Burps causes and remedies: ಹುಳಿ ತೇಗು ಬರುವುದಕ್ಕೆ ಕಾರಣ ಮತ್ತು ಅದಕ್ಕೆ ಪರಿಹಾರ ತಿಳಿದಿದೆಯಾ?

ಒಬ್ಬ ವ್ಯಕ್ತಿಯು ಕಾರ್ಬೊನೇಟೆಡ್ ಪಾನೀಯಗಳು, ಬಿಯರ್ , ಕೆಫೀನ್ ಅಥವಾ ಫೈಬರ್, ಸ್ಟಾರ್ಚ್ ಅಥವಾ ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರವನ್ನು ತೆಗೆದುಕೊಂಡರೆ ಇದು ಕೂಡ ಹುಳಿ ತೇಗಿಗೆ ಕಾರಣವಾಗುತ್ತದೆ.

Written by - Ranjitha R K | Last Updated : Mar 31, 2021, 01:21 PM IST
  • ಆಹಾರ ಮತ್ತು ಪಾನೀಯದಿಂದಾಗಿ ಹುಳಿ ತೇಗು ಬರಬಹುದು
  • ಆಗಾಗ ತಿನ್ನುವುದು ಅಥವಾ ಧೂಮಪಾನ ಮಾಡುವುದರಿಂದಲೂ ಹುಳಿ ತೇಗು ಬರುತ್ತದೆ
  • ಹಿಂಗು, ಮೆಂತೆ, ಸೋಂಪು ಮತ್ತು ಏಲಕ್ಕಿ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಬಹುದು
Burps causes and remedies: ಹುಳಿ ತೇಗು ಬರುವುದಕ್ಕೆ ಕಾರಣ ಮತ್ತು ಅದಕ್ಕೆ ಪರಿಹಾರ ತಿಳಿದಿದೆಯಾ?  title=
ಆಹಾರ ಮತ್ತು ಪಾನೀಯದಿಂದಾಗಿ ಹುಳಿ ತೇಗು ಬರಬಹುದು (file photo)

ನವದೆಹಲಿ : ಏನಾದರು ತಿಂದು ಹೊಟ್ಟೆ ತುಂಬಿದ ನಂತರ ತೇಗು ಬರುವುದು ಸಾಮಾನ್ಯ. ಏನನ್ನಾದರೂ ತಿನ್ನುವಾಗ ಅಥವಾ ಕುಡಿಯುವಾಗ, ಆಹಾರದ (Food) ಜೊತೆಗೆ,  ದೇಹದೊಳಗೆ ಗಾಳಿಯನ್ನು ಕೂಡಾ ತೆಗೆದುಕೊಳ್ಳುತ್ತೇವೆ. ಈ ಗಾಳಿಯನ್ನು ದೇಹದಿಂದ ಹೊರಹಾಕುವ  ಮಾರ್ಗವೆಂದರೆ ತೇಗು. ಹೀಗೆ ತೇಗು ಬರುವಾಗ ಸೇವಿಸಿದ ಆಹಾರ ಕೂಡಾ ಗಂಟಲಿಗೆ ಬರುತ್ತದೆ. ಇದರೊಂದಿಗೆ ಬಾಯಿಯಲ್ಲಿ ಹುಳಿ ನೀರು,   ಗಂಟಲು, ಹೊಟ್ಟೆ ಮತ್ತು ಎದೆಯಲ್ಲಿ ತೀವ್ರವಾದ ಉರಿ ಕಂಡು ಬರುತ್ತದೆ. ಇದನ್ನು ಹುಳಿ  ತೇಗು ಅಥವ ಆಸಿಡ್ ಬರ್ಪಿಂಗ್ (Acidic Burping) ಎಂದು ಕರೆಯುತ್ತಾರೆ. 

ಈ ಕಾರಣಗಳಿಂದಾಗಿ ಬರುತ್ತದೆ ಹುಳಿ ತೇಗು : 
1. ಆಸಿಡ್ ರಿಫ್ಲೆಕ್ಸ್ :  ಆಸಿಡ್ ರಿಫ್ಲೆಕ್ಸ್  (Acid Reflux) ಸಮಸ್ಯೆ ಇರುವ ಜನರು ಊಟ ಸಮಯದಲ್ಲಿ ದೇಹದೊಳಗೆ ಸಾಕಷ್ಟು ಗಾಳಿಯನ್ನು ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಮತ್ತೆ ಮತ್ತೆ ತೇಗು ಬರುತ್ತಿರುತ್ತದೆ.  

ಇದನ್ನೂ ಓದಿ : ಇಷ್ಟ ಪಟ್ಟು ಅಮ್ಲೆಟ್ ಚಪ್ಪರಿಸುವ ಮೊದಲು ಈ 10 ವಿಷಯ ತಿಳಿದುಕೊಳ್ಳಿ..!

2. ಡಯಟ್- ಒಬ್ಬ ವ್ಯಕ್ತಿಯು ಕಾರ್ಬೊನೇಟೆಡ್ ಪಾನೀಯಗಳು, ಬಿಯರ್ (Beer), ಕೆಫೀನ್ ಅಥವಾ ಫೈಬರ್, ಸ್ಟಾರ್ಚ್ ಅಥವಾ ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರವನ್ನು (Food) ತೆಗೆದುಕೊಂಡರೆ ಇದು ಕೂಡ ಹುಳಿ ತೇಗಿಗೆ ಕಾರಣವಾಗುತ್ತದೆ. ಬೀನ್ಸ್, ಬಟಾಣಿ, ಈರುಳ್ಳಿ (Onion), ಅಣಬೆಗಳು, ಎಲೆಕೋಸು, ಬ್ರೋಕ್ಲಿ, ಹೂಕೋಸು, ಬಾಳೆಹಣ್ಣು (Banana) ಮತ್ತು ಧಾನ್ಯಗಳಂತಹ ವಸ್ತುಗಳು ಸಹ ಹುಳಿ ತೇಗಿಗೆ ಕಾರಣವಾಗಬಹುದು.

3. ದೈನಂದಿನ ಅಭ್ಯಾಸಗಳು - ಧೂಮಪಾನ (Smoking) , ಚೂಯಿಂಗ್ ಗಮ್ ಜಗಿಯುವುದು, ಬೇಗ ಬೇಗನೆ ತಿನ್ನುವುದು,  ಊಟ ಮಾಡುವಾಗ ಮಾತನಾಡುವುದು ಅಥವಾ ನೀರು (Water) ಅಥವಾ ಕೋಲ್ಡ್ ಡ್ರಿಂಕ್ ಕುಡಿಯಲು ಸ್ಟ್ರಾ  ಬಳಸುವುದು ಈ ಎಲ್ಲ ಅಭ್ಯಾಸಗಳು ಕೂಡಾ ಹುಳಿ ತೇಗು ಬರಲು ಕಾರಣವಾಗುತ್ತದೆ.  

4. ರೋಗಗಳು- ಉದರದ ಕಾಯಿಲೆ, ಮಲಬದ್ಧತೆ (Constipation), ಜಠರದುರಿತ, ಗ್ಯಾಸ್ಟ್ರೊಪರೆಸಿಸ್, ಅಜೀರ್ಣ, ಇರಿಟೇಬಲ್ ಬೌಲ್ ಸಿಂಡ್ರೋಮ್,  ಲ್ಯಾಕ್ಟೋಸ್ ಇನ್ ಟೋಲರೆನ್ಸ್  ಸಮಸ್ಯೆಗಳಿದ್ದಾಗಲೂ ಆಗಾಗ ತೇಗು ಅಥವಾ ಹುಳಿ ತೇಗು ಬರುತ್ತಿರುತ್ತದೆ. 

ಇದನ್ನೂ ಓದಿ :  Back Pain Remedies: ಹಳೆ ಬೆನ್ನುನೋವಿನಿಂದ ಬಳಲುತ್ತಿರುವಿರಾ? ಈ ಉಪಾಯಗಳನ್ನು ಅನುಸರಿಸಿ ನೋಡಿ

ಹುಳಿ ತೇಗಿಗೆ ಇರುವ ಪರಿಹಾರಗಳು ಇವು : 
-ಹುಳಿ ತೇಗು ಅಥವ ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸಲು ಹಿಂಗನ್ನು(Asafoetida) ಬಳಸಬಹುದು. ಅಡುಗೆಯಲ್ಲಿ ಹಿಂಗನ್ನು ಬಳಸುವುದರಿಂದ ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಚಿಟಿಕೆ ಹಿಂಗನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ಸಮಸ್ಯೆ ನಿವಾರಣೆಯಾಗುತ್ತದೆ. 
- ಸೋಂಪು ಮತ್ತು ಏಲಕ್ಕಿಯನ್ನು (Cardamom) ತಿನ್ನುವುದರಿಂದ ಕೂಡಾ ಹುಳಿ ತೇಗು ಸಮಸ್ಯೆ ನಿವಾರಣೆಯಾಗುತ್ತದೆ. ಏಲಕ್ಕಿ ಮತ್ತು  ಸೋಂಪು  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಇವೆರಡನ್ನೂ ತಿನ್ನುವುದರಿಂದ ಯಾವುದೇ  ಅಡ್ಡಪರಿಣಾಮಗಳಾಗುವುದಿಲ್ಲ (Side effects). 
- ಇನ್ನೊಂದು ಪರಿಹಾರವೆಂದರೆ ಮೆಂತೆ. ಮೆಂತೆಯನ್ನು (fenugreek) ರಾತ್ರಿಯಿಡೀ ನೀರಿನಲ್ಲಿ ನೆನೆಸಬೇಕು. ಮೆಂತೆ ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.  ಹೀಗೆ ಮಾಡುವುದರಿಂದ ಹುಳಿ ತೇಗಿನ ಸಮಸ್ಯೆ ನಿವಾರಣೆಯಾಗುತ್ತದೆ. 

ಇದನ್ನೂ ಓದಿ :  Health Benefits Of Green Cardamom: ಹಸಿರು ಏಲಕ್ಕಿ ಸೇವನೆಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News