ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಬೀಜದ ನೀರನ್ನು ಕುಡಿದರೆ ಒಂದೇ ವಾರದಲ್ಲಿ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!

Coriander Water Benefits For Health: ಕೊತ್ತಂಬರಿ ನೀರಿನ ಆರೋಗ್ಯ ಪ್ರಯೋಜನದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಸಣ್ಣಪುಟ್ಣ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಹಿಡಿದು ದೇಹದ ಬೊಜ್ಜನ್ನು ಕರಗಿಸುವವರೆಗೆ ಈ ನೀರು ಪ್ರಯೋಜನ ನೀಡಲಿದೆ.

Written by - Bhavishya Shetty | Last Updated : Oct 2, 2023, 08:20 PM IST
    • ಕೊತ್ತಂಬರಿ ನೀರಿನ ಆರೋಗ್ಯ ಪ್ರಯೋಜನದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ
    • ಕೊತ್ತಂಬರಿ ಸೊಪ್ಪಷ್ಟೇ ಅಲ್ಲ, ಕೊತ್ತಂಬರಿ ಬೀಜ ಕೂಡ ಆರೋಗ್ಯದ ಗಣಿ ಎಂದೇ ಹೇಳಬಹುದು.
    • ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ನೀರನ್ನು ಕುಡಿದರೆ ಸಿಗುವ ಪ್ರಯೋಜನ
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಬೀಜದ ನೀರನ್ನು ಕುಡಿದರೆ ಒಂದೇ ವಾರದಲ್ಲಿ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!   title=
Coriander Water Benefits For Health

Coriander Water Benefits For Health: ಕೊತ್ತಂಬರಿ ಸೊಪ್ಪನ್ನು ಮಸಾಲೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದು ಆಹಾರ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ದೃಷ್ಟಿಯಿಂದ ಅತೀ ಪ್ರಯೋಜನಕಾರಿ, ಇನ್ನು ಕೊತ್ತಂಬರಿ ಸೊಪ್ಪಷ್ಟೇ ಅಲ್ಲ, ಕೊತ್ತಂಬರಿ ಬೀಜ ಕೂಡ ಆರೋಗ್ಯದ ಗಣಿ ಎಂದೇ ಹೇಳಬಹುದು.

ಇಂದು ನಾವು ಕೊತ್ತಂಬರಿ ನೀರಿನ ಆರೋಗ್ಯ ಪ್ರಯೋಜನದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಸಣ್ಣಪುಟ್ಣ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಹಿಡಿದು ದೇಹದ ಬೊಜ್ಜನ್ನು ಕರಗಿಸುವವರೆಗೆ ಈ ನೀರು ಪ್ರಯೋಜನ ನೀಡಲಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್’ಗೆ ಬೌಲಿಂಗ್ ಮಾಡೋದು ಭಾರೀ ಕಷ್ಟ! ಪಾಕ್ ಕ್ರಿಕೆಟಿಗನ ಹೇಳಿಕೆ ವೈರಲ್

ಪ್ರತಿದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ನೀರನ್ನು ಕುಡಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಕೊತ್ತಂಬರಿಯು ಒಂದು ಸೂಪರ್‌ಫುಡ್ ಆಗಿದ್ದು ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಕೊತ್ತಂಬರಿ ಸೊಪ್ಪು ಮತ್ತು ಬೀಜಗಳೆರಡೂ ಪ್ರಯೋಜನಕಾರಿಯೇ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುವುದಲ್ಲದೆ, ಬೊಜ್ಜಿನ ಸಮಸ್ಯೆ ಶೀಘ್ರವೇ ನಿವಾರಣೆಯಾಗುತ್ತದೆ.

ಅಸಿಡಿಟಿ ಸಮಸ್ಯೆ ಇರುವವರು ಸಹ ಕೊತ್ತಂಬರಿ ಬೀಜದ ನೀರನ್ನು ಕುಡಿಯಬಹುದು. ಈ ಬೀಜಗಳಲ್ಲಿರುವ ಗುಣಲಕ್ಷಣಗಳು ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲದೆ, ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಕೊತ್ತಂಬರಿ ನೀರನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕೊತ್ತಂಬರಿ ಬೀಜದ ನೀರನ್ನು ಕುಡಿದರೆ ಅದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಇದು ಒಂದು ಪ್ರಮುಖ ವಿಧಾನವಾಗಿದೆ. ಕೊತ್ತಂಬರಿ ಬೀಜಗಳು ಮತ್ತು ಎಲೆಗಳು ಫೈಬರ್ನಲ್ಲಿ ಸಮೃದ್ಧವಾಗಿವೆ. ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದಂತೆ ಭಾಸವಾಗುತ್ತದೆ.

ಕೊತ್ತಂಬರಿ ನೀರು ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿದರೆ, ಮುಖದಲ್ಲಿರುವ ಮೊಡವೆ ಮತ್ತು ಮೊಡವೆ ಕಲೆಗಳನ್ನು ತೆಗೆದುಹಾಕಬಹುದು.

ಇದನ್ನೂ ಓದಿ: ಏಕದಿನ ವಿಶ್ವಕಪ್ ಕ್ರಿಕೆಟ್’ನಲ್ಲಿ ಒಂದೇ ಒಂದು ಬಾರಿಯೂ ಸೋಲು ಕಾಣದ ತಂಡ ಯಾವುದು ಗೊತ್ತಾ?

(ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News