Badam Milk - ಬಾದಾಮ್ ಮಿಲ್ಕ್ ಸೇವನೆಯ 5 ಜಬರ್ದಸ್ತ್ ಲಾಭಗಳು ಇಲ್ಲಿವೆ

Health Benefits Of Badam Milk -ಬಾದಾಮ್ (Almond) ಅನ್ನು ಹೆಚ್ಚಾಗಿ ನೆನೆಸಿದ ನಂತರ ಹಾಲಿನಲ್ಲಿ (Almond Milk) ಕುದಿಸಿ ಕುಡಿಯುತ್ತಾರೆ, ಆದರೆ ಬಾದಾಮಿ ಪುಡಿಯನ್ನು ಮಾಡಿ ಅದನ್ನು ಹಾಲಿನಲ್ಲಿ ಚೆನ್ನಾಗಿ ಕುದಿಸಿದರೆ ಬಾದಾಮಿ ಹಾಲು ಸಿದ್ಧವಾಗಿದೆ.   

Written by - Nitin Tabib | Last Updated : Mar 1, 2022, 03:01 PM IST
  • ಬಾದಾಮಿ ಹಾಲನ್ನು ಏಕೆ ಸೇವಿಸಬೇಕು?
  • ಇದು ಆರೋಗ್ಯಕ್ಕೆ 5 ಅದ್ಭುತ ಪ್ರಯೋಜನಗಳನ್ನು ಹೊಂದಿದೆ
  • ಹೃದಯ ಮತ್ತು ಕಣ್ಣುಗಳ ಆರೋಗ್ಯಕ್ಕೆ ಉತ್ತಮ
Badam Milk - ಬಾದಾಮ್ ಮಿಲ್ಕ್ ಸೇವನೆಯ 5 ಜಬರ್ದಸ್ತ್ ಲಾಭಗಳು ಇಲ್ಲಿವೆ title=
Almond Milk Health Benefits

ನವದೆಹಲಿ: Almond Milk Health Benefits - ಇತ್ತೀಚಿನ ದಿನಗಳಲ್ಲಿ 'ಬದಾಮ್-ಬಾದಮ್, ಕಚ್ಚಾ  ಬಾದಮ್' ಎಂಬ ಹಾಡು ಭಾರಿ ಟ್ರೆಂಡ್ ನಲ್ಲಿದೆ. ಈ ಹಾಡು ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ ಮತ್ತು ಅದರ ಗಾಯಕ ಭುವನ್ ಬಡ್ಯಾಕರ್ ಕೂಡ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇಂದು ನಾವು ನಿಮಗೆ ಬಾದಾಮ್ ಹಾಲಿನ ಪ್ರಯೋಜನಗಳನ್ನು ಹಂಚಿಕೊಳ್ಳುತ್ತಿದ್ದೇವೆ, ಹಾಡುವುದರಿಂದ ಅಲ್ಲ. ಇದನ್ನು ಕುಡಿಯುವುದು ಆರೋಗ್ಯಕ್ಕೆ ಒಳಿತುಂಟಾಗುತ್ತದೆ. 

ಬಾದಾಮಿ ಹಾಲಿನ 5 ಪ್ರಯೋಜನಗಳು (Badam Milk Health Benefits)
1. ರೋಗನಿರೋಧಕ(Immunity) ಶಕ್ತಿಯನ್ನು ಹೆಚ್ಚಿಸುತ್ತದೆ

ಬಾದಾಮಿ ಹಾಲು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಅಂದರೆ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಶಕ್ತಿ ಹೆಚ್ಚಾಗುತ್ತದೆ. ಕರೋನಾ ವೈರಸ್ ಯುಗದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುರಿತು ಸಲಹೆ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಾನೀಯವು ತುಂಬಾ ಪ್ರಯೋಜನಕಾರಿಯಾಗಿದೆ.

2. ಕಣ್ಣುಗಳ (Eyes) ಆರೋಗ್ಯಕ್ಕೆ ಉತ್ತಮ 
ಬಾದಾಮಿಯಲ್ಲಿರುವ ರೈಬೋಫ್ಲಾವಿನ್ ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ ಬೆರೆತಾಗ ಅದು ಕಣ್ಣುಗಳಿಗೆ ಪ್ರಯೋಜನಕಾರಿಯಾಗುತ್ತದೆ. ಬಾದಾಮಿ ಹಾಲು ಕುಡಿಯುವುದರಿಂದ ಕಣ್ಣಿನ ಪೊರೆ ಬರುವ ಅಪಾಯ ಕಡಿಮೆಯಾಗುತ್ತದೆ.

3. ಹೃದ್ರೋಗದಿಂದ ರಕ್ಷಣೆ ನೀಡುತ್ತದೆ (Heart Disease)
ಬಾದಾಮಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದೆ, ಇದನ್ನು ವಿಜ್ಞಾನದ ಭಾಷೆಯಲ್ಲಿ ಎಚ್‌ಡಿಎಲ್ ಎಂದು ಕರೆಯಲಾಗುತ್ತದೆ, ಜೊತೆಗೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಲಿನಲ್ಲಿರುವ ವಿಟಮಿನ್ ಡಿ ಮತ್ತು ಬಾದಾಮಿ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ಇದನ್ನೂ ಓದಿ-Hair Fall Treatment: ಕೂದಲು ಎಂದಿಗೂ ಉದುರಬಾರದು ಎಂದರೆ ಹೀಗೆ ಮಾಡಿ

4. ಮೆದುಳಿಗೆ ಒಳ್ಳೆಯದು (Brain Health)
ಟ್ರಿಪ್ಟೊಫಾನ್ ಬಾದಾಮಿಯಲ್ಲಿ ಕಂಡುಬರುತ್ತದೆ, ಇದು ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ರಾತ್ರಿ ಬಾದಾಮಿ ಹಾಲು ಕುಡಿದರೆ ನಿದ್ರಾಹೀನತೆಯ ಸಮಸ್ಯೆ ದೂರಾಗುತ್ತದೆ. ಉತ್ತಮ ನಿದ್ರೆ ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Benefits of Walk : ಊಟದ ನಂತರ ಏಕೆ ಮಾಡಬೇಕು ವಾಕಿಂಗ್? ತಜ್ಞರು ಹೇಳಿದ್ದಾರೆ ನೋಡಿ

5. ಮೂಳೆಗಳ ಆರೋಗ್ಯಕ್ಕೆ ಉತ್ತಮ (Bone Health)
ಮೂಳೆಗಳನ್ನು ಬಲವಾಗಿಡಲು ನೀವು ಬಯಸಿದರೆ, ನಿಮಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅತ್ಯಗತ್ಯ. ಮೂಳೆಯ ಆರೋಗ್ಯಕ್ಕೆ ಬಹಳ ಮುಖ್ಯವಾದ ಬಾದಾಮಿ ಮತ್ತು ಹಾಲಿನ ಮಿಶ್ರಣದಲ್ಲಿ ಈ ಎರಡೂ ಪೋಷಕಾಂಶಗಳು ಕಂಡುಬರುತ್ತವೆ.

ಇದನ್ನೂ ಓದಿ-High Cholesterol: ಯುವಕರ ಕಣ್ಣುಗಳಲ್ಲಿ ಹಳದಿ ಕಲೆಗಳು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣಗಳಾಗಿರಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News