Viral video : ಉತ್ತರ ಪ್ರದೇಶದ ಜಿಲ್ಲಾಸ್ಪತ್ರೆಯೊಂದರ ಸಿಬ್ಬಂದಿ ಮಹಿಳಾ ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸೀತಾಪುರ ಜಿಲ್ಲಾ ಆಸ್ಪತ್ರೆಯದ್ದು ಎಂದು ಹೇಳಲಾಗುತ್ತಿದೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆ ಆಡಳಿತ ಮಂಡಳಿ ತನ್ನ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದೆ.
ವೈರಲ್ ವೀಡಿಯೊದಲ್ಲಿ, ನರ್ಸ್ ಮಹಿಳೆಯ ಕೂದಲನ್ನು ಹಿಡಿದು ಖಾಲಿ ಹಾಸಿಗೆಗೆ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದರ ನಂತರ, ನರ್ಸ್ ಮತ್ತೆ ಖಾಲಿ ಹಾಸಿಗೆಯ ಮೇಲೆ ಕೂದಲನ್ನು ಹಿಡಿದ ಮಹಿಳೆಯನ್ನು ಎಸೆಯುತ್ತಾಳೆ. ಈ ಸಮಯದಲ್ಲಿ, ನರ್ಸ್‌ಗೆ ಪುರುಷ ಆರೋಗ್ಯ ಕಾರ್ಯಕರ್ತರು ಸಹ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ʼಕಾಂತಾರʼ ಕಾಪಿರೈಟ್ ವಿವಾದ : ಹೊಂಬಾಳೆಗೆ ಬೇಡಿಕೆ ಇಟ್ಟ ‘ತೈಕ್ಕುಡಂ ಬ್ರಿಡ್ಜ್’...!
ಸದ್ಯ ಘಟನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆಸ್ಪತ್ರೆಯ ಸಿಎಂಎಸ್ ಡಾ. ಆರ್.ಕೆ ಸಿಂಗ್ ಅವರು ಆಸ್ಪತ್ರೆಯ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಕ್ಟೋಬರ್ 18 ರಂದು ಮಹಿಳಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 19ರ ರಾತ್ರಿ, 12 ಮತ್ತು 1 ಗಂಟೆಯ ನಡುವೆ, ಮಹಿಳೆ ವಾಶ್ ರೂಂಗೆ ಹೋಗಿದ್ದರು. ನಂತ ಇದ್ದಕ್ಕಿದ್ದಂತೆ ಹಿಂಸಾತ್ಮಕವಾಗಿ ವರ್ತಿಸಲು ಪ್ರಾರಂಭಿಸಿದರು. ತನ್ನ ಬಳೆಗಳನ್ನು ಮುರಿದುಕೊಂಡು ಬಟ್ಟೆಗಳನ್ನು ಹರಿದು ಹಾಕಲು ಪ್ರಾರಂಭಿಸಿದಳು ಎಂದು ಡಾ ಸಿಂಗ್ ಹೇಳುತ್ತಾರೆ.
ಇನ್ನು ಇದನ್ನೆಲ್ಲ ಕಂಡ ವಾರ್ಡ್‌ನ ಇತರ ಮಹಿಳಾ ರೋಗಿಗಳು ಭಯಗೊಂಡರು. ಮಹಿಳೆಯನ್ನು ತಡೆಯಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಟ್ಟರು. ಅಷ್ಟರಲ್ಲಿ ಇನ್ನೊಂದು ವಾರ್ಡ್ ನ ನರ್ಸ್ ಗಳೂ ಸಹಾಯಕ್ಕೆ ಬಂದರು. ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ಕೂಡ ಪೊಲೀಸರಿಗೆ ಸಂಪೂರ್ಣ ವಿಷಯ ತಿಳಿಸಿದ್ದಾರೆ. ಎಂದು ಡಾ. ಸಿಂಗ್ ಮಹಿಳೆಯೊಂದಿಗೆ ಅನುಚಿತ ವರ್ತನೆಯ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು. ಸಂಬಂಧಿಕರು ಆಸ್ಪತ್ರೆಗೆ ಬಂದ ನಂತರ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ