20 ಕೆಜಿ ತೂಕ ಇಳಿಸಿಕೊಂಡ ನಟಿ ಗೀತಾ...ಇದರ ಹಿಂದಿನ ಗುಟ್ಟೇನು?

Written by - CHARITHA PATEL | Edited by - Manjunath N | Last Updated : Mar 30, 2022, 08:09 PM IST
  • ಸಾಕಷ್ಟು ಜನ ನನ್ನನ್ನ ನೋಡಿ ಟೀಕೆ ಮಾಡಿದ್ದಾರೆ. ಇವಳಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಕೂಡಾ ಆಡಿದ್ದಾರೆ.
  • ಸಾಕಷ್ಟು ಹೆಸರುಗಳನ್ನಿಟ್ಟು ಅಣಕಿಸಿದ್ದಾರೆ.
  • ಶುರುವಿನಲ್ಲಿ ಆ ಎಲ್ಲ ಪದಗಳು, ಮಾತುಗಳು ನನಗೆ ತುಂಬ ನೋವು ನೀಡ್ತಾಯಿತ್ತು
20 ಕೆಜಿ ತೂಕ ಇಳಿಸಿಕೊಂಡ ನಟಿ ಗೀತಾ...ಇದರ ಹಿಂದಿನ ಗುಟ್ಟೇನು? title=

ಬ್ರಹ್ಮಗಂಟು ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ಗುಂಡಮ್ಮ ಖ್ಯಾತಿಯ ಗೀತಾ ಭಾರತಿ ಭಟ್ ತಮ್ಮ ವಿಭಿನ್ನ ನಟನಾ ಶಕ್ತಿಯಿಂದ ಪ್ರತಿಯೊಬ್ಬರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಹ್ಮಗಂಟು ಸೀರಿಯಲ್‌ ಬಳಿಕ ಬಿಗ್‌ಬಾಸ್‌ ಮನೆಯಲ್ಲಿ ಗೀತಾ ತಮ್ಮ ಮುಗ್ಧ ಗುಣದಿಂದ ತಮ್ಮದೇ ಆದ ಛಾಪು ಮೂಡಿಸಿದರು. ಆದ್ರೆ ಒಂದಿಷ್ಟು ದಿನಗಳು ಮಾತ್ರ ಬಿಗ್‌ಬಾಸ್‌ ಮನೆಯಲ್ಲಿದ್ರು. ದೊಡ್ಡಮನೆಯಿಂದ ಹೊರಬಂದ ಬಳಿಕ ಒಂದೆರಡು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡರು.  ನಂತರ ಗೀತಾ ಭಟ್‌ ಎಲ್ಲಿ ಹೋದರು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿತ್ತು.

ಇದನ್ನೂ ಓದಿ: ಮತ್ತೆ ಶುರುವಾಗುತ್ತಾ ಮಜಾ ಟಾಕೀಸ್?‌

ಇದೀಗ ಆ ಪ್ರಶ್ನೆಗೆ  ಉತ್ತರ ಸಿಕ್ಕಿದೆ. ಹೌದು, ಬಿಗ್‌ಬಾಸ್‌ ವೇದಿಕೆ ಮೇಲೆ ನಟ ಕಿಚ್ಚ ಸುದೀಪ್‌ ಎದುರು ಗೀತಾ, ನಾನು ಇನ್ನು ಮುಂದೆ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ವಹಿಸುತ್ತೀನಿ ಎಂಬ ಮಾತುಗಳನ್ನಾಡಿದ್ರು. ಆ ಮಾತಿನಂತೆ ಗೀತಾ  ವರ್ಕೌಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್‌ ಬಾಸ್‌ ವೇದಿಕೆಯಲ್ಲಿ ಗೀತಾ ಅವ್ರ ಈ ಮಾತನ್ನ ಕೇಳಿಸಿಕೊಂಡ ಕೋಚ್‌ ಕಿರಣ್‌ ಅವ್ರು, ಗೀತಾನ ಕಾಂಟ್ಯಾಕ್ಟ್‌ ಮಾಡಿ  ವರ್ಕ್‌ಔಟ್‌ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ ಫಿಟ್‌ನೆಸ್‌ ಮಾಡುವಂತೆ ಸಲಹ ಇಟ್ರಂತೆ.ಕಿರಣ್‌ ಮಾತಿನಂತೆ, ಗೀತಾ ಕಿರಣ್‌ ಜಿಮ್‌ಗೆ ಹೋಗಿ ವರ್ಕ್‌ಔಟ್‌ ಶುರು ಮಾಡಿದ್ದಾರೆ. ಕಳೆದ 5 ತಿಂಗಳ ಸತತ ಪ್ರಯತ್ನದಿಂದ ಬರೊಬ್ಬರಿ 20 ಕೆಜಿ ತೂಕವನ್ನು ಗೀತಾ ಇಳಿಸಿದ್ದಾರಂತೆ. ಗೀತಾ ಹೇಳುವ ಪ್ರಕಾರ, ಶೇಕಡಾ 50 ರಷ್ಟು ನಾನು ತೂಕ ಇಳಿಸಿದ್ದೀನಿ.ಇನ್ನು ಒಂದಿಷ್ಟು ತಿಂಗಳಲ್ಲಿ ಇನ್ನಷ್ಟು ತೂಕ ಇಳಿಸ್ತೀನಿ. ಆ ಭರವಸೆ ನನ್ನಲ್ಲಿದೆ ಎಂದಿದ್ದಾರೆ.ಜೊತೆಗೆ ಮತ್ತೊಂದು ವಿಚಾರ ಅಂದ್ರೆ  10 ರಿಂದ 11 ಇಂಚು ಸುತ್ತಳತೆಗೆ ತೂಕ ಇಳಿಸಿದ್ದು, ಇದು ನನಗೆ ಸಾಕಷ್ಟು ಖುಷಿ ನೀಡಿದೆ ಎಂದಿದ್ದಾರೆ.No description available.

ಇದನ್ನೂ ಓದಿ: Shruti Haasan On Parents Devorce: ತಂದೆ-ತಾಯಿಯ ವಿಚ್ಛೇದನೆಯಿಂದ ಖುಷಿಯಾಗಿದ್ದೆ, ಬೆಚ್ಚಿಬೀಳಿಸುವ ಹೇಳಿಕೆ ನೀಡಿದ Shruti Haasan

ಸಾಕಷ್ಟು ಜನ ನನ್ನನ್ನ ನೋಡಿ ಟೀಕೆ ಮಾಡಿದ್ದಾರೆ. ಇವಳಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಕೂಡಾ ಆಡಿದ್ದಾರೆ.ಸಾಕಷ್ಟು ಹೆಸರುಗಳನ್ನಿಟ್ಟು ಅಣಕಿಸಿದ್ದಾರೆ. ಶುರುವಿನಲ್ಲಿ ಆ ಎಲ್ಲ ಪದಗಳು, ಮಾತುಗಳು ನನಗೆ ತುಂಬ ನೋವು ನೀಡ್ತಾಯಿತ್ತು.ಆದ್ರೆ ಇದೀಗ ನಾನು ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೀನಿ. ನಾನು ನನ್ನ ಪ್ರಯತ್ನದಲ್ಲಿದ್ದೀನಿ ಎಂದಿದ್ದಾರೆ.ನನ್ನ ಈ ತೂಕದಿಂದಲೇ ಒಂದಿಷ್ಟು ಪ್ರಾಜೆಕ್ಟ್‌ಗಳು ಬಂದ್ರೂ ಕೂಡ ಮತ್ತೆ ರಿಜೆಕ್ಟ್‌ ಆಗಿವೆ. ಹಾಗಾಗಿ ಸದ್ಯ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ವಹಿಸ್ತಾಯಿದ್ದೀನಿ.ನನಗೆ ನನ್ನ ಮೇಲೆ ಸಮಾಧಾನವಾದ ಬಳಿಕ ಮತ್ತೆ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ತೀನಿ ಎಂಬ ಮಾತುಗಳನ್ನಾಡಿದ್ದಾರೆ. 

ಇನ್ನು ತಮ್ಮ ಡಯೇಟ್‌ ಪ್ಲಾನ್ಸ್‌ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡ ಗೀತಾ, ನಾನು ತುಂಬಾನೇ ಫುಡ್ಡಿ. ಆದ್ರೆ ಜಿಮ್‌ಗೆ ಬರೋದಕ್ಕೆ ಶುರು ಮಾಡಿದ ಬಳಿಕ ಸ್ವಲ್ಪ ಕಂಟ್ರೋಲ್‌ನಲ್ಲಿದ್ದೀನಿ.ಮಿಲ್ಲೆಟ್ಸ್‌, ಪ್ರೋಟಿನ್‌ ಕಾಳುಗಳನ್ನ ತಿಂತಿನಿ. ಡಯೇಟ್‌ ಶುರುವಿನಲ್ಲಿ ತುಂಬ ಕಷ್ಟವಾಯ್ತು. ಆದ್ರೆ ಈಗ ಅಡ್ಜೆಸ್ಟ್‌ ಆಗಿದೆ ಎಂದಿದ್ದಾರೆ.ಒಟ್ಟಿನಲ್ಲಿ ತಮ್ಮ ಪ್ರಯತ್ನದಿಂದ 20 ಕೆಜಿ ತೂಕವನ್ನಿಳಿಸಿ ತುಂಬಾ ಹೆಣ್ಣು ಮಕ್ಕಳಿಗೆ ಗೀತಾ ಒಂದು ರೀತಿ ಸ್ಪೂರ್ತಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News