Salman Khan : ಸಲ್ಮಾನ್‌ ಖಾನ್‌ ಹಂದಿ ತರ ತಿಂತಾನೆ.. ನಾಯಿ ತರ..! ಖ್ಯಾತ ನಟನ ಹೇಳಿಕೆ ವೈರಲ್‌

Salman Khan eats like Pig : ಬಾಲಿವುಡ್‌ ಭಾಯಿಜಾನ್ ನಟ ಸಲ್ಮಾನ್ ಖಾನ್ ಕುರಿತು ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಕುರಿತು ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ.. ನೋಡಿ..

Written by - Krishna N K | Last Updated : Mar 10, 2024, 02:12 PM IST
    • ಸಲ್ಮಾನ್‌ ಖಾನ್‌ ಕುರಿತು ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ವೈರಲ್‌
    • ಸಲ್ಮಾನ್‌ ಖಾನ್‌ ಹಂದಿಯಂತೆ ತಿನ್ನುತ್ತಾನೆ ಎಂದ ವಿಂದು ದಾರಾ ಸಿಂಗ್‌
    • ಇದೀಗ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Salman Khan : ಸಲ್ಮಾನ್‌ ಖಾನ್‌ ಹಂದಿ ತರ ತಿಂತಾನೆ.. ನಾಯಿ ತರ..! ಖ್ಯಾತ ನಟನ ಹೇಳಿಕೆ ವೈರಲ್‌ title=
Salman khan

Vindu Dara Singh on Salman Khan : ಸಲ್ಲು ಭಾಯ್‌, ಟೈಗರ್‌, ಭಾಯಿಜಾನ್‌ ಅಂತ ಅಭಿಮಾನಿಗಳು ಮತ್ತು ಬಾಲಿವುಡ್‌ ತಾರೆಗಳಿಂದ ಕರೆಯಿಸಿಕೊಳ್ಳುವ ನಟ ಸಲ್ಮಾನ್‌ ಸಿನಿರಂಗದ ಟಾಪ್‌ ಒನ್‌ ನಟರಲ್ಲಿ ಒಬ್ಬರು. ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಸಲ್ಲು ಭಾಯ್‌ ಅಷ್ಟು ಫೇಮಸ್‌. ಇದೀಗ ಸಲ್ಮಾನ್‌ ಖಾನ್‌ ಕುರಿತು ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಸೃಷ್ಟಿಸುತ್ತಿದೆ.

ಹೌದು.. ಇತ್ತೀಚಿನ ಸಂದರ್ಶನವೊಂದರಲ್ಲಿ, ಸಲ್ಮಾನ್‌ ಖಾನ್‌ ಆಪ್ತ ಸ್ನೇಹಿತ, ನಟ ವಿಂದು ದಾರಾ ಸಿಂಗ್ ಅವರು ಸಲ್ಮಾನ್ ಖಾನ್ ಕುರಿತ ಕೆಲವೊಂದಿಷ್ಟು ಇಂಟ್ರಸ್ಟಿಂಗ್‌ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ವಿಂದು ಭಾಯಿಜಾನ್ ಅವರ ಜೀವನಶೈಲಿ ಕುರಿತು ಹೇಳುವಾಗ ಅವರ ಫಿಟ್‌ನೆಸ್‌ ಬಗ್ಗೆ ಮಾತನಾಡಿದರು. 

ಇದನ್ನೂ ಓದಿ:IAS ಆಗಬೇಕಿದ್ದ ಚೆಲುವೆ.. ಅನಿರೀಕ್ಷಿತವಾಗಿ ಹೀರೋಯಿನ್ ಆಗಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿರುವ ಸ್ಟಾರ್‌ ನಟಿ ಈಕೆ!

ಈ ವೇಳೆ ವಿಂದು ದಾರಾ ಸಿಂಗ್, ಫಟ್‌ನೆಸ್‌ ವಿಚಾರವಾಗಿ ಬಂದ್ರೆ ಸಲ್ಮಾನ್‌ ಖಾನ್‌ ಹಂದಿಯಂತೆ ತಿನ್ನುತ್ತಾನೆ ಮತ್ತು ನಾಯಿಯಂತೆ ವ್ಯಾಯಾಮ ಮಾಡುತ್ತಾನೆ ಅಂತ ಹೇಳಿದರು. ಇದರ ಅರ್ಥ ಅವರು ಎಷ್ಟು ತಿನ್ನುತ್ತಾರೋ ಅಷ್ಟು ಕಸರತ್ತು ನಡೆಸುತ್ತಾರೆ ಅಂತ. ಇದೀಗ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇನ್ನು ಸಲ್ಲು ಕುರಿತು ಮಾತು ಮುಂದುವರೆಸಿದ ವಿಂದ್‌, ಅವನು ತಿನ್ನುವ ಆಹಾರದ ಪ್ರಮಾಣವನ್ನು ನೋಡಿ, ನಾನು 'ಭಾಯ್, ಆ ಆಹಾರವೆಲ್ಲ ಎಲ್ಲಿಗೆ ಹೋಗುತ್ತೆ?' ಅಂತ ಪ್ರಶ್ನೆ ಮಾಡಿದೆ. ಅದಕ್ಕೆ ಅವನು ಅದನ್ನು ಸುಡುತ್ತೇನೆ ಅಂತ ಉತ್ತರ ಕೊಟ್ಟರು ಅಂತ ಹೇಳಿದರು. ದಿನಪೂರ್ತಿ ತಿಂದು ಸಂಜೆ ಜಿಮ್‌ನಲ್ಲಿ ಭಾಯ್‌ ಎಲ್ಲವನ್ನು ಕರಗಿಸುತ್ತಾರಂತೆ. 

ಇದನ್ನೂ ಓದಿ:ಸಿನಿಮಾಗಳಲ್ಲಿ ಅಪ್ಪು ಫೋಟೋ ಹಾಕಲೇಬೇಕು ಅನ್ನೋದನ್ನ ಕಡ್ಡಾಯ ಮಾಡ್ಬೇಡಿ..!

ಸಲ್ಮಾನ್ ಔದಾರ್ಯತನದ ಬಗ್ಗೆ ಮಾತನಾಡಿದ ದಾರಾ ಸಿಂಗ್‌, ಸಲ್ಮಾನ್ ಇಂದಿಗೂ ತನ್ನ ತಂದೆಯಿಂದ ಪಾಕೆಟ್ ಮನಿ ತೆಗೆದುಕೊಳ್ಳುತ್ತಾರೆ ಅಂತ ತಿಳಿಸಿದರು. ಅಲ್ಲದೆ, 50,000 ರಿಂದ 1 ಲಕ್ಷ ರೂಪಾಯಿಗಳನ್ನು ಬಡವರಿಗೆ ದಾನ ಮಾಡುತ್ತಾರೆ ಅಂತ ತಿಳಿಸಿದರು. ಅಲ್ಲದೆ, ಸಲ್ಲು ಅದ್ಭುತ ಮತ್ತು ಸಹಾಯಕ ವ್ಯಕ್ತಿ ಅಂತ ಹೇಳಿದರು.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News