Coriander water : ಪ್ರತಿದಿನ ಕೊತ್ತಂಬರಿ ನೀರು ಕುಡಿಯಿರಿ : ಇದರಿಂದ ಆರೋಗ್ಯಕ್ಕಿದೆ ಈ 6 ಪ್ರಯೋಜನಗಳು!

ಕೊತ್ತಂಬರಿ ಬೀಜ ಮತ್ತು ಸೊಪ್ಪು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯು ನಮ್ಮ ತ್ವಚೆಯ ಬಣ್ಣ ಹೆಚ್ಚಿಸುವುದಲ್ಲದೆ, ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಆ ನೀರನ್ನ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ನಮ್ಮ ದೇಹವನ್ನು ರೋಗಗಳಿಂದ ದೂರವಿಡುತ್ತದೆ. ಇಂದು ನಾವು ನಿಮಗೆ ಕೊತ್ತಂಬರಿ ನೀರಿನ ಪ್ರಯೋಜನಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.

Written by - Channabasava A Kashinakunti | Last Updated : Feb 17, 2022, 12:48 PM IST
  • ಆರೋಗ್ಯಕ್ಕೆ ಕುಡಿಯಿರಿ ಕೊತ್ತಂಬರಿ ನೀರು
  • ಇದರಿಂದ ಆರೋಗ್ಯಕ್ಕಿದೆ ಅನೇಕ ಪ್ರಯೋಜನಗಳು
  • ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ ಇದರ ಪರಿಣಾಮ
Coriander water : ಪ್ರತಿದಿನ ಕೊತ್ತಂಬರಿ ನೀರು ಕುಡಿಯಿರಿ : ಇದರಿಂದ ಆರೋಗ್ಯಕ್ಕಿದೆ ಈ 6 ಪ್ರಯೋಜನಗಳು! title=

ನವದೆಹಲಿ : ಕೊತ್ತಂಬರಿ ಬೀಜ ಮತ್ತು ಸೊಪ್ಪು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯು ನಮ್ಮ ತ್ವಚೆಯ ಬಣ್ಣ ಹೆಚ್ಚಿಸುವುದಲ್ಲದೆ, ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಆ ನೀರನ್ನ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ನಮ್ಮ ದೇಹವನ್ನು ರೋಗಗಳಿಂದ ದೂರವಿಡುತ್ತದೆ. ಇಂದು ನಾವು ನಿಮಗೆ ಕೊತ್ತಂಬರಿ ನೀರಿನ ಪ್ರಯೋಜನಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.

ಕೊತ್ತಂಬರಿ ನೀರಿನ 6 ಪ್ರಮುಖ ಪ್ರಯೋಜನಗಳು

1. ತೂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ

ತೂಕವನ್ನು ಕಳೆದುಕೊಳ್ಳಲು(Weight Loss), ನೀವು ಕೊತ್ತಂಬರಿ ನೀರನ್ನು ಕುಡಿಯಬೇಕು. ಇದಕ್ಕೆ ಕೊತ್ತಂಬರಿ ಸೊಪ್ಪನ್ನು ನೀರಿಗೆ ಹಾಕಿ ಕುದಿಸಿ. ನೀರು ಅರ್ಧ ಉಳಿದಿರುವಾಗ, ಅದನ್ನು ಫಿಲ್ಟರ್ ಮಾಡಿ. ಈ ನೀರನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ.

ಇದನ್ನೂ ಓದಿ : Tomato Benefits: ಟೊಮ್ಯಾಟೊ ತಿನ್ನುವುದರಿಂದ ಸಿಗುತ್ತೆ ಹಲವು ಪ್ರಯೋಜನ

2. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಕೊತ್ತಂಬರಿ ಸೊಪ್ಪಿನ ನೀರನ್ನು(Coriander Water) ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಈ ನೀರಿನಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವವರು ಇದನ್ನು ಸೇವಿಸಬೇಕು.

3. ಹೊಟ್ಟೆ ಕಾಯಿಲೆಗಳಿಗೆ ರಾಮಬಾಣ

ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವವರಿಗೆ ಕೊತ್ತಂಬರಿ ನೀರು ಪ್ರಯೋಜನಕಾರಿ. ಕೊತ್ತಂಬರಿ ನೀರು ಕುಡಿಯುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. ಅಸಿಡಿಟಿ ಸಮಸ್ಯೆ(Acidity) ಇರುವವರು ಕೊತ್ತಂಬರಿ ಸೊಪ್ಪಿನ ಜೊತೆಗೆ ಜೀರಿಗೆ, ಟೀ ಸೊಪ್ಪು, ಸಕ್ಕರೆ ಸೇರಿಸಿ ಬೇಯಿಸಬೇಕು. ಈ ನೀರನ್ನು ಕುಡಿಯುವುದರಿಂದ ಅಸಿಡಿಟಿಯಲ್ಲಿ ಪರಿಹಾರ ಸಿಗುತ್ತದೆ.

4. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ

ಕೊತ್ತಂಬರಿ ನೀರು ಮಧುಮೇಹಕ್ಕೆ(Diabetes) ಪರಿಹಾರ ನೀಡುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಇದರ ನೀರನ್ನು ಕುಡಿಯಬೇಕು. ಇದನ್ನು ಕುಡಿಯುವುದರಿಂದ, ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವು ಸರಿಯಾಗಿ ಉಳಿಯುತ್ತದೆ, ಇದರಿಂದಾಗಿ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

5. ಕಣ್ಣುಗಳನ್ನು ತಂಪ್ಪಾಗಿಡುತ್ತದೆ

ಕಣ್ಣು ಉರಿ ಅಥವಾ ಕಣ್ಣಿನಲ್ಲಿ ನೀರು ಬರುವ ಸಮಸ್ಯೆ(Eyes Problem) ಇರುವವರು ಕೊತ್ತಂಬರಿ ಸೊಪ್ಪನ್ನು ಅರೆದು ನೀರಿನಲ್ಲಿ ಕುದಿಸಿ. ಈ ನೀರನ್ನು ತಣ್ಣಗಾಗಿಸಿ ಮತ್ತು ದಪ್ಪ ಬಟ್ಟೆಯಿಂದ ಫಿಲ್ಟರ್ ಮಾಡಿ ಮತ್ತು ಎರಡು ಹನಿಗಳನ್ನು ಕಣ್ಣುಗಳಲ್ಲಿ ಹನಿ ಮಾಡಿ. ಇದರಿಂದ ಪರಿಹಾರ ಸಿಗಲಿದೆ.

ಇದನ್ನೂ ಓದಿ : Health Tips: ಕೆಮ್ಮು ಉಸಿರಾಟದ ಸಮಸ್ಯೆ ಇದ್ದರೆ ಎದುರಾಗಲಿದೆ ದೊಡ್ಡ ಗಂಡಾಂತರ..!

6. ಕೊತ್ತಂಬರಿ ಸೊಪ್ಪು ಪಿರಿಯಡ್ಸ್ ಗೆ ಔಷಧಿ

ಋತುಚಕ್ರಕ್ಕೆ(Periods) ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು. ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗದವರು ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಇರುವವರು ಕೊತ್ತಂಬರಿ ಸೊಪ್ಪಿನ ನೀರನ್ನು ಸಕ್ಕರೆ ಬೆರೆಸಿ ಕುಡಿಯುವುದರಿಂದ ಲಾಭವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News