ಉದ್ದ ಮತ್ತು ದಪ್ಪವಾದ ಕೂದಲಿಗಾಗಿ ಈ ಹಾಲಿನ ಮಾಸ್ಕ್‌ ಬಳಸಿ..! ಕಡಿಮೆ ಖರ್ಚು, ಆರೋಗ್ಯಕ್ಕೂ ಒಳ್ಳೆಯದು

Coconut Milk benefits : ತೆಂಗಿನ ಹಾಲು ಹಲವಾರು ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ. ಇದು ವಿಟಮಿನ್ಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ತೆಂಗಿನ ಹಾಲು ಕೂದಲಿಗೆ ತೇವಾಂಶವನ್ನು ಸಹ ನೀಡುತ್ತದೆ.

Written by - Krishna N K | Last Updated : Mar 30, 2024, 06:50 PM IST
    • ತೆಂಗಿನ ಹಾಲು ಹಲವಾರು ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ.
    • ವಿಟಮಿನ್, ಖನಿಜಗಳು ಮತ್ತು ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ.
    • ಕೂದಲಿಗೆ ತೆಂಗಿನ ಹಾಲಿನ ಮಾಸ್ಕ್‌ ಮಾಡುವ ವಿಧಾನದ ಇಲ್ಲಿದೆ.
ಉದ್ದ ಮತ್ತು ದಪ್ಪವಾದ ಕೂದಲಿಗಾಗಿ ಈ ಹಾಲಿನ ಮಾಸ್ಕ್‌ ಬಳಸಿ..! ಕಡಿಮೆ ಖರ್ಚು, ಆರೋಗ್ಯಕ್ಕೂ ಒಳ್ಳೆಯದು title=
hair care

Coconut milk for Hair care : ತೆಂಗಿನ ಹಾಲು ವಿಟಮಿನ್, ಖನಿಜಗಳು ಮತ್ತು ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಇದು ಬುಡದಿಂದ ಕೂದಲನ್ನು ದೃಢ ಮತ್ತು ದಪ್ಪವಾಗಿಸುತ್ತದೆ. ಅಲ್ಲದೆ, ಕೂದಲಿನ ಉತ್ತಮ ಬೆಳವಣಿಗೆಗಾಗಿ ತೆಂಗಿನ ಹಾಲಿನ ಮಾಸ್ಕ್‌ ಅನ್ನು ಬಳಸಬಹುದು. ಬನ್ನಿ ತೆಂಗಿನ ಹಾಲಿನ ಮಾಸ್ಕ್‌ ಮಾಡುವ ವಿಧಾನದ ಕುರಿತು ತಿಳಿಯೋಣ..

ತೆಂಗಿನ ಹಾಲು ಮಾಡುವ ವಿಧಾನ : ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಒಡೆದು, ಚಿಪ್ಪಿನಿಂದ ಬೇರ್ಪಡಿಸಿ ಮತ್ತು ತೆಳುವಾದ ತುಂಡುಗಳಾಗಿ ಕತ್ತರಿಸಿ ಬ್ಲೆಂಡರ್ ಅಥವಾ ಮಿಕ್ಸರ್ನಲ್ಲಿ ಹಾಕಿ. ನಂತರ ಸಿದ್ದವಾದ ತೆಂಗಿನ ಪೆಸ್ಟ್‌ ಅನ್ನು ತೆಗೆದುಕೊಂಡು, ಹಾಲನ್ನು ಹತ್ತಿ ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಿ. 

ಇದನ್ನೂ ಓದಿ: ಈ ಹಣ್ಣುಗಳನ್ನು ತಿಂದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ..!

ಹೇರ್ ಮಾಸ್ಕ್‌ ತಯಾರಿಸಲು ಬೇಕಾದ ಪದಾರ್ಥಗಳು
ತೆಂಗಿನ ಹಾಲು-1/2 ಕಪ್
ಜೇನುತುಪ್ಪ-1 TBSP
ಆಲಿವ್ ಎಣ್ಣೆ-1 TBSP

ಇದನ್ನೂ ಓದಿ: ಬಾದಾಮಿಗಿಂತ ಹೆಚ್ಚು ಪ್ರಯೋಜನಕಾರಿ ಈ ಹಣ್ಣಿನ ಬೀಜ!! ಸರ್ವರೋಗಕ್ಕೂ ಮದ್ದು!

ಮಾಸ್ಕ್‌ ತಯಾರಿಸುವ ವಿಧಾನ : ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಚನ್ನಾಗಿ ಮಿಶ್ರಣಮಾಡಿ. ಕೂದಲಿನ ಬುಡಕ್ಕೆ ತಾಗುವಂತೆ ತೆಂಗಿನ ಹಾಲಿನ ಮಾಸ್ಕ್‌ ಅನ್ನು ಹಚ್ಚಿಕೊಂಡು ಮಸಾಜ್ ಮಾಡಿ. 45 ನಿಮಿಷಗಳ ನಂತರ, ನಿಮ್ಮ ತಲೆಯನ್ನು ಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿ ತೊಳೆಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News