close

News WrapGet Handpicked Stories from our editors directly to your mailbox

ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ನಿಧನ

ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ಬುಧುವಾರದಂದು ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಶನಿವಾರದಂದು ಅವರು ಪ್ರಜ್ಞಾ ಶೂನ್ಯರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

Updated: Jul 17, 2019 , 03:46 PM IST
ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ನಿಧನ

ನವದೆಹಲಿ: ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ಬುಧುವಾರದಂದು ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಶನಿವಾರದಂದು ಅವರು ಪ್ರಜ್ಞಾ ಶೂನ್ಯರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

1960 ಮತ್ತು 1970 ರ ಚಲನಚಿತ್ರಗಳಲ್ಲಿ ಬಹುಮುಖ ಪಾತ್ರಗಳಿಗೆ ಹೆಸರುವಾಸಿಯಾಗಿಡ್ಡ ಅವರು ಬಂಗಾಳದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವರ ಮಗ ಶರಣ್ ದತ್ತಾ ಕೂಡ ನಟರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ತಪನ್ ಸಿನ್ಹಾ ಅವರ ಅಪಂಜನ್ (1968) ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ ಅವರು ಮುಂದೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲವೆನ್ನಬಹುದು. ಈ ಚಿತ್ರವು 1960 ರ ದಶಕದಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಪ್ರಕ್ಷುಬ್ಧತೆಯ ಕುರಿತಾಗಿ ಬಂದಂತಹ ಚಿತ್ರವಾಗಿತ್ತು. 

ದಕ್ಷಿಣ ಕೋಲ್ಕತ್ತಾದ ಶಾಲಾ ದಿನಗಳಲ್ಲಿ ಉತ್ತಪಾಲ್ ದತ್ ಅವರಿಂದ ಸ್ಫೂರ್ತಿ ಪಡೆದ ದತ್ತಾ, ಅವರೊಂದಿಗೆ ನಾಟಕ ತಂಡದಲ್ಲಿ ದೀರ್ಘಕಾಲ ನಟಿಸಿದ್ದರು. ಅವರ ಕೆಲವು ಪ್ರಸಿದ್ಧ ಚಲನಚಿತ್ರಗಳಲ್ಲಿ ಸಾಗಿನಾ ಮಹಾಟೊ, ಹಾರ್ಮೋನಿಯಂ, ಪಿಟಾ ಪುತ್ರ ಮತ್ತು ಮಾ ಒ ಮೆಯೆ ಸೇರಿವೆ.