Kavita Chaudhary Passes Away : ದೂರದರ್ಶನ ಜನಪ್ರಿಯ ಧಾರಾವಾಹಿ 'ಉಡಾನ್' ನಲ್ಲಿ IPS ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ನಟಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾದರು. ನಟಿಗೆ 67 ವರ್ಷ ವಯಸ್ಸಾಗಿತ್ತು.
ಕವಿತಾ ಚೌಧರಿ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಅಮೃತಸರದ ಪಾರ್ವತಿ ದೇವಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಗುರುವಾರ ರಾತ್ರಿ 8:30ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕವಿತಾ ಚೌಧರಿ ಅವರ ಅಂತಿಮ ಸಂಸ್ಕಾರವನ್ನು ಅಮೃತಸರದಲ್ಲಿ ನಡೆಸಲಾಗುತ್ತಿದೆ.
ಇದನ್ನೂ ಓದಿ:ಸೃಜನ್ ಲೋಕೇಶ್ ಪ್ರಥಮ ನಿರ್ದೇಶನದ "GST" ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ!
ಕವಿತಾ ಚೌಧರಿ ದೂರದರ್ಶನ ದೂರದರ್ಶನ ಸರಣಿ ಉಡಾನ್‌ನಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದರು. 1980 ರ ದಶಕದಲ್ಲಿ ಸರ್ಫ್ ಡಿಟರ್ಜೆಂಟ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಪರಿಚಿತರಾಗಿದ್ದರು.
ಕವಿತಾ ಚೌಧರಿ ಅವರು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಪೊಲೀಸ್ ಅಧಿಕಾರಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರ ಕಿರಿಯ ಸಹೋದರಿ. ಕಿರಣ್ ಬೇಡಿ ನಂತರ ಕಾಂಚನ್ ಎರಡನೇ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ಡಿಜಿಪಿ ಆದ ಮೊದಲ ಮಹಿಳೆ.
ಇದನ್ನೂ ಓದಿ:ನಯನತಾರಾ ಸಹೋದರನನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಣ್ಣ ತಂಗಿಯ ಅಪರೂಪದ ಪೋಟೋ!
ಇನ್ನು ಕವಿತಾ ಅವರು 1980 ರ ದಶಕದ ಆರಂಭದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 1989 ರಲ್ಲಿ, 'ಉಡಾನ್' ನಲ್ಲಿ ಕಲ್ಯಾಣಿ ಸಿಂಗ್ ಅವರ ಪ್ರಮುಖ ಪಾತ್ರದ ಮೂಲಕ ಜನಪ್ರೀಯತೆ ಗಳಿಸಿದರು. ಈ ಧಾರಾವಾಹಿಯು ಪ್ರಮುಖ ಯಶಸ್ಸನ್ನು ಕಂಡಿತು. ಚೌಧರಿ ಅವರ ಅಭಿನಯವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಸಮಾನವಾಗಿ ಪ್ರಶಂಸಿಸಿದರು. ಉಡಾನ್ ಯಶಸ್ಸಿನ ನಂತರ, ಚೌಧರಿ ಅವರು 'ಯುವರ್ ಆನರ್' ಮತ್ತು 'ಐಪಿಎಸ್ ಡೈರೀಸ್' ಸೇರಿದಂತೆ ಹಲವಾರು ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.