ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರಕ್ಕಾಗಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ

Remedies To Get Relief From Insomnia: ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಾರದೇ ಇರುವ ಸ್ಥಿತಿಯನ್ನು ನಿದ್ರಾಹೀನತೆ ಎಂದು ಕರೆಯುತ್ತಾರೆ. ವಯಸ್ಸಾದವರಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ವಯಸ್ಕರಲ್ಲಿ, ಚಿಕ್ಕ ವಯಸ್ಸಿನವರಲ್ಲಿ ನಿದ್ರಾಹೀನತೆ ಸಮಸ್ಯೆಯೂ ಇತರೆ ರೋಗಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು.

Written by - Yashaswini V | Last Updated : Aug 1, 2023, 03:58 PM IST
  • ನಿದ್ರಾಹೀನತೆಯು ಶಕ್ತಿಯ ಮಟ್ಟವನ್ನು ಕುಂದಿಸುತ್ತದೆ.
  • ಮಾತ್ರವಲ್ಲ, ಇದು ಆರೋಗ್ಯ, ಕೆಲಸದ ಮೇಲಿನ ಕಾರ್ಯಕ್ಷಮತೆ, ಗುಣಮಟ್ಟದ ಜೀವನದ ಮೇಲೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
  • ನಿದ್ರಾಹೀನತೆ ಸಮಸ್ಯೆ ಕೆಲವರಲ್ಲಿ ಖಿನ್ನತೆಗೂ ಕಾರಣವಾಗುತ್ತದೆ.
ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರಕ್ಕಾಗಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ title=

Remedies To Get Relief From Insomnia: ನಿದ್ರಾಹೀನತೆ ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಆಹಾರದಷ್ಟೇ ನಿದ್ರೆಯೂ ಕೂಡ ಮುಖ್ಯ. ಆದರೆ, ನಮ್ಮಲ್ಲಿ ಕೆಲವರಿಗೆ ಸರಿಯಾಗಿ ನಿದ್ರೆಯೇ ಬರುವುದಿಲ್ಲ. ಇಲ್ಲವೇ ಬೇಗನೆ ಎಚ್ಚರಗೊಳ್ಳುವುದು, ರಾತ್ರಿ ವೇಳೆ ಒಮ್ಮೆ ಎಚ್ಚರವಾದರೆ ಎಷ್ಟೇ ಪ್ರಯತ್ನಿಸಿದರೂ ಕೂಡ ಮತ್ತೆ ನಿದ್ರೆ ಬರದೇ ಇರುವುದು. ಇಂತಹ ಎಲ್ಲಾ ಸ್ಥಿತಿಯನ್ನೂ ನಿದ್ರಾಹೀನತೆ ಸಮಸ್ಯೆ ಎನ್ನಲಾಗುತ್ತದೆ. 

ನಿದ್ರಾಹೀನತೆಗೆ ಕಾರಣಗಳೇನು? 
ಪ್ರತಿಯೊಬ್ಬರಿಗೂ ನಿದ್ರಾಹೀನತೆಗೆ ವಿಭಿನ್ನ ಕಾರಣಗಳಿರುತ್ತವೆ. ನಿದ್ರಾಹೀನತೆಯು ಏಕೆ ಉಂಟಾಗುತ್ತದೆ ಎಂಬುದಕ್ಕೆ ವೈದ್ಯರ ಬಳಿಯೂ ನಿಖರವಾದ ಕಾರಣಗಲಿಲ್ಲ. ಆದರೆ, ನಿಮ್ಮ ನಿತ್ಯ ಜೀವನದ ಒತ್ತಡ, ಆಯಾಸ, ಮನದಲ್ಲಿರುವ ಕೆಲವು ಹೇಳಿಕೊಳ್ಳಲಾಗದಂತಹ ಸಮಸ್ಯೆಗಳು ಹೀಗೆ ಹಲವು ಅಂಶಗಳು ಇದಕ್ಕೆ ಕಾರಣವಾಗಿರಬಹುದು. 

ನಿದ್ರಾಹೀನತೆಯಿಂದಾಗುವ ತೊಂದರೆಗಳು 
ನಿದ್ರಾಹೀನತೆಯು ಶಕ್ತಿಯ ಮಟ್ಟವನ್ನು ಕುಂದಿಸುತ್ತದೆ. ಮಾತ್ರವಲ್ಲ, ಇದು ಆರೋಗ್ಯ, ಕೆಲಸದ ಮೇಲಿನ ಕಾರ್ಯಕ್ಷಮತೆ, ಗುಣಮಟ್ಟದ ಜೀವನದ ಮೇಲೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಿದ್ರಾಹೀನತೆ ಸಮಸ್ಯೆ ಕೆಲವರಲ್ಲಿ ಖಿನ್ನತೆಗೂ ಕಾರಣವಾಗುತ್ತದೆ. 

ಇದನ್ನೂ ಓದಿ- ಪ್ಲಾಸ್ಟಿಕ್ ಬಾಟಲ್ ನೀರು ಸ್ಲೋಪಾಯ್ಸನ್‌ ಇದ್ದಂತೆ..ಬಳಸುವ ಮುನ್ನ ಎಚ್ಚರ ವಹಿಸಿ..!

ನೀವೂ ಸಹ ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ..! ಹಾಗಾದರೆ ಪ್ರತಿ ನಿತ್ಯ ರಾತ್ರಿ ಮಲಗುವ ಮೊದಲು ಕೆಲವು ಕೆಲಸಗಳನ್ನು ಮಾಡುವುದರಿಂದ ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಅವುಗಳೆಂದರೆ.... 

* ಹಾಲು / ಹಳದಿ ಹಾಲು:
ನಿದ್ರಾಹೀನತೆಯಿಂದ ಪರಿಹಾರ ಪಡೆಯಲು ನಿತ್ಯ ರಾತ್ರಿ ಮಲಗುವ ಮೊದಲು ಹಾಲು ಕುಡಿಯಿರಿ. ನಿಮಗೆ ದಣಿವು, ಆಯಾಸದಿಂದ ನಿದ್ರಾಹೀನತೆ ಸಮಸ್ಯೆ ಉಂಟಾಗಿದ್ದರೆ ಅರಿಶಿನದ ಹಾಲು ಹೆಚ್ಚು ಪ್ರಯೋಜನಕಾರಿ ಆಗಿದೆ. 

* ಈ ಆಹಾರಗಳನ್ನು ಸೇವಿಸಿ: 
ರಾತ್ರಿ ಮಲಗುವ ಮೊದಲು ಬಾಳೆಹಣ್ಣು, ಬಾದಾಮಿ, ಕುಂಬಳಖಾಯಿ ಬೀಜದಂತಹ   ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯಕರ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

* ಹಾಸಿಗೆಯನ್ನು ಶುಚಿಗೊಳಿಸಿ: 
ಕೆಲವೊಮ್ಮೆ ಹೊರಗಿನಿಂದ ಬಂದು ಕೈ-ಕಾಲು ತೊಳೆಯದೆ ಹಾಗೇ ಹಾಸಿಗೆ ಮೇಲೆ ಕೂರುವ ಅಭ್ಯಾಸ ನಮ್ಮಲ್ಲಿ ಕೆಲವರಿಗೆ ಇರಬಹುದು. ಇಲ್ಲವೇ, ಹಾಸಿಗೆ ಮೇಲೆಯೇ ಕುಳಿತು ಊಟ-ತಿಂಡಿ ಸವಿಯುವ ಅಭ್ಯಾಸವೂ ಕೆಲವರಲ್ಲಿ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅದನ್ನು ಶುಚಿಗೊಳಿಸದೆ ಅದರ ಮೇಲೇ ಹೋಗಿ ಮಲಗುವುದರಿಂದಲೂ ಸರಿಯಾಗಿ ನಿದ್ರೆ ಬರುವುದಿಲ್ಲ. ಇದನ್ನು ತಪ್ಪಿಸಲು ಮಲಗುವ ಮುಂಚೆ ಹಾಸಿಗೆಯನ್ನು ಚೆನ್ನಾಗಿ ಒದರಿ, ಸುಕ್ಕುಗಳಿಲ್ಲದಂತೆ ಬೆಡ್‌ಶೀಟ್‌ನ್ನು ಹಾಸಬೇಕು.

ಇದನ್ನೂ ಓದಿ- Weight Loss Tips: ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಗೊತ್ತೇ ?

* ಬಿಸಿ ನೀರಿನ ಸ್ನಾನ: 
ಮಲಗುವ ಎರಡು ಗಂಟೆಗಳ ಮೊದಲು  ಬಿಸಿ ನೀರಿನಿಂದ ಸ್ನಾನ ಮಾಡಿದರೆ ಇದು ನಿಮ್ಮ ದೇಹದ ಆಯಾಸವನ್ನು ಶಮನಗೊಳಿಸುತ್ತದೆ ಮತ್ತು ನಿಮ್ಮ ದೇಹವನ್ನು ತ್ವರಿತವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

* ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಗಳಿಂದ ದೂರವಿರಿ:  
ಮಲಗುವ ಸಮಯಕ್ಕೆ ಎರಡು ಗಂಟೆಗಳ ಮೊದಲು ಟಿವಿ ಮತ್ತು ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ಗಳ ಬಳಕೆಗಳನ್ನು ತಪ್ಪಿಸಿ. ಇದೂ ಸಹ ಶಾಂತಿಯುತ ಮತ್ತು ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.

* ಹಗಲಿನಲ್ಲಿ ಮಲಗಬೇಡಿ: 
ನಮ್ಮಲ್ಲಿ ಕೆಲವರು ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದಾಗಿ ಅವರಿಗೆ ರಾತ್ರಿ ವೇಳೆ ನಿದ್ರೆ ಬರುವುದಿಲ್ಲ. ಇದನ್ನು ತಪ್ಪಿಸಲು, ಹಗಲಿನ ಸಮಯದಲ್ಲಿ ನಿದ್ರೆಯನ್ನು ಮಿತಿಗೊಳಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News