ಥಲಸ್ಸೆಮಿಯಾ ರೋಗದ ಆರಂಭಿಕ ಪತ್ತೆಗಾಗಿ ಹೀಗೆ ಮಾಡಿ...!

ಥಲಸ್ಸೆಮಿಯಾ ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾಗಿದ್ದು. ದೇಹದಲ್ಲಿ ಸೂಕ್ತ ಸಂಖ್ಯೆಯ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿ ಉತ್ಪಾದನೆಯಾದ ರಕ್ತಕಣಗಳನ್ನು ಕೂಡ ಬೇಗನೇ ನಾಶವಾಗಿ ಹಿಮೋಗ್ಲೋಬಿನ್ ಮಟ್ಟ ಅತ್ಯಂತ ಕಡಿಮೆಯಾಗುತ್ತದೆ.

Written by - Manjunath N | Last Updated : May 9, 2024, 03:50 AM IST
  • ಜೀವಕೋಶಗಳಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿ ಮಾಡುವ ಡಿಎನ್‍ಎಯು ರೂಪಾಂತರದಿಂದ ಥಲಸ್ಸೆಮಿಯಾ ಉಂಟಾಗುವುದು
  • ಥಲಸ್ಸೇಮಿಯಾಕ್ಕೆ ಸಂಬಂಧಿಸಿದ ರೂಪಾಂತರಿ ಡಿಎನ್‍ಎಗಳು ತಂದೆ ತಾಯಿಗಳಿಂದ ಮಕ್ಕಳಿಗೆ ರವಾನೆಯಾಗುವುವು
  • ಒಂದು ವೇಳೆ ತಂದೆ ತಾಯಿಗಳಲ್ಲಿ ಒಬ್ಬರು ಥಲಸ್ಸೆಮಿಯಾ ವಾಹಕರಾಗಿದ್ದಲ್ಲಿ ಹುಟ್ಟುವ ಮಗು ಥಲಸ್ಸೆಮಿಯಾ ಮೈನರ್ ರೋಗಕ್ಕೆ ತುತ್ತಾಗಬಹುದು
ಥಲಸ್ಸೆಮಿಯಾ ರೋಗದ ಆರಂಭಿಕ ಪತ್ತೆಗಾಗಿ ಹೀಗೆ ಮಾಡಿ...! title=
ಸಾಂಧರ್ಭಿಕ ಚಿತ್ರ

ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾದ ಥಲಸ್ಸೆಮಿಯಾ ರೋಗದ ಆರಂಭಿಕ ಪತ್ತೆಗಾಗಿ ಹತ್ತಿರದ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸಾ ಮಾರ್ಗದರ್ಶನ ಹೊಂದಬೇಕು.

ಥಲಸ್ಸೆಮಿಯಾ ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾಗಿದ್ದು. ದೇಹದಲ್ಲಿ ಸೂಕ್ತ ಸಂಖ್ಯೆಯ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿ ಉತ್ಪಾದನೆಯಾದ ರಕ್ತಕಣಗಳನ್ನು ಕೂಡ ಬೇಗನೇ ನಾಶವಾಗಿ ಹಿಮೋಗ್ಲೋಬಿನ್ ಮಟ್ಟ ಅತ್ಯಂತ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಸುಸ್ತು, ಅಶಕ್ತತೆ, ದಮ್ಮು, ಕೆಮ್ಮು, ಕಂಡುಬರುತ್ತವೆ. ಅಲ್ಲದೇ ರಕ್ತ ಹೀನತೆ ಉಲ್ಬಣಗೊಂಡಾಗ ಅಂಗಾಂಗಗಳ ವೈಫಲ್ಯ ಉಂಟಾಗಿ ವ್ಯಕ್ತಿಯ ಮರಣಕ್ಕೂ ಕಾರಣವಾಗಬಹುದು ಈ ದಿಶೆಯಲ್ಲಿ ರೋಗವನ್ನು ಆರಂಭದಲ್ಲಿಯೇ ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ

ಪ್ರಪಂಚದ ಒಟ್ಟು ಜನಸಂಖ್ಯೆಯ ಪ್ರತಿಶತ 1.5 ರಷ್ಟು (ಸುಮಾರು 90 ಮಿಲಿಯನ್ ಜನರು) ಜನ ಥಲಸ್ಸೆಮಿಯಾ ವಾಹಕರಾಗಿರುವುರೆಂದು ಅಂದಾಜಿಸಲಾಗಿದೆ. ಈ ರೋಗದಿಂದ ಬಳಲುವ ಸುಮಾರು 60,000 ಮಕ್ಕಳು ಪ್ರತಿ ವರ್ಷ ಹುಟ್ಟುತ್ತಾರೆಂದು ಗುರುತಿಸಲಾಗಿದೆ. ಏಷಿಯಾ, ಚೀನಾ, ಮೆಡಿಟೇರಿಯನ್, ಗ್ರೀಸ್, ಟರ್ಕಿ, ಆಫ್ರಿಕಾ ಮತ್ತು ಅಮೇರಿಕದಲ್ಲಿಯೂ ರೋಗದ ತೀವ್ರತೆ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ.

ಇದನ್ನೂ ಓದಿ: KSRTC : ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ, ಮೇ 15ರಿಂದ ದಾಖಲಾತಿ ಪರಿಶೀಲನೆ

ರೋಗಕ್ಕೆ ಕಾರಣಗಳು:

ಜೀವಕೋಶಗಳಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿ ಮಾಡುವ ಡಿಎನ್‍ಎಯು ರೂಪಾಂತರದಿಂದ ಥಲಸ್ಸೆಮಿಯಾ ಉಂಟಾಗುವುದು, ಥಲಸ್ಸೇಮಿಯಾಕ್ಕೆ ಸಂಬಂಧಿಸಿದ ರೂಪಾಂತರಿ ಡಿಎನ್‍ಎಗಳು ತಂದೆ ತಾಯಿಗಳಿಂದ ಮಕ್ಕಳಿಗೆ ರವಾನೆಯಾಗುವುವು. ಒಂದು ವೇಳೆ ತಂದೆ ತಾಯಿಗಳಲ್ಲಿ ಒಬ್ಬರು ಥಲಸ್ಸೆಮಿಯಾ ವಾಹಕರಾಗಿದ್ದಲ್ಲಿ ಹುಟ್ಟುವ ಮಗು ಥಲಸ್ಸೆಮಿಯಾ ಮೈನರ್ ರೋಗಕ್ಕೆ ತುತ್ತಾಗಬಹುದು. ಇವರಲ್ಲಿ ಯಾವುದೇ ಲಕ್ಷಣಗಳು ಕಂಡುಬರದಿರಬಹುದು. ಆದರೆ ಅವರು ವಾಹಕರಾಗಿ ಮುಂದುವರೆಯುವರು, ಕೆಲವೊಮ್ಮೆ ಇವರು ಅತ್ಯಂತ ಕನಿಷ್ಟ ಲಕ್ಷಣಗಳನ್ನು ತೋರ್ಪಡಿಸಬಹುದು. ಅಕಸ್ಮಾತ್ ತಂದೆ ತಾಯಿಗಳಿಬ್ಬರೂ ವಾಹಕರಾಗಿದ್ದಲ್ಲಿ ಗಂಭೀರ ಸ್ವರೂಪದ ರೋಗದ ಸಾಧ್ಯತೆಗಳು ಹೆಚ್ಚು ಇರುತ್ತವೆ.

ರೋಗ ಪತ್ತೆಗೆ ವಿಧಾನ:

ಥಲಸ್ಸೆಮಿಯಾ ಕಾಯಿಲೆ ಪತ್ತೆಗೆ ರಕ್ತ ಪರೀಕ್ಷೆ ಮಾಡಬೇಕಾಗುತ್ತದೆ. ಅನಿಮಿಯಾ ಪ್ರಮಾಣಕ್ಕಾಗಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಗುತ್ತದೆ. ರಕ್ತಕಣಗಳ ಗಾತ್ರ, ಆಕಾರವನ್ನು ಪತ್ತೆ ಹಚ್ಚಲಾಗುತ್ತದೆ. ಕೆಂಪು ರಕ್ತಕಣಗಳು ಅಸಹಜ ಗಾತ್ರದಲ್ಲಿದ್ದರೆ, ಅದು ಥಲಸ್ಸೆಮಿಯಾ ಕಾಯಿಲೆ ಎಂಬುದು ಪತ್ತೆಯಾಗುತ್ತದೆ. ಮೂಳೆಗಳ ವೈಪರಿತ್ಯ ಖಚಿತಪಡಿಸಲು ಮುಖದ ಮೂಳೆಗಳ ಎಕ್ಸರೆ ಅವಶ್ಯವಾಗಿದೆ.

ಇದನ್ನೂ ಓದಿ: ಪೆನ್ ಡ್ರೈವ್ ಬಿಡುಗಡೆ ಹಿಂದೆ ಡಿಕೆಶಿ ಕೈವಾಡ ವಿಚಾರಪೆನ್ ಡ್ರೈವ್ ಬಿಡುಗಡೆ ಹಿಂದೆ ಡಿಕೆಶಿ ಕೈವಾಡ ವಿಚಾರ

ಉಪಚಾರ:

ಥಲಸ್ಸೆಮಿಯಾ ಕಾಯಿಲೆಗೆ ತುತ್ತಾದವರು ಅಪೌಷ್ಟಿಕತೆ ಸಹಜವಾಗುವುದರಿಂದ ಸತ್ವಯುತ, ಶಕ್ತಿಯುತ ಸಮತೋಲನ ಆಹಾರ ಸೇವೆನೆ ಅವಶ್ಯವಾಗಿದೆ. ಇವರು ಹಂದಿ ಮಾಂಸ, ಗೋ ಮಾಂಸ, ಬೀನ್ಸ್ ಕಡಲೆಕಾಯಿ, ಎಣ್ಣೆ, ಸೋಯ ಮೊಸರು ಸೇವಿಸಬಾರದು. ಥಲಸ್ಸೆಮಿಯಾದಲ್ಲಿ ಕ್ಯಾಲ್ಸಿಯಮ್ ಕೊರತೆ ಕಾಣಿಸುವುದು ಇದರ ನಿವಾರಣೆಗಾಗಿ ಹಾಲು ಸಾಕಷ್ಟು ಸೇವಿಸಬೇಕು. ಚಿಕಿತ್ಸಾ ವಿಧಾನದಲ್ಲಿ ರಾಸಾಯನಿಕ ವಸ್ತುಗಳನ್ನು ನೀಡಿದಾಗ ಅವು ದೇಹದಲ್ಲಿಯ ಕಬ್ಬಿಣಾಂಶಗಳ ಜೊತೆಗೆ ಕೂಡಿ ಅವನ್ನು ದೇಹದಿಂದ ಹೊರಗೆ ಹಾಕುವವು ಇದರಿಂದ ದೇಹದಲ್ಲಿಯ ಕಬ್ಬಿಣಾಂಶದ ಪ್ರಮಾಣ ಕಡಿಮೆಯಾಗುವುದು. ರಕ್ತ ಪೂರಣೆ, ಐರನ್ ಚೆಲೇಶನ್ ಚಿಕಿತ್ಸೆ ಪಡೆಯುವವರಿಗೆ ಪೋಲಿಕ್ ಆಮ್ಲ ಪೂರೈಕೆ ಅವಶ್ಯ ಇದು ಕೆಂಪು ರಕ್ತಕಣಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

 

Trending News