ಎಚ್ಚರ ..! ಹೆಚ್ಚು ನಿದ್ದೆ ಮಾಡಿದರೂ ಎದುರಾಗುತ್ತದೆ ಈ ಸಮಸ್ಯೆಗಳು

ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡಿದರೆ ಅಪಾಯ ಖಂಡಿತಾ . ಅಗತ್ಯಕ್ಕಿಂತ ಹೆಚ್ಚು  ಅವಧಿ ನಿದ್ದೆ ಮಾಡಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. 

Written by - Ranjitha R K | Last Updated : Feb 24, 2022, 10:16 AM IST
  • ಹೆಚ್ಚು ಹೊತ್ತು ಮಲಗುವುದನ್ನು ತಪ್ಪಿಸಿ
  • ಆರೋಗ್ಯಕ್ಕೆ ಅನೇಕ ಹಾನಿಗಳು ಉಂಟಾಗುತ್ತವೆ
  • ರೋಗಗಳ ಅಪಾಯವನ್ನು ಎದುರಿಸಬೇಕಾಗುತ್ತದೆ
ಎಚ್ಚರ ..! ಹೆಚ್ಚು ನಿದ್ದೆ ಮಾಡಿದರೂ ಎದುರಾಗುತ್ತದೆ ಈ ಸಮಸ್ಯೆಗಳು   title=
ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡಿದರೆ ಅಪಾಯ ಖಂಡಿತಾ (file photo)

ಬೆಂಗಳೂರು : ಉತ್ತಮ ಮತ್ತು ಸಂಪೂರ್ಣ ನಿದ್ರೆಯನ್ನು ಪಡೆಯುವುದು ಆರೋಗ್ಯಕ್ಕೆ ಬಹಳ ಮುಖ್ಯ (Sleeping time). ಇದು ದಿನವಿಡೀ ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡಿದರೆ ಅಪಾಯ ಖಂಡಿತಾ (Side Effects Of Oversleeping). ಅಗತ್ಯಕ್ಕಿಂತ ಹೆಚ್ಚು  ಅವಧಿ ನಿದ್ದೆ ಮಾಡಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. 

ಹೆಚ್ಚು ನಿದ್ರಿಸಿದರೆ ಎದುರಾಗುವ 5 ದೊಡ್ಡ ಅಡ್ಡ ಪರಿಣಾಮಗಳು :
1. ತಲೆನೋವು 
ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಸಿರೊಟೋನಿನ್ ಹಾರ್ಮೋನ್ ನಮ್ಮ ನಿದ್ರೆ ಮತ್ತು ಎಚ್ಚರದ ಮಾದರಿಗಳನ್ನು ನಿಯಂತ್ರಿಸುತ್ತದೆ. ನೀವು ಹೆಚ್ಚು ನಿದ್ರೆ ಮಾಡಿದರೆ, ಅದು ಸಿರೊಟೋನಿನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನ್ಯುರೋಟ್ರಾನ್ಸ್ ಮೀಟರ್ ಅನ್ನು ಅಡ್ಡಿಪಡಿಸುತ್ತದೆ. ಇದರಿಂದಾಗಿ ತಲೆನೋವು ಕಾಣಿಸಿಕೊಳ್ಳಬಹುದು (Headache).  ಮತ್ತೊಂದೆಡೆ, ದೀರ್ಘ ಸಮಯದವರೆಗೆ ಮಲಗಿದಾಗ, ಇದ್ದಕ್ಕಿದ್ದಂತೆ ತುಂಬಾ ಹಸಿವು ಮತ್ತು ಬಾಯಾರಿಕೆಯ ಅನುಭವವಾಗುತ್ತದೆ. ಇದು ಕೂಡಾ ತಲೆನೋವಿಗೆ ಕಾರಣವಾಗುತ್ತದೆ.

ಇದನ್ನೂ ಓದಿ : ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗಿ ಬಿಡುತ್ತದೆ

2. ಬೆನ್ನು ನೋವು
 ದೀರ್ಘಕಾಲ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಬೆನ್ನುನೋವಿನ ಸಮಸ್ಯೆಯಿಂದ ಆಗಾಗ  ತೊಂದರೆಗೊಳಗಾಗುತ್ತೀರಿ. ಹಾಸಿಗೆಯ ಕಳಪೆ ಗುಣಮಟ್ಟವೂ ಇದಕ್ಕೆ ಕಾರಣವಾಗಿರಬಹುದು.  ದೀರ್ಘಕಾಲ ಮಲಗಿದರೆ, ಅದು ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು  ಬೆನ್ನುನೋವಿಗೆ (Bach pain)ಕಾರಣವಾಗುತ್ತದೆ.

3. ಖಿನ್ನತೆ
ದೀರ್ಘಕಾಲ ನಿದ್ರಿಸುವುದು ಕೂಡ ಖಿನ್ನತೆಯ (Depression)ಲಕ್ಷಣವಾಗಿರಬಹುದು. ನೀವು ದೀರ್ಘಕಾಲ ನಿದ್ದೆ ಮಾಡುತ್ತಿದ್ದರೆ, ಅದು ನಿಮ್ಮ ಖಿನ್ನತೆಯನ್ನು ಹೆಚ್ಚಿಸುತ್ತದೆ. ಎಲ್ಲಾ ಸಮಯದಲ್ಲೂ ಮಾನಸಿಕ ಒತ್ತಡವನ್ನು ಅನುಭವಿಸುವಂತಾಗುತ್ತದೆ. ಇದು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳು ಮಧ್ಯಾಹ್ನದ ಊಟಕ್ಕೆ ಈ ವಸ್ತುಗಳನ್ನು ತಿನ್ನಬೇಕು

4. ಅತಿಯಾದ ಆಯಾಸ 
ದೀರ್ಘಕಾಲ ಮಲಗಿದರೆ ದಿನವಿಡೀ ದಣಿದಿರುವಂತೆ ಭಾಸವಾಗುತ್ತದೆ. ಹೆಚ್ಚು ಸಮಯ ಮಲಗಿದ ನಂತರವೂ, ಅನೇಕ ಬಾರಿ ದಿನವಿಡೀ ನಿದ್ದೆ ಮಾಡಬೇಕು ಎಂದೆನಿಸುತ್ತದೆ.  ಇದು ಹೆಚ್ಚು ನಿದ್ದೆ ಮಾಡುವುದರಿಂದ ಉಂಟಾಗುವ ಅಡ್ಡ ಪರಿಣಾಮ. ಬಾಡಿ ಕ್ಲಾಕ್ಹಳಿ ತಪ್ಪಿದಾಗ ಈ ಸಮಸ್ಯೆ ಉಂಟಾಗುತ್ತದೆ. ಅತಿಯಾದ ವಿಶ್ರಾಂತಿಯಿಂದಾಗಿ, ಸ್ನಾಯುಗಳು ಮತ್ತು ನರಗಳು ಗಟ್ಟಿಯಾಗುತ್ತವೆ. ಇದರಿಂದ ದಣಿವಾಗುತ್ತದೆ. 

5. ಮಧುಮೇಹದ ಅಪಾಯ
ಅತಿಯಾಗಿ ನಿದ್ದೆ ಮಾಡುವುದರಿಂದ ದೇಹದಲ್ಲಿನ ಹಾರ್ಮೋನ್‌ಗಳ ಸಮತೋಲನವೂ ಹಾಳಾಗುತ್ತದೆ. ಇನ್ಸುಲಿನ್ ಅನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ  ಇದರಿಂದ ಹೆಚ್ಚು ಪರಿಣಾಮ ಬೀರುತ್ತವೆ. ಅತಿಯಾದ ದಣಿವಿನಿಂದಾಗಿ, ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗಿ, ಜಂಕ್ ಫುಡ್ ಅಥವಾ ಹೆಚ್ಚಿನ ಕ್ಯಾಲೋರಿಗಳನ್ನು ತಿನ್ನಲು ಪ್ರಾರಂಭಿಸುತ್ತೀರಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (Blood sugar level) ಸಹ ಹೆಚ್ಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News