಿಫಲರಾಗಿದ್ದು, ಮೂರನೇ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದಾರೆ. ಆ ವಿಚ್ಛೇದನದ ನಂತರ ಪವಿತ್ರಾ ಲೋಕೇಶ್ ಜೊತೆ ನಿಜವಾಗಿಯೂ ಮದುವೆಯಾಗುತ್ತಾರಾ..? ಅಥವಾ ಹೀಗೆ ಸಂಬಂಧವನ್ನು ಮುಂದುವರೆಸುತ್ತಾರಾ..! ಅಂತ ತಿಳಿದು ಬರಬೇಕಿದೆ. ಆದರೆ ಇದುವರೆಗೆ ನಡೆದಿರುವ ಎಲ್ಲಾ ವಿಡಿಯೋಗಳು ಚಿತ್ರದ ಭಾಗವಾಗಿದ್ದು, ಶೀಘ್ರದಲ್ಲೇ ಫಸ್ಟ್ ಲುಕ್ ಮತ್ತು ಟೈಟಲ್‌ ಅನೌನ್ಸ್‌ ಮಾಡಲಾಗುತ್ತದೆ ಅಂತ ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News