Health Benefits Of Green Cardamom: ಹಸಿರು ಏಲಕ್ಕಿ ಸೇವನೆಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

Helath Tips - ಹಸಿರು ಏಲಕ್ಕಿಯನ್ನು ಭಾರತೀಯ ಅಡಿಗೆಮನೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಮಸಾಲೆ, ಚಹಾ, ಸಿಹಿ ತಿಂಡಿಗಳಲ್ಲಿ, ಸುಗಂಧ ವರ್ಧಕಗಳಲ್ಲಿ  ಮತ್ತು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ.

Written by - Nitin Tabib | Last Updated : Mar 28, 2021, 06:39 PM IST
  • ಹಸಿರು ಯಾಲಕ್ಕಿ ಹಲವು ಆರೋಗ್ಯಕರ ಲಾಭಗಳನ್ನು ಹೊಂದಿದೆ.
  • ಅಸಿಡಿಟಿ ಸಮಸ್ಯೆ ನಿವಾರಿಸುತ್ತದೆ.
  • ಜೀರ್ಣಕ್ರಿಯೆ ಉತ್ತಮಗೊಳಿಸಲು ಸಹಕಾರಿಯಾಗಿದೆ.
Health Benefits Of Green Cardamom: ಹಸಿರು ಏಲಕ್ಕಿ ಸೇವನೆಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ? title=
Health Benefits Of Cardamom (File Photo)

ನವದೆಹಲಿ:  Green Cardmom - ಹಸಿರು ಏಲಕ್ಕಿಯನ್ನು ಭಾರತೀಯ ಅಡಿಗೆಮನೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಮಸಾಲೆ, ಚಹಾ, ಸಿಹಿ ತಿಂಡಿಗಳಲ್ಲಿ, ಸುಗಂಧ ವರ್ಧಕಗಳಲ್ಲಿ  ಮತ್ತು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಇದೊಂದು ಆಯುರ್ವೇದಿಕ್ ಔಷಧಿಯಾಗಿದ್ದು, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಅನೇಕ ಸಮಸ್ಯೆಗಳನ್ನು ನಿವಾರಿಸಲು ಇದು ಮನೆಮದ್ದು (Home Remedy). ನಿತ್ಯ ಇದರ ಸೇವನೆ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ.

ಶರೀರದಿಂದ ವಿಷಪದಾರ್ಥಗಳನ್ನು ಹೊರಹಾಕುತ್ತದೆ (Toxic Substances)
ಏಲಕ್ಕಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು (Toxic Substances In Body)ಸಹಾಯ ಮಾಡುತ್ತದೆ. ಏಲಕ್ಕಿ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

ಶೀತ, ಕಫಾ ನಿಯಂತ್ರಣಕ್ಕೆ ಲಾಭಕಾರಿ
ಏಲಕ್ಕಿ ಕಫ, ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ. ಏಲಕ್ಕಿ ಎಣ್ಣೆಯ ಕೆಲವು ಹನಿಗಳನ್ನು ಬಿಸಿ ನೀರಿನಲ್ಲಿ ಹಾಕಿ 15 ನಿಮಿಷಗಳ ಕಾಲ ಉಗಿ ತೆಗೆದುಕೊಳ್ಳಿ, ಇದು ಎದೆಯ ಬಿಗಿತ ಮತ್ತು ಉಸಿರಾಟದ ತೊಂದರೆಗಳನ್ನು ತೆಗೆದುಹಾಕುತ್ತದೆ. ಇದು ಕಫವನ್ನು ನಿವಾರಿಸುತ್ತದೆ.

ಇದನ್ನೂ ಓದಿ-Scientific Reason Behind Lip Kiss: ಚುಂಬನದ ಹಿಂದಿನ ಈ ವಿಜ್ಞಾನ ನಿಮಗೆ ತಿಳಿದಿದೆಯೇ?

ಅಜೀರ್ಣ ಸಮಸ್ಯೆ ಹಾಗೂ ಬಾಯಿಯ ದುರ್ವಾಸನೆ ನಿವಾರಿಸುತ್ತದೆ
ಏಲಕ್ಕಿ ಜೀರ್ಣಕ್ರಿಯೆಯನ್ನು ಸರಿಪಡಿಸಲು ಸಹಕರಿಸುತ್ತದೆ. ಇದೊಂದು ರೀತಿಯ ಮೌತ್ ಫ್ರೆಶ್ನರ್ ಕೂಡ ಹೌದು. ಇದು ಬಾಯಿಯ ವಾಸನೆಯನ್ನು ಕಡಿಮೆ ಮಾಡುತ್ತದೆ. ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೆ, ಆಹಾರವನ್ನು ಸೇವಿಸಿದ ನಂತರ ಒಂದು ಅಥವಾ ಎರಡು ಏಲಕ್ಕಿಯನ್ನು ಅಗಿಯಬೇಕು.

ಇದನ್ನೂ ಓದಿ-ವ್ಯಾಯಾಮವಿಲ್ಲದೆ Weight control ಮಾಡಬೇಕಾದರೆ ಡಯೆಟ್ ನಲ್ಲಿರಲಿ ಫೈಬರ್

ಅಸಿಡಿಟಿ ಸಮಸ್ಯೆಗೆ ಪರಿಣಾಮಕಾರಿ
ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯಿಂದ ತಲೆನೋವು ಸಹ ಉಂಟಾಗುತ್ತದೆ. ಆದ್ದರಿಂದ, ನಿಮಗೆ ಇಷ್ಟವಾದಲ್ಲಿ, ಏಲಕ್ಕಿ ತಿನ್ನಿರಿ. ನಿಮ್ಮ ಆಹಾರವನ್ನು ಸೇವಿಸಿದ ನಂತರ, ಏಲಕ್ಕಿಯನ್ನು ಬಾಯಿಯಲ್ಲಿ ಐದು ನಿಮಿಷಗಳ ಕಾಲ ಅಗಿಯಿರಿ. ಈ ಮೂಲಕ, ಜೀರ್ಣಕ್ರಿಯೆಯ ಪ್ರಕ್ರಿಯೆಯು ಸಹ ಸರಿಯಾಗಿದೆ.

ಇದನ್ನೂ ಓದಿ-Coronavirus Second Wave: ಪುನಃ ಗತಿ ಪಡೆದುಕೊಂಡ ಕೊರೊನಾ, ಈ ಐದು ವಿಧಾನ ಅನುಸರಿಸಿ ವೈರಸ್ ನಿಂದ ಪಾರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News