ಫ್ಯಾನ್ ಒಬ್ಬರು ರವೀನಾ ಟಂಡನ್ ಮುಂದೆ ಈ ರೀತಿ ಪ್ರಪೋಸ್ ಮಾಡಿದಾಗ ಸಿಕ್ಕ ಖಡಕ್ ಜವಾಬ್ ಇದು!

2015ರ ನಂತರ, ರವೀನಾ ಟಂಡನ್  (Raveena Tandon)  ಬಹಳ ಕಡಿಮೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ರವೀನಾ ಟಂಡನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

Last Updated : May 8, 2020, 09:40 AM IST
ಫ್ಯಾನ್ ಒಬ್ಬರು ರವೀನಾ ಟಂಡನ್ ಮುಂದೆ ಈ ರೀತಿ ಪ್ರಪೋಸ್ ಮಾಡಿದಾಗ ಸಿಕ್ಕ ಖಡಕ್ ಜವಾಬ್ ಇದು! title=

ನವದೆಹಲಿ: ಬಾಲಿವುಡ್ ನಟಿ ರವೀನಾ ಟಂಡನ್ 90ರ ದಶಕದಲ್ಲಿ ಬಾಲಿವುಡ್ ನ ಅಗ್ರ ನಟಿಯರ ಪಟ್ಟಿಯಲ್ಲಿದ್ದರು. 2015ರ ನಂತರ ರವೀನಾ ಕಡಿಮೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ರವೀನಾ ಟಂಡನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ವಿಶೇಷವಾಗಿ ಈ ದಿನಗಳಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಕ್ರಿಯಾಶೀಲತೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚಾಗಿ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಅನುಕ್ರಮದಲ್ಲಿ ಅವರು ಗಿರಿಧಾಮದಲ್ಲಿ ರಜಾದಿನಗಳಲ್ಲಿ ತೆಗೆದ ಕೆಲವು ಹಳೆಯ ಛಾಯಾಚಿತ್ರಗಳನ್ನು ಹಂಚಿಕೊಂಡರು. ಈ ಚಿತ್ರಗಳಲ್ಲಿ ಅವಳ ಪತಿ ಅನಿಲ್ ತಡಾನಿ ಜೊತೆ ಕಾಣಿಸಿಕೊಂಡಿದ್ದಾಳೆ.

ರವೀನಾ ಅವರ ಈ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರಗಳಲ್ಲಿ ಲೈಕ್ ಗಳು  ಮತ್ತು ಕಾಮೆಂಟ್‌ಗಳು ನಿರಂತರವಾಗಿ ಬರುತ್ತಿವೆ. ಏತನ್ಮಧ್ಯೆ ಈ ಚಿತ್ರದ ಬಗ್ಗೆ ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬರು ರವೀನಾ ಮಾಮ್ ಮುಂದಿನ ಜನ್ಮದಲ್ಲಿ ನೀವು ನನ್ನನ್ನು ಮದುವೆಯಾಗುತ್ತೀರಾ...? ಎಂದು ಪ್ರಪೋಸ್ ಮಾಡಿದ್ದಾರೆ. ಈ ಪ್ರಶ್ನೆಗೆ ಕೂಲ್ ಆಗಿ ಪ್ರತಿಕ್ರಿಯಿಸಿರುವ ರವೀನಾ 'ಕ್ಷಮಿಸಿ  ಈಗಾಗಲೇ 7 ಬುಕ್ ಆಗಿದೆ' ಎಂದು ಬರೆದಿದ್ದಾರೆ.

ರವೀನಾ ಟಂಡನ್ ಅವರ ನಟನಾ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ ಅವರು 2019ರಲ್ಲಿ ಸೋನಾಕ್ಷಿ ಸಿನ್ಹಾ ಅವರ 'ಖಂಡಾನಿ ಶಫಖಾನಾ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ ರವೀನಾ ಟಿವಿಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 'ಅತಿದೊಡ್ಡ ಕಲಾವಿದ' ಕಾರ್ಯಕ್ರಮದ ನಂತರ ರವೀನಾ 'ನಾಚ್ ಬಲಿಯೆ 9' ನ ಜಡ್ಜ್ ಆಗಿದ್ದರು. 

ರವೀನಾ ಅವರ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಏನೆಂದರೆ ಅವರು ಶೀಘ್ರದಲ್ಲೇ 'ಕೆಜಿಎಫ್ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಅವರ ಈ ಚಿತ್ರದಲ್ಲಿ ರವೀನಾ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವೀನಾ ಈ ಸಮಯದಲ್ಲಿ ಚಿತ್ರಗಳಿಂದ ದೂರವಾಗಿದ್ದಾರೆ ಆದರೆ ದೀರ್ಘ ವಿರಾಮದ ನಂತರ ಅವರು ಮತ್ತೆ 'ಕೆಜಿಎಫ್ 2' ಚಿತ್ರದ ಮೂಲಕ ಚಿತ್ರಮಂದಿರಕ್ಕೆ ಮರಳಲಿದ್ದಾರೆ.

Trending News