Bigg Boss OTT: ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ್ ಗೌಡ ‘ಕಿಚ್ಚ’ನಿಗೆ ಹೇಳಿದ್ದೇನು?

ಬೋಲ್ಡ್ ಫೋಟೋಸ್ ಮತ್ತು ಡ್ಯಾನ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ಲಕ್ಷಾಂತರ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾಳೆ.

Written by - Puttaraj K Alur | Last Updated : Aug 7, 2022, 11:24 AM IST
  • 2ನೇ ಸ್ಪರ್ಧಿಯಾಗಿ ‘ಬಿಗ್ ಬಾಸ್’ ಒಟಿಟಿ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ ಗೌಡ
  • ವೇದಿಕೆ ಮೇಲೆ ಬಂದಾಗ ಕಿಚ್ಚು ಸುದೀಪ್‍ಗೆ ಸೋನು ಶ್ರೀನಿವಾಸ್ ಗೌಡ ಹೇಳಿದ್ದೇನು..?
  • ಸೋಷಿಯಲ್ ಮೀಡಿಯಾ ಸ್ಟಾರ್ ಸೋನುಗೆ ಇದ್ದಾರೆ 777K ಫಾಲೋವರ್ಸ್
Bigg Boss OTT: ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ್ ಗೌಡ ‘ಕಿಚ್ಚ’ನಿಗೆ ಹೇಳಿದ್ದೇನು? title=
‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ ಗೌಡ

ಬೆಂಗಳೂರು: ‘ಬಿಗ್ ಬಾಸ್’ ಒಟಿಟಿ ಕಾರ್ಯಕ್ರಮ ಶುರುವಾಗಿದೆ. ಒಟ್ಟು 16 ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ. ಈ ಪೈಕಿ ಹೆಚ್ಚು ಸುದ್ದಿಯಲ್ಲಿರುವುದು ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ.

‘ಟಿಕ್ ಟಾಕ್’ ಮಾಡುತ್ತಲೇ ಪ್ರಸಿದ್ಧಿಯಾದ ಸೋನು ಶ್ರೀನಿವಾಸ್ ಗೌಡ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಸೋನು ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಅಪ್ಲಿಕೇಷನ್‍ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿ ಗಳಿಸಿದ್ದಾಳೆ. ತನ್ನ ಬೋಲ್ಡ್ ಫೋಟೋಸ್ ಮತ್ತು ಡ್ಯಾನ್ಸ್ ಮೂಲಕ ಈಕೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುವ ಮೂಲಕ ಲಕ್ಷಾಂತರ ಜನ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾಳೆ.

ಇದನ್ನೂ ಓದಿ: Sonu Srinivas Gouda : ಬಿಗ್‌ಬಾಸ್‌ OTT ಗೆ ಎಂಟ್ರಿ ನೀಡಿದ ಕಿರಿಕ್ ಬೆಡಗಿ ಸೋನು ಶ್ರೀನಿವಾಸ್ ಗೌಡ!

2ನೇ ಸ್ಪರ್ಧಿಯಾಗಿ ಸೋನು ಎಂಟ್ರಿ ಹೇಗಿತ್ತು..?

‘ಬಿಗ್‌ ಬಾಸ್’ ಕನ್ನಡ ಒಟಿಟಿಯ ಮೊದಲ ಸ್ಪರ್ಧಿ ಆರ್ಯವರ್ಧನ್ ಗುರೂಜಿಯನ್ನು ನಟ ಕಿಚ್ಚ ಸುದೀಪ್ ಅವರ ಆತ್ಮೀಯವಾಗಿ ಸ್ವಾಗತಿಸಿದರು. 2ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸಗೌಡನನ್ನು ಸುದೀಪ್ ಅವರು ವೆಲ್‍ಕಮ್ ಮಾಡಿಕೊಂಡರು. ಜನರಿಗೆ ಕೈ ಮಾಡುತ್ತಲೇ ಸೋನು ಶ್ರೀನಿವಾಸಗೌಡ ವೇದಿಕೆ ಮೇಲೆ ಬಂದಾಗ ಕಿಚ್ಚ ಸುದೀಪ್ ಸ್ವಾಗತಿಸುತ್ತಾರೆ. ನಗು ನಗುತ್ತಾ ಬಂದ ಸೋನು ಕೈ ಕುಲುಕುತ್ತಾರೆ. ಸೋನು ವೇದಿಕೆಗೆ ಸ್ವಾಗತ ಎಂದು ಹೇಳಿದಾಗ ಥ್ಯಾಂಕ್ಯೂ ಸರ್ ಎಂದು ಹೇಳುತ್ತಾಳೆ.  ಓಕೆ… ಎಂದು ಕಿಚ್ಚ ಹೇಳಿದಾಗ ಸೋನು ನಗುತ್ತಾಳೆ. ‘ಬಿಗ್ ಬಾಸ್’ ಒಟಿಟಿ ವೇದಿಕೆ ಮೇಲೆ ನಿಂತಿದ್ದೀರಿ ಈಗ ಎಂದು ‘ಕಿಚ್ಚ’ ಹೇಳಿದಾಗ ಸೋನು ಹೌದು.. ಸರ್.. ಎಂದು ಹೇಳುತ್ತಾಳೆ. ಹೇಗೆ ಅನಿಸುತ್ತಿದೆ ನಿಮಗೆ ಈಗ ಎಂದು ಕೇಳುವ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಸೋನು, ‘ನಾನು ತುಂಬಾ EXCITED ಆಗಿದ್ದೀನಿ ಸರ್’ ಎಂದು ಹೇಳುತ್ತಾಳೆ.

‘ಫಸ್ಟ್ ಟೈಮ್ ನಿಮ್ಮನ್ನು ಲೈವ್‍ನಲ್ಲಿ ನೋಡುತ್ತಿದ್ದೇನೆ. ನನ್ನು ಖುಷಿಯನ್ನು Express ಮಾಡಲು ಆಗುತ್ತಿಲ್ಲ’ ಸರ್ ಎಂದು ಸೋನು ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ‘ನೀವು ಹೇಳಬೇಕು.. ಹೇಳಿಲಿಲ್ಲವೆಂದರೆ ನನಗೆ ಹೇಗೆ ಗೊತ್ತಾಗುತ್ತೆ.. ಏನೇನೋ ಹೇಳಿದ್ದೀರಾ..’ ಅಂತಾ ನಗೆ ಚಟಾಕಿ ಹಾರಿಸುತ್ತಾರೆ. ಇದಕ್ಕೆ ಸೋನು ವೇದಿಕೆಯ ಮೇಲೆಯೇ ಜೋರಾಗಿ ನಗುತ್ತಾರೆ. ಬಳಿಕ ‘ಬಿಗ್ ಬಾಸ್’ ಮನೆಗೆ ಬರಲು ಎಷ್ಟು ಸಿದ್ಧತ ಮಾಡಿಕೊಂಡು ಬಂದಿದ್ದೀರಿ ಎಂಬ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಸೋನು, ‘ನಾನು ಯಾವುದೇ ರೀತಿ ಸಿದ್ಧತೆಯನ್ನು ಮಾಡಿಕೊಳ್ಳುವುದಿಲ್ಲ. ಏನೇ ಇದ್ದರೂ On-the-spot ಮಾತಾಡ್ತೀನಿ’ ಅಂತಾ ಹೇಳುತ್ತಾಳೆ. ಅದು ನಮಗೆ ಗೊತ್ತು ಎಂದು ಸುದೀಪ್ ನಗೆ ಚಟಾಕಿ ಹಾರಿಸಿದಾಗ ಸೋನು ಜೋರಾಗಿ ನಗುತ್ತಾಳೆ. ಹೀಗೆ ಸೋನು ಶ್ರೀನಿವಾಸಗೌಡ ‘ಬಿಗ್ ಬಾಸ್’ ಮನೆಗೆ ಹೋಗುತ್ತಾಳೆ.

ಇದನ್ನೂ ಓದಿ: ಬಿಗ್‌ಬಾಸ್ ಒಟಿಟಿ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಎಂಟ್ರಿ!

ಇಂಟರ್ನೆಟ್‍ನಿಂದ ಜನಕ್ಕೆ ಕನೆಕ್ಟ್ ಆಗಿರೋ ಹುಡುಗಿ, ಕನೆಕ್ಟಿವಿಟಿ ಇಲ್ಲದಿರುವ ಬಿಗ್‌ಬಾಸ್‌ ಮನೆಯಲ್ಲಿ ಹೇಗಿರುತ್ತಾಳೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಸದ್ಯ ಸೋನು ಶ್ರೀನಿವಾಸಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಇನ್ನುಳಿದ ಸ್ಪರ್ಧಿಗಳ ಜೊತೆಗೆ ಕಾಲ ಕಳೆಯುತ್ತಿದ್ದಾಳೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News