ವೇಗವಾಗಿ ತೂಕವನ್ನು ಕಳೆದುಕೊಳ್ಳಬೇಕಾದರೆ ಪಪ್ಪಾಯವನ್ನು ಈ ರೀತಿ ತಿನ್ನಲು ಪ್ರಯತ್ನಿಸಿ !

ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಕೆಲವು ಸರಳ ಮತ್ತು ನೈಸರ್ಗಿಕ ಮಾರ್ಗಗಳಿವೆ. ಅಂತಹ ಒಂದು ಸರಳ ಮಾರ್ಗವನ್ನು ಈ  ಲೇಖನದಲ್ಲಿ  ಕಾಣಬಹುದು.

Written by - Ranjitha R K | Last Updated : Sep 20, 2023, 03:20 PM IST
  • ನಾವು ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತೇವೆ.
  • ಹೊಟ್ಟೆ ಕರಗಿಸಲು ಬಹಳ ಕಷ್ಟ ಪಡಬೇಕಾಗುತ್ತದೆ
  • ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸರಳ ಮತ್ತು ನೈಸರ್ಗಿಕ ಮಾರ್ಗ
ವೇಗವಾಗಿ ತೂಕವನ್ನು ಕಳೆದುಕೊಳ್ಳಬೇಕಾದರೆ ಪಪ್ಪಾಯವನ್ನು ಈ ರೀತಿ ತಿನ್ನಲು ಪ್ರಯತ್ನಿಸಿ ! title=

ಬೆಂಗಳೂರು :  ನಾವು ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತೇವೆ. ಅದರಲ್ಲೂ ಹೊಟ್ಟೆ ಕರಗಿಸಲು ಬಹಳ ಕಷ್ಟ ಪಡಬೇಕಾಗುತ್ತದೆ. ತೂಕ ಇಳಿಸಿಕೊಳ್ಳಲು ನಾವು ಮಾಡಬೇಕಾದ ಮುಖ್ಯ ಕೆಲಸ ಎಂದರೆ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರುವುದು.  ಯಾಕೆಂದರೆ ನಿಮ್ಮ ಆಹಾರಕ್ರಮವು ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ದೈನಂದಿನ ಜೀವನದಲ್ಲಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೂಕ ಹೆಚ್ಚಾಗುವುದರಿಂದ ಅನೇಕ ಜನರು ಅನೇಕ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.  

ಇತ್ತೀಚಿನ ದಿನಗಳಲ್ಲಿ ಕಳಪೆ ಆಹಾರ ಮತ್ತು ಜೀವನಶೈಲಿಯಿಂದಾಗಿ ತೂಕ ಹೆಚ್ಚಾಗುವುದು ಮತ್ತು ಬೊಜ್ಜಿನ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿದೆ. ದೇಹ ತೂಕ ಹೆಚ್ಚಾದಂತೆ ಹೊಟ್ಟೆಯ  ಭಾಗದ ಕೊಬ್ಬು ಕೂಡಾ ಹೆಚ್ಚಾಗುತ್ತದೆ. ಹೀಗಾದಾಗ ದೇಹದ ಆಕಾರವೇ ಬದಲಾಗುತ್ತದೆ. ಈ ಕಾರಣದಿಂದಾಗಿ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಕೆಲವು ಸರಳ ಮತ್ತು ನೈಸರ್ಗಿಕ ಮಾರ್ಗಗಳಿವೆ. ಅಂತಹ ಒಂದು ಸರಳ ಮಾರ್ಗವನ್ನು ಈ  ಲೇಖನದಲ್ಲಿ  ಕಾಣಬಹುದು.

ಇದನ್ನೂ ಓದಿ : ಈ ಕಾರಣಕ್ಕಾಗಿಯೇ ಮಧುಮೇಹ ರೋಗಿಗಳು ತಿನ್ನಲೇಬೇಕು ಪಾಲಕ್ ಸೊಪ್ಪು !

ತೂಕ ಇಳಿಸಲು ಸಹಾಯ ಮಾಡುತ್ತದೆ ಪಪ್ಪಾಯ : 
ತೂಕ ಇಳಿಸುವ ಪ್ರಯತ್ನದಲ್ಲಿ ಪಪ್ಪಾಯ ತುಂಬಾ ಉಪಯುಕ್ತವಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಪಪ್ಪಾಯದಲ್ಲಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುವ ಹಲವು ಪೋಷಕಾಂಶಗಳಿವೆ. ಇದರಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಇದ್ದು,  ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಈ ಕಾರಣಗಳಿಂದಾಗಿ, ಕೊಬ್ಬನ್ನು ಕಡಿಮೆ ಮಾಡುವಲ್ಲಿ ಮತ್ತು ತೂಕವನ್ನು ಕಡಿಮೆ ಮಾಡುವಲ್ಲಿ ಪಪ್ಪಾಯ ಒಂದು ಕೈ ಮೇಲೆ ಇರುತ್ತದೆ. ತೂಕ ಇಳಿಸಿಕೊಳ್ಳಲು ಈ ನಾಲ್ಕು ವಿಧಾನಗಳಲ್ಲಿ ಪಪ್ಪಾಯ ಸೇವಿಸಿ. 

ಪಪ್ಪಾಯ ಹಣ್ಣಿನ ಜ್ಯೂಸ್ ಮಾಡಿ ಕುಡಿಯಿರಿ : 
ತೂಕ ಇಳಿಸಿಕೊಳ್ಳಬೇಕಾದರೆ ಪಪ್ಪಾಯ ಜ್ಯೂಸ್ ಕುಡಿಯಬಹುದು. ಇದರಲ್ಲಿರುವ ಪೋಷಕಾಂಶಗಳು ದೇಹದ ಕೊಬ್ಬನ್ನು ಕಡಿಮೆ ಮಾಡಿ ಫಿಟ್ ನೆಸ್ ಸುಧಾರಿಸುತ್ತದೆ. ಪಪ್ಪಾಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ : ವೈರಲ್ ಸೋಂಕಗಳ ವಿರುದ್ಧದ ರಕ್ಷಣೆಗಾಗಿ ನಿಮ್ಮ ಆಹಾರದಲ್ಲಿರಲಿ ಈ ಮಸಾಲೆಗಳು

ಉಪಹಾರದಲ್ಲಿ ಪಪ್ಪಾಯ :
ತೂಕ ಇಳಿಸಿಕೊಳ್ಳಲು ಬೆಳಗಿನ ಉಪಾಹಾರದಲ್ಲಿ ಪಪ್ಪಾಯವನ್ನು  ಸೇರಿಸಬೇಕು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಪಪ್ಪಾಯವನ್ನು ತುಂಡುಗಳಾಗಿ ಕತ್ತರಿಸಿ ಅದಕ್ಕೆ ಬ್ಲಾಕ್ ಸಾಲ್ಟ್ ಮತ್ತು ಕರಿಮೆಣಸು ಸೇರಿಸಿ ಬೆಳಗಿನ ಉಪಾಹಾರಕ್ಕೆ ತಿನ್ನಬಹುದು. 

ಹಾಲು ಮತ್ತು ಪಪ್ಪಾಯ :
ಬೆಳಗಿನ ಉಪಾಹಾರದಲ್ಲಿ ಪಪ್ಪಾಯದ ಜೊತೆಗೆ ಹಾಲು ಸೇವಿಸುವುದು ಇನ್ನಷ್ಟು ಪ್ರಯೋಜನಕಾರಿ. ಮಿಕ್ಸಿಗೆ ಒಂದು ಲೋಟ ಹಾಲು ಮತ್ತು ಪಪ್ಪಾಯಿ ತುಂಡುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಕೆಲವು ಒಣ ಹಣ್ಣುಗಳು ಮತ್ತು ಬೀಜಗಳನ್ನು ಸಹ ಇದಕ್ಕೆ ಸೇರಿಸಬಹುದು. ಇದನ್ನು ಸೇವಿಸುವುದರಿಂದ ಬಹಳ ಹೊತ್ತಿನವರೆಗೆ ಹೊಟ್ಟೆ ಹಸಿಯುವುದಿಲ್ಲ. ಈ ಕಾರಣದಿಂದಾಗಿ, ತೂಕ ನಷ್ಟ ಪ್ರಯತ್ನಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ : Health Tips: 60ರಲ್ಲೂ ಮೆದುಳು ಕಂಪ್ಯೂಟರ್‌ನಂತೆ ಕೆಲಸ ಮಾಡಬೇಕಾದ್ರೆ ಈ 5 ಸೂಪರ್‌ಫುಡ್‌ ಸೇವಿಸಿ
 
ಪಪ್ಪಾಯ ಮತ್ತು ಮೊಸರು : 
ಪಪ್ಪಾಯವನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಒಂದು ಬೌಲ್ ಮೊಸರನ್ನು ಪಪ್ಪಾಯ ಮತ್ತು ಒಣ ಹಣ್ಣುಗಳೊಂದಿಗೆ ಬೆರೆಸಿ ತಿನ್ನಬಹುದು. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ ಮತ್ತು ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.

( ಸೂಚನೆ : ಪ್ರಿಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಸಾಕಷ್ಟು ಮಾಹಿತಿಯನ್ನು ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು. Zee ಮೀಡಿಯಾ ಈ ಮಾಹಿತಿಯನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News