ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಜೂನ್ 14 ರಂದು ಮುಂಬೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು, ನಂತರ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ನಿರಂತರವಾಗಿ ತನಿಖೆ ನಡೆಸುತ್ತಿದ್ದರೂ ಸುಶಾಂತ್ ಸಿಂಗ್ ನೇಣಿಗೆ ಏಕೆ ಶರಣಾದರು ಎಂಬ ಕುತೂಹಲ ಹಲವರ ಮನಸ್ಸಿನಲ್ಲಿದೆ. ಇದೇ ವೇಳೆ ಪಾಟ್ನಾದಲ್ಲಿ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ನಂತರ, ಬಿಹಾರ ಪೊಲೀಸರು ಸಹ ಪ್ರಕರಣದ ತನಿಖೆಯಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಮುಂಬೈನಲ್ಲಿ ಬಿಹಾರ ಪೊಲೀಸರ ತಂಡವೂ ಈ ವಿಷಯದಲ್ಲಿ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಾಜ್ಪುತ್ ಕುಟುಂಬ ಸದಸ್ಯರು ನಟಿ ರಿಯಾ ಚಕ್ರವರ್ತಿ ಮೇಲೆ ಬ್ಲಾಕ್ ಮ್ಯಾಜಿಕ್ ಆರೋಪ ಮಾಡಿದ್ದಾರೆ. ಆದರೆ, ಪ್ರಕರಣದ ಕುರಿತು ಹೊರಹೊಮ್ಮಿರುವ ಹೊಸ ಸುದ್ದಿಯೊಂದರ ಪ್ರಕಾರ ಪೂಜಾ ಹೆಸರಿನಡಿ ಸುಶಾಂತ್ ಸಿಂಗ್ ರಾಜ್ಪುತ್ ಅವರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ಹಿಂಪಡೆಯಲಾಗಿದೆ. ಅರ್ಚಕರಿಗೆ ದಕ್ಷಿಣೆ ನೀಡುವುದರಿಂದ ಹಿಡಿದು, ಪೂಜಾ ಸಾಮಗ್ರಿಗಳನ್ನು ಖರೀದಿಸುವವರೆಗೆ ಎಲ್ಲ ವಹಿವಾಟುಗಳು ಬ್ಯಾಂಕ್ ಸ್ಟೇಟ್ಮೆಂಟ್ ನಲ್ಲಿವೆ. ಹಾಗಾದರೆ ಬನ್ನಿ, ಸುಶಾಂತ್ ಸಿಂಗ್ ರಾಜ್ಪುತ್ ಅವರ ಖಾತೆಯಿಂದ ಪೂಜಾ ನೆಪದಡಿ ಯಾವಾಗ-ಎಷ್ಟು ಹಣ ಹಿಂಪಡೆಯಲಾಗಿದೆ ಎಂಬುದನ್ನು ತಿಳಿಯೋಣ.
14 ಜುಲೈ 2019: 45000 ರೂ.
22 ಜುಲೈ 2019: 55,000 ಮತ್ತು 36,000 ರೂ.ಗಳು
2 ಆಗಸ್ಟ್ 2019: 86,000 ರೂ.
8 ಆಗಸ್ಟ್ 2019: 11,000 ರೂ.
15 ಆಗಸ್ಟ್ 2019: 60,000 ರೂ.
ಆದರೆ, ಈ ಹಣ ಹಿಂಪಡೆದ ಬಳಿಕ ಮುಂಬೈನಲ್ಲಿರುವ ಸುಶಾಂತ್ ಅವರ ಮನೆಯಲ್ಲಿ ಯಾವುದೇ ಪೂಜೆ ನೆರವೆರಿಸಲಾಗಿಲ್ಲ. ಅತ್ತ ಇನ್ನೊಂದೆಡೆ ಈ ಪ್ರಕರಣದ ತನಿಖೆ ನಡೆಸಲು ಮುಂಬೈಗೆ ತೆರಲಿಸೃವ ಬಿಹಾರ ಪೊಲೀಸರ ತಂಡಕ್ಕೆ, ಮುಂಬೈ ಪೊಲೀಸರು ಸರಿಯಾದ ಸಹಕಾರ ನೀಡುತ್ತಿಲ್ಲ ಎಂದೂ ಕೂಡ ಆರೋಪಿಸಲಾಗಿದೆ.