Hair Fall Treatment: ಕೂದಲು ಎಂದಿಗೂ ಉದುರಬಾರದು ಎಂದರೆ ಹೀಗೆ ಮಾಡಿ

ಕೂದಲು ಉದುರುವಿಕೆಗೆ ಚಿಕಿತ್ಸೆ: ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆಂದು ತಿಳಿದುಕೊಳ್ಳಿರಿ.

Written by - Puttaraj K Alur | Last Updated : Feb 28, 2022, 08:11 PM IST
  • ಕೂದಲು ಉದುರಲು ಪ್ರಮುಖ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿರಿ
  • ದಿನನಿತ್ಯದ ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಮಿತಿಗೊಳಿಸುವುದು ಉತ್ತಮ
  • ಸೋಡಿಯಂ ಹೆಚ್ಚಳದಿಂದ ನಿಮ್ಮ ಕೂದಲು ದುರ್ಬಲಗೊಂಡು ಉದುರುತ್ತದೆ
Hair Fall Treatment: ಕೂದಲು ಎಂದಿಗೂ ಉದುರಬಾರದು ಎಂದರೆ ಹೀಗೆ ಮಾಡಿ title=
ಕೂದಲು ಉದುರಲು ಪ್ರಮುಖ ಕಾರಣವೇನು?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿಯಿಂದ ಕೂದಲು ಉದುರುವಿಕೆ(Hair Fall Problem) ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆ ನಿವಾರಿಸಲು ಅನೇಕ ಜನರು ಇನ್ನಿಲ್ಲದ ಸರ್ಕಸ್ ಮಾಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ.

ಈ ಮೊದಲು 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮಾತ್ರ ಕೂದಲು ಉದುರುವಿಕೆ ಸಮಸ್ಯೆ(Hair Fall) ಇತ್ತು. ಆದರೆ ಈಗ ಸಣ್ಣ ವಯಸ್ಸಿನವರೇ ಈ ಸಮಸ್ಯೆಯಿಂದ ಮುಜುಗರ ಅನುಭವಿಸುವಂತಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಪುರುಷರು ಮತ್ತು ಮಹಿಳೆಯರಲ್ಲಿ ಕೂದಲು ಉದುರುವಿಕೆ ಪ್ರಕರಣಗಳು ಕಂಡುಬರುತ್ತಿದೆ. ಈ ಸಮಸ್ಯೆಗೆ ದೊಡ್ಡ ಕಾರಣವನ್ನು ವೈದ್ಯರು ಈಗ ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: High Cholesterol: ಯುವಕರ ಕಣ್ಣುಗಳಲ್ಲಿ ಹಳದಿ ಕಲೆಗಳು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣಗಳಾಗಿರಬಹುದು

ಕೂದಲು ಉದುರಲು ಪ್ರಮುಖ ಕಾರಣವೇನು?

ಕೂದಲು ಉದುರಲು ಪ್ರಮುಖ ಕಾರಣವೇನು(Hair Fall Treatment) ಅನ್ನೋ ಪ್ರಶ್ನೆ ಇಂದು ಬಹುತೇಕರನ್ನು ಕಾಡುತ್ತಿದೆ. ಈ ಒಂದು ಕಾರಣಕ್ಕೆ ಪರಿಹಾರ ಕಂಡುಕೊಂಡರೆ ಕೂದಲು ಉದುರುವಿಕೆ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಬಹುದು ಎನ್ನುತ್ತಾರೆ ವೈದ್ಯರು. ಕೂದಲು ಉದುರುವಿಕೆಗೆ ದೊಡ್ಡ ಕಾರಣ ಏನು ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.   

ವೈದ್ಯರ ಪ್ರಕಾರ, ದೇಹದ ಸ್ನಾಯುಗಳು ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ದೇಹದಲ್ಲಿ ಉಪ್ಪನ್ನು ಹೊಂದಿರುವುದು ಅವಶ್ಯಕ. ಆದರೆ ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ, ರಕ್ತದೊತ್ತಡ, ಹೃದಯಾಘಾತ(Heart Attack) ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಹೆಚ್ಚು ಉಪ್ಪು ತಿನ್ನುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: Benefits of Walk : ಊಟದ ನಂತರ ಏಕೆ ಮಾಡಬೇಕು ವಾಕಿಂಗ್? ತಜ್ಞರು ಹೇಳಿದ್ದಾರೆ ನೋಡಿ

ಉಪ್ಪಿನ ಬಳಕೆಯನ್ನು ಮಿತಿಗೊಳಿಸಿ

ವಯಸ್ಕ ವ್ಯಕ್ತಿಯು ದಿನಕ್ಕೆ 6 ಗ್ರಾಂಗಿಂತ ಹೆಚ್ಚು ಉಪ್ಪ(Salt)ನ್ನು ಸೇವಿಸಬಾರದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಇದು ಸರಿಸುಮಾರು ಒಂದು ಟೀ ಚಮಚಕ್ಕೆ ಸಮಾನವಾಗಿರುತ್ತದೆ. ಈ ಪ್ರಮಾಣದ ಉಪ್ಪಿನಿಂದ ದೇಹವು 2.4 ಗ್ರಾಂ ಸೋಡಿಯಂ ಅನ್ನು ಪಡೆಯುತ್ತದೆ. ಆದ್ದರಿಂದ ನೀವು ದಿನದಲ್ಲಿ ಏನನ್ನಾದರೂ ತಿಂದಾಗ ಅದರಲ್ಲಿ ಉಪ್ಪಿನ ಪ್ರಮಾಣವು ಕಡಿಮೆಯಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು.

ಇಂದು ನಾವು ಸೇವಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪು ಇರುತ್ತದೆ. ಆದರೆ ಅದರ ಪ್ರಮಾಣವು ಕುರುಕಲು, ಚಿಪ್ಸ್, ಸಾಲ್ಟ್ ಬಿಸ್ಕಿಟ್, ಪ್ಯಾಕೇಜ್ ಮಾಡಿದ ಆಹಾರಗಳು, ಬ್ರೆಡ್‌ಗಳು, ಪಿಜ್ಜಾ, ಸ್ಯಾಂಡ್‌ವಿಚ್‌ಗಳು ಮತ್ತು ಸೂಪ್‌ಗಳಲ್ಲಿ ಹೆಚ್ಚು ಕಂಡುಬರುತ್ತದೆ. ಹೀಗಾಗಿ ನೀವು ಸಾಧ‍್ಯವಾದಷ್ಟು ಇಂತಹ ಆಹಾರಗಳಿಂದ ದೂರವಿರುವುದು ಉತ್ತಮ. ಇದರಿಂದ ಕೂದಲು ಉದುರುವ ಸಮಸ್ಯೆಯಿಂದ ಸಾಕಷ್ಟು ಪರಿಹಾರ ಸಿಗುತ್ತದೆ.

ಸೋಡಿಯಂ ಹೆಚ್ಚಳದಿಂದ ಕೂದಲು ದುರ್ಬಲಗೊಳ್ಳುತ್ತದೆ

ಆಹಾರದಲ್ಲಿ ಹೆಚ್ಚು ಉಪ್ಪು ಎಂದರೆ ಹೆಚ್ಚು ಸೋಡಿಯಂ(Sodium) ಎಂದು ವೈದ್ಯರು ಹೇಳುತ್ತಾರೆ. ಹೆಚ್ಚಿನ ಪ್ರಮಾಣದ ಸೋಡಿಯಂನಿಂದ ಕೂದಲು ನಿರ್ಜೀವ & ದುರ್ಬಲಗೊಳ್ಳುತ್ತದೆ. ಬಳಿಕ ಇದು ಅದರ ಪತನಕ್ಕೂ ಕಾರಣವಾಗುತ್ತದೆ. ಆದರೆ ಈ ಉಪ್ಪು ತುಂಬಾ ಕಡಿಮೆ ಕೂಡ ಇರಬಾರದು, ಇದರಿಂದಾಗಿ ದೇಹದಲ್ಲಿ ಅಯೋಡಿನ್ ಕೊರತೆಯುಂಟಾಗುತ್ತದೆ. ದೇಹದಲ್ಲಿ ಉಪ್ಪು ಕಡಿಮೆಯಾಗುವುದರಿಂದ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ.

ನಿಮ್ಮ ಕೂದಲನ್ನು ಬಲಪಡಿಸಲು ಸಮತೋಲಿತ ಪ್ರಮಾಣದ ಉಪ್ಪನ್ನು ಬಳಸಬೇಕು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಇದರೊಂದಿಗೆ ನಿಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳ ಬಗ್ಗೆಯೂ ಸಹ ನೀವು ಕಾಳಜಿ ವಹಿಸಬೇಕು. ಕಬ್ಬಿಣ ಮತ್ತು ವಿಟಮಿನ್ ಬಿ5 ಕೂದಲು ತೆಳುವಾಗುವುದನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ನೆತ್ತಿಯನ್ನು ಫಲವತ್ತಾಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News